Mohammed Shami: ಸಾನಿಯಾ ಮಿರ್ಜಾ ಜೊತೆ ಮದುವೆ ವದಂತಿ ಬಗ್ಗೆ ಮೊಹಮ್ಮದ್ ಶಮಿ ಹೇಳಿದ್ದೇನು?
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಮದುವೆ ಬಗ್ಗೆ ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಇದರ ಬಗ್ಗೆ ಸಾನಿಯಾ ಮಿರ್ಜಾ ಅವರ ತಂದೆ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ.
ಮೊಹಮ್ಮದ್ ಶಮಿ ಪತ್ನಿಯಿಂದ ವಿಚ್ಛೇದನ ಪಡೆದಿದ್ದರೆ, ಸಾನಿಯಾ ಮಿರ್ಜಾ ಕೂಡ ಶೋಯೆಬ್ ಮಲಿಕ್‌ರಿಂದ ವಿಚ್ಛೇದನ ಪಡೆದುಕೊಂಡಿದ್ದು ಮಗನ ಜೊತೆ ಜೀವನ ಮಾಡುತ್ತಿದ್ದಾರೆ. ಇಬ್ಬರೂ ವಿಚ್ಛೇದನ ಪಡೆದುಕೊಂಡು ಒಂಟಿಯಾಗಿದ್ದು, ಮದುವೆಯಾಗಲಿದ್ದಾರೆ ಎನ್ನುವ ಸಂಗತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಮೊಹಮ್ಮದ್ ಶಮಿ ಸ್ಪಷ್ಟನೆ
ಸಾನಿಯಾ ಮಿರ್ಜಾ ಜೊತೆಗಿನ ವಿವಾಹದ ಬಗ್ಗೆ ಮೊಹಮ್ಮದ್ ಶಮಿ ಸ್ಪಷ್ಟನೆ ಕೊಟ್ಟಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳ ಬಗ್ಗೆ ಕಿಡಿಕಾರಿದ್ದಾರೆ.
ಯೂಟ್ಯೂಬ್‌ನಲ್ಲಿ ಶುಭಂಕರ್ ಮಿಶ್ರಾ ಅವರೊಂದಿಗಿನ ಮಾತುಕತೆಯಲ್ಲಿ ಶಮಿ ಹಲವು ಮಹತ್ವದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವದಂತಿಗಳ ಬಗ್ಗೆ ಶಮಿ ಅವರನ್ನು ಪ್ರಶ್ನೆ ಕೇಳಲಾಯಿತು ಮತ್ತು ಆನ್‌ಲೈನ್‌ನಲ್ಲಿ ಅಂತಹ ಸುದ್ದಿಗಳನ್ನು ಪ್ರಸಾರ ಮಾಡಲು ಕಾರಣರಾದವರ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸುಳ್ಳುಗಳನ್ನು ಹರಡುವುದನ್ನು ತಡೆಯುವಂತೆ ಜನರನ್ನು ಮೊಹಮ್ಮದ್ ಶಮಿ ಕೇಳಿಕೊಂಡಿದ್ದಾರೆ. ಅಂತಹ ಮೀಮ್‌ಗಳು ಮನರಂಜನೆಯನ್ನು ನೀಡಬಹುದಾದರೂ ಅವು ಹಾನಿಕಾರಕವೂ ಆಗಿರಬಹುದು ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಲ್ಲರೂ ಜವಾಬ್ದಾರಿಯಿಂದ ಇರಬೇಕು ಮತ್ತು ಇಂತಹ ಆಧಾರರಹಿತ ಸುದ್ದಿಗಳನ್ನು ಹರಡುವುದನ್ನು ತಡೆಯಬೇಕೆಂದು ಮನವಿ ಮಾಡುತ್ತೇನೆ ಎಂದರು.
ಇದು ವಿಚಿತ್ರವಾಗಿದೆ ಮತ್ತು ಕೆಲವು ವಿನೋದಕ್ಕಾಗಿ ಉದ್ದೇಶಪೂರ್ವಕವಾಗಿ ಮಾಡಲಾಗುತ್ತದೆ. ಆದರೆ ಏನು ಮಾಡಬಹುದು? ನಾನು ನನ್ನ ಫೋನ್ ಅನ್ನು ತೆರೆದರೆ ಆ ಮೀಮ್‌ಗಳನ್ನು ನೋಡಬಹುದು. ಅಂತಹ ಮೀಮ್‌ಗಳನ್ನು ಮೋಜಿಗಾಗಿ ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ, ಆದರೆ ಅವು ಬೇರೊಬ್ಬರ ಜೀವನಕ್ಕೆ ಸಂಬಂಧಿಸಿದ್ದರೆ, ನೀವು ಅದರ ಬಗ್ಗೆ ಯೋಚಿಸಬೇಕು ಮತ್ತು ನಂತರ ಅಂತಹ ವಿಷಯಗಳನ್ನು ಹಂಚಿಕೊಳ್ಳಬೇಕು ಎಂದು ಕೇಳಿಕೊಂಡಿದ್ದಾರೆ.
ಈ ರೀತಿ ಮಾಡುವ ಬದಲು ಏನಾದರು ಸಾಧನೆ ಮಾಡಲು ಪ್ರಯತ್ನಿಸಿ, ಜನರಿಗೆ ಸಹಾಯ ಮಾಡಿ ಮತ್ತು ನೀವು ಅಭಿವೃದ್ಧಿ ಹೊಂದಿರಿ ಆಮೇಲೆ ನಿಮ್ಮನ್ನು ಒಳ್ಳೆ ವ್ಯಕ್ತಿ ಎಂದು ಶಮಿ ಹೇಳಿದ್ದಾರೆ. ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಗಾಳಿ ಸುದ್ದಿಗಳಿಗೆ ಶಮಿ ಸ್ಪಷ್ಟನೆ ಕೊಟ್ಟಿದ್ದು, ಅಂತಹ ಸುದ್ದಿಗಳನ್ನು ನಂಬದಂತೆ ಮನವಿ ಮಾಡಿದ್ದಾರೆ.












Click it and Unblock the Notifications