ಬಾಂಗ್ಲಾ ಸರಣಿಗೆ ಭರ್ಜರಿ ತಯಾರಿ ನಡೆಸಿರುವ ಟೀಮ್ ಇಂಡಿಯಾ ಪೇಸರ್

ಟೀಮ್ ಇಂಡಿಯಾ ಬ್ಯೂಸಿ ಶೆಡ್ಯೂಲ್ ಹೊಂದಿದೆ. ಜಿಂಬಾಬ್ವೆ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ, ಈಗ ಮತ್ತೊಂದು ಸರಣಿಗೆ ಸನ್ನದ್ಧವಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶ್ರೀಲಂಕಾ ಪ್ರವಾಸ ಆರಂಭಿಸಲಿರುವ ಟೀಮ್ ಇಂಡಿಯಾ ಮತ್ತೊಂದು ಸರಣಿ ಗೆಲುವಿನ ಕನಸು ಕಾಣುತ್ತಿದೆ.

ಈ ನಡುವೆ ಟೀಮ್ ಇಂಡಿಯಾದ ಕೋಚ್‌ ನೂತನ ಕೋಚ್‌ ಗೌತಮ್ ಗಂಭೀರ್ ಅವರಿಗೂ ಇದು ಮೊದಲ ಪರೀಕ್ಷೆ. ಈ ಪರೀಕ್ಷೆಯಲ್ಲಿ ಗೌತಮ್‌ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುವ ಅವಶ್ಯಕತೆ ಇದೆ. ಈ ಪ್ರವಾಸದ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು ಆಡಲಿದೆ. ಈ ಸರಣಿಗೆ ಟೀಮ್ ಇಂಡಿಯಾದ ಸ್ವಿಂಗ್ ಬೌಲರ್‌ ಮೊಹಮ್ಮದ್‌ ಶಮಿ ತಂಡ ಸೇರುವ ಸಾಧ್ಯತೆ ಇದೆ.

Mohammed Shami Returns to Bowling in the Nets After Long Injury Break

ಗಾಯದಿಂದ ಶಮಿ ಚೇತರಿಕೆ

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಬಳಿಕ ಸ್ಟಾರ್‌ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಗಾಯಕ್ಕೆ ತುತ್ತಾಗಿದ್ದರು. ಬಳಿಕ ಶಮಿ ಮೈದಾನಕ್ಕೆ ಇಳಿಯದೇ ತಿಂಗಳು ಗಳೇ ಕಳೆದಿವೆ. ಶಮಿ ಸ್ನಾಯು ಸೆಳೆತ ಹಾಗೂ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಂಡು ಬಂದ ಬಳಿಕ ಈಗ ಕ್ರಮೇಣ ಬೌಲಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ.

ನೆಟ್ಸ್‌ನಲ್ಲಿ ಶಮಿ ಅಭ್ಯಾಸ

ನೆಟ್ಸ್‌ನಲ್ಲಿ ಶಮಿ ತಮ್ಮ ಬೌಲಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಈ ಮೂಲಕ ತಾವು ಮುಂದಿನ ಸರಣಿಗೆ ಟೀಮ್ ಇಂಡಿಯಾಕ್ಕೆ ಕಮ್‌ ಬ್ಯಾಕ್‌ ಮಾಡುವ ಆಸೆಯನ್ನು ಹೊಂದಿರುವುದಾಗಿ ಖಚಿತ ಪಡಿಸಿದ್ದಾರೆ. ಸಣ್ಣ ಲೈನ್‌ ಅಪ್‌ ನೊಂದಿಗೆ ನೆಟ್ಸ್‌ನಲ್ಲಿ ಬೆವರು ಹೆರಿಸುತ್ತಿರುವ ಶಮಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸರಣಿಗೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.

ಇದಾದ ಬಳಿಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಡಿಯಲ್ಲಿ ಸಾಲು ಸಾಲು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಈ ವೇಳೆ ತಂಡಕ್ಕೆ ಶಮಿ ಅವರ ಉಪಸ್ಥಿತಿ ತುಂಬ ಮುಖ್ಯವಾಗಿದೆ. ಹೀಗಾಗಿ ಶಮಿ ವೇಗವಾಗಿ ಚೇತರಿಸಿಕೊಂಡು, ಮತ್ತೆ ಹಳೆಯ ಖದರ್‌ನಲ್ಲಿ ಅಂಗಳಕ್ಕೆ ಮರಳ ಬೇಕು ಎಂಬುದೇ ಅಭಿಮಾನಿಗಳ ಆಶಯವಾಗಿದೆ.

ಏಕದಿನ ವಿಶ್ವಕಪ್‌ ಹಿರೋ

ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಶಮಿ ಎಲ್ಲರ ಚಿತ್ತ ಕದ್ದಿದ್ದರು. ಲೀಗ್ ಹಂತದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗುತ್ತಿದ್ದಂತೆ ಆಡುವ ಅವಕಾಶ ಪಡೆದ ಶಮಿ, ತಮ್ಮ ಸ್ವಿಂಗ್‌ ಬೌಲಿಂಗ್ ಮೂಲಕವೇ ತಂಡಕ್ಕೆ ನೆರವಾದರು. ಅಲ್ಲದೆ ಏಕದಿನ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್‌ ಪಡೆದು ಮಿಂಚಿದ್ದರು.

ಫೈನಲ್‌ ಪಂದ್ಯದ ಬಳಿಕ ಶಮಿ ಗಾಯಕ್ಕೆ ತುತ್ತಾದ ಶಮಿ ಐಪಿಎಲ್‌ 2023ರಲ್ಲಿ ಆಡಿರಲಿಲ್ಲ. ಈ ವೇಳೆ ಅವರು ಚಿಕಿತ್ಸೆಗೆ ಒಳಗಾಗಿದ್ದರು. ಈಗ ಶಮಿ ನಿಧಾನವಾಗಿ ತಮ್ಮ ಲಯವನ್ನು ಕಂಡುಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸದ್ಯದಲ್ಲೇ ಶಮಿ ಡ್ರೆಸ್ಸಿಂಗ್ ರೂಮ್ ಸೇರುವುದು ಫಿಕ್ಸ್‌.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+