Maharaja Trophy: ಫೈನಲ್‌ನಲ್ಲಿ ಬೆಂಗಳೂರು-ಮೈಸೂರು ಮುಖಾಮುಖಿ
ಮಹಾರಾಜ ಟ್ರೋಫಿ 2024ರ ಪಂದ್ಯಾವಳಿ ಕೊನೆಯ ಹಂತಕ್ಕೆ ಬಂದಿದೆ. ಇಂದು (ಭಾನುವಾರ) ನಡೆಯುವ ಫೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಮೈಸೂರು ವಾರಿಯರ್ಸ್ ಪ್ರಶಸ್ತಿ ಗೆಲ್ಲಲು ರೋಚಕ ಹೋರಾಟ ನಡೆಸಲಿವೆ. ಲೀಗ ಹಂತದಲ್ಲಿ ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿವೆ, ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಅತ್ಯುತ್ತಮ ಆಟಗಾರರನ್ನು ಹೊಂದಿದ್ದು, ಫೈನಲ್‌ನಲ್ಲಿ ರೋಚಕ ಹಣಾಹಣಿಯನ್ನು ನಿರೀಕ್ಷೆ ಮಾಡಲಾಗಿದೆ.
ಶನಿವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 9 ರನ್‌ಗಳಿಂದ ಗೆಲುವು ಸಾಧಿಸುವ ಮೂಲಕ ಫೈನಲ್ ತಲುಪಿದೆ. ಸತತ ಎರಡನೇ ಬಾರಿ ಮೈಸೂರು ವಾರಿಯರ್ಸ್ ಫೈನಲ್ ತಲುಪಿದ್ದು ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.30ಕ್ಕೆ ಫೈನಲ್ ಪಂದ್ಯ ಆರಂಭವಾಗಲಿದೆ. ಲೀಗ್ ಹಂತದಲ್ಲಿ ಎರಡು ಬಾರಿ ಬೆಂಗಳೂರು ಬ್ಲಾಸ್ಟರ್ಸ್ ಮೈಸೂರು ವಾರಿಯರ್ಸ್ ಮುಖಾಮುಖಿಯಾಗಿವೆ. ಎರಡೂ ಪಂದ್ಯಗಳಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಗೆಲುವು ಸಾಧಿಸಿರುವುದು ತಂಡದ ವಿಶ್ವಾಸವನ್ನು ಹೆಚ್ಚಿಸಿದೆ. ಅಂಕಪಟ್ಟಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮೊದಲ ಸ್ಥಾನದಲ್ಲಿದ್ದರೆ, ಮೈಸೂರು ವಾರಿಯರ್ಸ್ ಎರಡನೇ ಸ್ಥಾನದಲ್ಲಿದೆ.
ಎರಡು ತಂಡಗಳ ವಿವರ
ಮೈಸೂರು ವಾರಿಯರ್ಸ್
ಎಸ್‌ಯು ಕಾರ್ತಿಕ್, ಕೋದಂಡ ಅಜಿತ್ ಕಾರ್ತಿಕ್, ಕರುಣ್ ನಾಯರ್(ನಾಯಕ), ಶ್ರೀನಿವಾಸ್ ಶರತ್, ಸುಮಿತ್ ಕುಮಾರ್ (ವಿಕೆಟ್ ಕೀಪರ್), ಮನೋಜ್ ಭಾಂಡಗೆ, ಜಗದೀಶ ಸುಚಿತ್, ಹರ್ಷಿಲ್ ಧರ್ಮನಿ, ಕೃಷ್ಣಪ್ಪ ಗೌತಮ್, ವಿದ್ಯಾಧರ್ ಪಾಟೀಲ್, ಧನುಷ್ ಗೌಡ, ಪ್ರಸಿದ್ಧ್ ಕೃಷ್ಣ, ಮುರಳೀಧರ ವೆಂಕಟೇಶ್, ಕಿಶನ್ ಬೆದರೆ, ಸಾಗರ್ ಗೌತಮ್, ಗೌತಮ್ ಮಿಶ್ರಾ, ಇಜೆ ಜಾಸ್ಪರ್, ದೀಪಕ್ ದೇವಾಡಿಗ, ಸಮಿತ್ ದ್ರಾವಿಡ್, ಸ್ಮಯನ್ ಶ್ರೀವಾಸ್ತವ, ಸರ್ಫರಾಜ್ ಅಶ್ರಫ್.
ಬೆಂಗಳೂರು ಬ್ಲಾಸ್ಟರ್ಸ್
ಎಲ್ ಆರ್ ಚೇತನ್, ಮಯಾಂಕ್ ಅಗರ್ವಾಲ್ (ನಾಯಕ), ಭುವನ್ ರಾಜು, ಸೂರಜ್ ಅಹುಜಾ(ವಿಕೆಟ್ ಕೀಪರ್), ಶುಭಾಂಗ್ ಹೆಗ್ಡೆ, ಅನಿರುದ್ಧ ಜೋಶಿ, ಕ್ರಾಂತಿ ಕುಮಾರ್, ನವೀನ್ ಎಂಜಿ, ಮೊಹ್ಸಿನ್ ಖಾನ್, ಲವಿಶ್ ಕೌಶಲ್, ಸಂತೋಕ್ ಸಿಂಗ್, ದೇಗಾ ನಿಶ್ಚಲ್, ಪ್ರತೀಕ್ ಜೈನ್, ಶಿವಕುಮಾರ್ ರಕ್ಷಿತ್, ಆದಿತ್ಯ ಗೋಯಲ್, ವರುಣ್ ರಾವ್ ಟಿಎನ್, ನಿರಂಜನ್ ನಾಯ್ಕ್, ವರುಣ್ ಕುಮಾರ್ ಹೆಚ್ ಸಿ, ಶಿಖರ್ ಶೆಟ್ಟಿ, ಭೀಮ್ ರಾವ್ ನವಲೆ.












Click it and Unblock the Notifications