ಭಾರತೀಯ ಹಾಕಿ ಆಟಗಾರನ ಮೇಲೆ ಸ್ನೇಹಿತನನ್ನು ಕೊಂದ ಆರೋಪ
ಭುವನೇಶ್ವರ, ಮೇ 27: 28 ವರ್ಷದ ಯುವಕ ಆನಂದ್ ಟೊಪ್ಪೊ ಎಂಬಾತ ಭುವನೇಶ್ವರದ ಫ್ಲಾಟ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಆತನ ಪೋಷಕರು ಆನಂದ್ ಸ್ನೇಹಿತನಾದ ಭಾರತ ತಂಡದ ಒಲಿಂಪಿಕ್ ಪದಕ ವಿಜೇತ ಹಾಕಿ ತಂಡದ ಆಟಗಾರ ಬೀರೇಂದ್ರ ಲಕ್ರಾ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ಭಾನುವಾರ ಮಾಧ್ಯಮ ಗೋಷ್ಠಿ ಕರೆದಿದ್ದ ಆನಂದ್ ತಂದೆ ಬಂಧನ್ ಟೊಪ್ಪೊ, ತಾಯಿ ಆಶ್ರಿತಾ ಹಾಗೂ ಇಬ್ಬರೂ ಚಿಕ್ಕಪ್ಪಂದಿರು ಪೊಲೀಸರು ಮಗನ ಸಾವಿನ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆನಂದ್ ಫೆಬ್ರವರಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆನಂದ್ಗೆ ಶವವಾಗಿ ಪತ್ತೆಯಾಗುವ 10 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಹೆಂಡತಿ ಜೊತೆ ಬೇರೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇದ್ದಕ್ಕಿಂದ್ದಂತೆ ನೇಣಿಗೆ ಶರಣಾಗಿದ್ದರು.
ತಮ್ಮ ಮಗ ಆನಂದ್ ಸಾವಿನ ವಿಚಾರವನ್ನು ಬೀರೇಂದ್ರ ತಮಗೆ ತಿಳಿಸಿದ್ದರು. ಆದರೆ ಅವರು ತಮಗೆ ಯಾವುದೇ ವಿವಿರ ನೀಡಲಿಲ್ಲ. ಪಾಟಿಯಾದ ಇನ್ಫೋಸಿಟಿಯಲ್ಲಿರುವ ಆಯುಷ್ ರೇಡಿಯಂನ ಫ್ಲಾಟ್ ಸಂಖ್ಯೆ 401 ರಲ್ಲಿ ಆನಂದ್ ಬೆಳಗ್ಗೆ 10 ಗಂಟೆ ಸುಮಾರಿಗೆ ಶವವಾಗಿ ಪತ್ತೆಯಾಗಿದ್ದ. ನಾವು ಅಲ್ಲಿಗೆ ತೆರಳಿದ್ದ ಸಮಯದಲ್ಲಿ ಕೇವಲ ಬೀರೇಂದ್ರ ಮತ್ತು ಮಂಜೀತ್ ಟೆಟೆ ಒಬ್ಬ ಹುಡುಗಿ ಮಾತ್ರ ಸ್ಥಳದಲ್ಲಿದ್ದರು ಎಂದು ಮೃತ ಆನಂದ್ ತಂದೆ ಮಾಧ್ಯಮಕ್ಕೆ ತಿಳಿಸಿದ್ದರು.
ಬಂಧನ್ ಟೊಪ್ಪೆ ತಕ್ಷಣ ಮಗನ ಸಾವಿನ ಬಗ್ಗೆ ದೂರು ನೀಡಲು ರೂರ್ಕೆಲಾದಿಂದ ಭುವನೇಶ್ವರಕ್ಕೆ ಧಾವಿಸಿದ್ದಾರೆ. ಆದರೆ ಪೊಲೀಸರು ಅವರ ದೂರನ್ನು ಸ್ವೀಕರಿಸಲು ನಿರಾಕರಿಸಿದ್ದರು ಮತ್ತು ಮರುದಿನ AIIMSಗೆ ಶವಪರೀಕ್ಷೆಗಾಗಿ ಅವರ ಮಗನ ದೇಹವನ್ನು ಕಳುಹಿಸಿದರು.

ಕೊಲೆ ತನಿಖೆಗೆ ಪೊಲೀಸರ ಅಸಹಕಾರ
" ನನ್ನ ಮಗ ನೇಣಿಗೆ ಶರಣಾದ ವೇಳೆ ಮಂಜೀತ್ ಬಾತ್ ರೂಮಿನಲ್ಲಿದ್ದರು ಮತ್ತು ಬೀರೇಂದ್ರ ಡ್ರಾಯಿಂಗ್ ರೂಮಿನಲ್ಲಿದ್ದೆ ಎಂದು ನನಗೆ ತಿಳಿಸಿದ್ದಾರೆ. ಆ ಹುಡುಗಿ ಮೊದಲು ಆನಂದ್ ನೇಣು ಬಿಗಿದುಕೊಂಡಿರುವುದನ್ನು ನೋಡಿ, ಆತನನ್ನು ಕೆಳಗಿಳಿಸಿದೆ ಎಂದು ತಿಳಿಸಿದ್ದಾಳೆ. ಆದರೆ ಈ ಕಥೆ ನನಗೆ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಈ ಕುರಿತು ಭುವನೇಶ್ವರದ ಕಮಿಷನರ್ ಮತ್ತು ಡಿಸಿಪಿ ಅವರಿಗೆ ವಿವರವಾದ ತನಿಖೆಯನ್ನು ಮಾಡಬೇಕೆಂದು ಮಾಡಿದ ಸಾಕಷ್ಟು ಮನವಿಗಳನ್ನು ತಿರಸ್ಕರಿಸಲಾಗಿದೆ. ಬೀರೇಂದ್ರ ಡೆಪ್ಯುಟಿ ಎಸ್‌ಪಿ ಆಗಿದ್ದಾರೆ. ಅಲ್ಲದೆ ಹಾಕಿಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈ ಕಾರಣದಿಂದ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣದ ಬಣ್ಣ ನೀಡಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ತೋರುತ್ತಿದೆ" ಎಂದು ಬಂಧನ್ ಆರೋಪಿಸಿದ್ದಾರೆ.

ಎಚ್ಚರಿಕೆ ನೀಡಿದ್ದ ಲಕ್ರಾ
ಆನಂದ್ ಮಗನ ಸಾವಿಗೂ ಮುನ್ನ ಬೀರೇಂದ್ರ ಲಕ್ರಾ ಹಲವು ಬಾರಿ ಆನಂದ್ ಮನೆಗೆ ಬಂದು 'ನಿಮ್ಮ ಮಗನ ಕೆಲಸಗಳು ಸರಿಯಿಲ್ಲ. ನಿಲ್ಲಿಸಲು ಹೇಳಿ' ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಯಾವ ವಿಚಾರ ಎಂಬುದನ್ನು ಮಾತ್ರ ತಿಳಿಸಿರಲಿಲ್ಲ. ಆದಾದ ಕೆಲವು ದಿನಗಳಲ್ಲಿ ತನ್ನ ಮಗನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಹೋಗಿ ನೀಡಿದರೆ ಬೀರೇಂದ್ರ ಲಕ್ರಾ ಮತ್ತು ಆತನ ಜೊತೆಗೆ ಮಂಜೀತ್ ಟೆಟೆ ಮಾತ್ರ ಇದ್ದರು. ತನ್ನ ಮಗನ ವಿರುದ್ಧ ಬೆದರಿಕೆ ಹಾಕಿದ್ದ ಲಕ್ರಾಗೂ, ಈ ಸಾವಿಗೂ ಸಂಬಂಧವಿದೆ" ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಷ ಹಾಕಿ ಕೊಲೆ ಶಂಕೆ
ಆನಂದ್, ಬೀರೇಂದ್ರ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಕಳೆದ ವರ್ಷ ಆ ಪ್ಲಾಟ್‌ಅನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ಕಳೆದ 8 ತಿಂಗಳುಗಳಿಂದಲೂ ಬೀರೇಂದ್ರ ಅದನ್ನು ಉಪಯೋಗಿಸುತ್ತಿದ್ದರು. ಆನಂದ್ ರೋರ್ಕೆಲಾದಲ್ಲಿ ಇದ್ದಿದ್ದರಿಂದ ಆ ಫ್ಲಾಟ್ ಅನ್ನು ಬೀರೇಂದ್ರ ಉಪಯೋಗಿಸುತ್ತಿದ್ದರು. ಆದರೆ ಆತನ ಜೊತೆಗೆ ಆ ಹುಡುಗಿ ಇದ್ದದ್ದು ನನಗೆ ಗೊತ್ತಿರಲಿಲ್ಲ. ಇದೀಗ ನನ್ನ ಮಗನ ಸಾವನ್ನು ಗಮನಿಸಿದರೆ, ಆತನಿಗೆ ವಿಷ ಉಣಿಸಿ ನಂತರ ನೇಣಿಗೆ ಹಾಕಿದ್ದಾರೆ. ಇದೆಲ್ಲಾ ಪೂರ್ವ ಯೋಜಿತ ಕೊಲೆ, ಸಾಕ್ಷಿಯನ್ನು ನಾಶ ಮಾಡಿದ್ದಾರೆ" ಎಂದು ಬಂಧನ್ ಶಂಕಿಸಿದ್ದಾರೆ. ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಕಳೆ ವರ್ಷ ನಿವೃತ್ತಿ ಹೊಂದಿದ್ದ ಲಕ್ರಾ
31 ವರ್ಷದ ಬೀರೇಂದ್ರ ಲಕ್ರಾ 2021ರ ಟೋಕಿಯೋ ಒಲಿಂಪಿಕ್ಸ್ ನಂತರ, ತಮ್ಮ ಅಂತಾರಾಷ್ಟ್ರೀಯ ಹಾಕಿ ವೃತ್ತಿ ಬದುಕಿಗೆ ನಿವೃತ್ತಿ ಹೇಳಿದ್ದರು. ಭಾರತ 4 ದಶಕಗಳ ಬಳಿಕ ಚಿನ್ನ ಗೆದ್ದ ಭಾರತ ತಂಡದ ಭಾಗವಾಗಿದ್ದರು. ನಿವೃತ್ತಿ ಹೊಂದಿದೆ. ನಿವೃತ್ತಿ ಹೊಂದುವ ಮುನ್ನ ಅವರು ಭಾರತದ ಪರ 201 ಪಂದ್ಯಗಳನ್ನಾಡಿದ್ದಾರೆ. ಲಕ್ರಾ 2014 ಮತ್ತು 2018ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಹಾಗೂ ಕಂಚು ಗೆದ್ದ ಭಾರತ ತಂಡದ ಭಾಗವಾಗಿದ್ದರು.












Click it and Unblock the Notifications