MS Dhoni: ಐಪಿಎಲ್ 2024ರಲ್ಲಿ ಆಡುವ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಎಂಎಸ್‌ ಧೋನಿ

ಭಾರತ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಜನಪ್ರಿಯತೆ ಮಾತ್ರ ಹೆಚ್ಚಾಗುತ್ತಲೇ ಇದೆ, 2023ರ ಐಪಿಎಲ್‌ನಲ್ಲಿ ಧೋನಿ ಜನಪ್ರಿಯತೆ ಎಷ್ಟಿದೆ ಎನ್ನುವುದನ್ನು ಇಡೀ ಜಗತ್ತು ನೋಡಿದೆ. ಯಾವುದೇ ಮೈದಾನದಲ್ಲಿ ಧೋನಿ ಆಡಿದರೂ ಅವರಿಗೆ ಜನ ಅಪಾರ ಬೆಂಬಲ ನೀಡಿದ್ದರು.

2023ರ ಐಪಿಎಲ್‌ ನಂತರ ಧೋನಿ ನಿವೃತ್ತಿಯಾಗುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು, ಅಲ್ಲದೆ 42 ವರ್ಷದ ಧೋನಿ ಮೊಣಕಾಲು ನೋವಿನ ನಡುವೆಯೂ ಆಡುವ ಮೂಲಕ ತಂಡವನ್ನು ಚಾಂಪಿಯನ್ ಮಾಡಿದ್ದರು. ಐಪಿಎಲ್ ಬಳಿಕ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ms-dhoni-gives-fitness-update

ನಿವೃತ್ತಿ ಬಗ್ಗೆ ಇದುವರೆಗೂ ಯಾವ ಗುಟ್ಟೂ ಬಿಟ್ಟುಕೊಡದ ಧೋನಿ ಈಗ ನಿವೃತ್ತಿ ಬಗ್ಗೆ ಮಾತನಾಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಮುಂದಿನ ಐಪಿಎಲ್‌ನಲ್ಲಿ ಧೋನಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಬೆಂಗಳೂರಿನಲ್ಲಿ ಧೋನಿ ಹೇಳಿದ್ದೇನು?

ಅಕ್ಟೋಬರ್ 26, ಗುರುವಾರದಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧೋನಿ ಭಾಗವಹಿಸಿದ್ದರು ಮತ್ತು ನವೆಂಬರ್ ವೇಳೆಗೆ ಅವರು ಚೇತರಿಸಿಕೊಳ್ಳುತ್ತೇನೆ ಎಂದು ವೈದ್ಯರು ಹೇಳಿರುವುದಾಗಿ ಧೋನಿ ದೃಢಪಡಿಸಿದರು. ವಿಕೆಟ್‌ಕೀಪರ್ ಬ್ಯಾಟರ್ ತನ್ನ ಮೊಣಕಾಲು ಗಾಯ ಚೇತರಿಸಿಕೊಳ್ಳುತ್ತಿದ್ದು ಪುನರ್ವಸತಿ ಹಂತದ ಮೂಲಕ ಹೋಗುತ್ತಿರುವುದಾಗಿ ಹೇಳಿದರು.

ಸಂದರ್ಶಕರು ಧೋನಿ ಅವರನನ್ನು ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ ಎಂದು ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಮಾತ್ರ ನಿವೃತ್ತಿಯಾಗಿದ್ದೇನೆ ಎಂದು ನೆನಪಿಸಿದರು. ಎಂಎಸ್ ಧೋನಿ ಹೀಗೆ ಹೇಳುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ತಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿದರು.

"ಮೊಣಕಾಲು ನೋವಿನಿಂದ ಚೇತರಿಸಿಕೊಂಡಿದ್ದೇನೆ, ರಿಹ್ಯಾಬ್ ಪ್ಯಾಚ್ ಮೂಲಕ ಹೋಗುತ್ತಿದೆ, ನವೆಂಬರ್ ವೇಳೆಗೆ ನೀವು ಹೆಚ್ಚು ಉತ್ತಮವಾಗುತ್ತೀರಿ ಎಂದು ವೈದ್ಯರು ನನಗೆ ಹೇಳಿದರು. ಆದರೆ ದೈನಂದಿನ ದಿನಚರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ" ಎಂದು ಧೋನಿ ಹೇಳಿದರು.

ಸಿಎಸ್‌ಕೆಯನ್ನು ಐದನೇ ಪ್ರಶಸ್ತಿಗೆ ಮುನ್ನಡೆಸಿದ ನಂತರ ಅವರ ಭವಿಷ್ಯದ ಬಗ್ಗೆ ಮೌನವನ್ನು ಮುರಿದು ಐಪಿಎಲ್ 2024 ರಲ್ಲಿ ಮರಳುವುದಾಗಿ ಧೋನಿ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದರು.

ಪ್ರಶಸ್ತಿ ಗೆದ್ದ ನಂತರ ಹೇಳಿದ್ದೇನು?

"ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯ. ನನಗೆ ಸುಲಭವಾದ ವಿಷಯವೆಂದರೆ ಧನ್ಯವಾದ ಹೇಳುವುದು. ಆದರೆ ಸಿಎಸ್‌ಕೆ ಅಭಿಮಾನಿಗಳಿಂದ ನಾನು ಪಡೆದಿರುವ ಪ್ರೀತಿಯ ಪ್ರಮಾಣ, ಅವರಿಗೆ (ನನ್ನನ್ನು ನೋಡಿ) ಇನ್ನೂ ಒಂದು ಸೀಸನ್‌ನಲ್ಲಿ ಆಡಲು ಇದು ಉಡುಗೊರೆಯಾಗಿದೆ" ಎಂದು ಮೇನಲ್ಲಿ ಸಿಎಸ್‌ಕೆ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿದ ನಂತರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಧೋನಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+