ಧೋನಿ ಉತ್ತರಾಧಿಕಾರಿ ಹುಡುಕಾಟ ಬಲು ಜೋರು.. ಚೆನ್ನೈ ಟ್ರೇನ್ ಹಿಡಿದ್ರಾ ಮುಂಬೈಕರ್?
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ನೀಡುತ್ತಿರುವ ಪ್ರದರ್ಶನ ಅಭಿಮಾನಿಗಳಿಗೆ ಬೇಸರ ತರಿಸಿದೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಅಭಿಮಾನಿಗಳನ್ನು ಕೆರಳಿಸಿದೆ. ಇದನ್ನೆಲ್ಲಾ ನೋಡಿದ ಫ್ಯಾನ್ಸ್ ರೋಹಿತ್ ಮುಂದಿನ ವರ್ಷ ಐಪಿಎಲ್ ವೇಳೆ ಬೇರೆ ತಂಡಕ್ಕೆ ಹೋದರೆ ಸೂಕ್ತ ಎಂದು ಹೇಳುತ್ತಿದ್ದಾರೆ. ಅಭಿಮಾನಿಗಳ ಮಾತಿಗೆ ಮಾಜಿ ಕ್ರಿಕೆಟ್ ಆಟಗಾರರು ಸಹ ಧ್ವನಿ ಗೂಡಿಸುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟನ್ಸ್ ನಿಂದ ಟ್ರೇಡ್ ಮಾಡಿದ ಬಳಿಕ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ರೋಹಿತ್ ಅವರನ್ನು ಬೇರೆ ತಂಡಗಳು ಟ್ರೇಡ್ ಮಾಡಲಿವೆ ಎಂಬ ಮಾತುಗಳ ಸಹ ಕೇಳಿ ಬಂದಿದ್ದವು. ಆದರೆ ಈ ಊಹಾಪೋಗಳೆಲ್ಲಾ ಸುಳ್ಳಾಗಿ ರೋಹಿತ್ ಮತ್ತೊಮ್ಮೆ ಮುಂಬೈ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಧಮಾಕೆದಾರ್ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.

ವಾನ್ ಹೇಳಿದ್ದೇನು?
ರೋಹಿತ್ ಶರ್ಮಾ ಬ್ಯಾಟಿಂಗ್ ಸ್ಕಿಲ್ ಹಾಗೂ ಕ್ಯಾಪ್ಟನ್ಸಿ ಸ್ಕಿಲ್ ನೋಡಿದ ಹಲವು ಫ್ರಾಂಚೈಸಿಗಳು ಇವರಿಗೆ ಗಾಳ ಹಾಕಲು ರೆಡಿಯಾಗಿವೆ. ರೋಹಿತ್ ಶರ್ಮಾ ಸಣ್ಣ ಮೀನು ಅಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದರಿಂದ ಯೋಚಿಸಿ ಕಾರ್ಡ್ ಪ್ಲೇ ಮಾಡುವ ಸ್ಥಿತಿ ಬಂದು ಒದಗಿದೆ. ಈ ನಿಟ್ಟಿನಲ್ಲಿ ರೋಹಿತ್ ಮುಂದಿನ ವರ್ಷದ ಐಪಿಎಲ್‌ನಲ್ಲಿ Yellow ಜೆರ್ಸಿಯಲ್ಲಿ ಕಣಕ್ಕೆ ಇಳಿಯುತ್ತಾರೆ ಎಂಬ ಮಾತುಗಳ ಸಹ ಕೇಳಿ ಬಂದಿತ್ತು. ಇದಕ್ಕೆ ಮಾಜಿ ಕ್ರಿಕೆಟ್ ಆಟಗಾರರು ಸಹ ಧ್ವನಿ ಗುಡಿಸಿದ್ದರು. ಈಗ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಸಹ ಇದೇ ಮಾತನ್ನು ಹೇಳಿದ್ದಾರೆ.
ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ರೋಹಿತ್ ಶರ್ಮಾ ಸಿಎಸ್‌ಕೆ ಸೇರುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸದ್ಯ ಧೋನಿ ಉತ್ತರಾಧಿಕಾರಿ ಎಂತೆ ಬಿಂಬಿತವಾಗುತ್ತಿರುವ ರುತುರಾಜ್ ಗಾಯಕ್ವಾಡ್ ಅವರ ಕ್ಯಾಪ್ಟನ್ಸಿ ಈ ಆವೃತ್ತಿಗೆ ಮಾತ್ರ ಸೀಮಿತವಾಗುತ್ತದೆ. ಮುಂದಿನ ಬಾರಿಯ ಐಪಿಎಲ್‌ನಲ್ಲಿ ರೋಹಿತ್ ಈ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಎಲ್ಲವೂ ಅಂದು ಕೊಂಡಂತೆ ಆದರೆ ಮಹೇಂದ್ರ ಸಿಂಗ್ ಧೋನಿ ಅವರಿಗೆ ಈ ಆವೃತ್ತಿಯೇ ಕೊನೆಯ ಆವೃತ್ತಿ ಎಂದು ನಂಬಲಾಗುತ್ತಿದೆ. ಇವರ ಅನುಪಸ್ಥಿತಿಯಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕ ಎಂದರೆ ರೋಹಿತ್ ಶರ್ಮಾ ಎಂದು ಮೈಕಲ್ ವಾನ್ ಹೇಳಿದ್ದಾರೆ.

ಐಪಿಎಲ್ 2024ರ ಉದ್ಘಾಟನಾ ಪಂದ್ಯದ ಒಂದು ದಿನ ಮುಂಚಿತವಾಗಿ ಧೋನಿ ತಾನು ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿಯುವದಾಗಿ ಘೋಷಿಸಿದ್ದರು. ಅಲ್ಲದೆ ರುತುರಾಜ್ ಗಾಯಕ್ವಾಡ್ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಬಂದಿತ್ತು.
ಇಂಗ್ಲೆಂಡ್ ಮಾಜಿ ಆಟಗಾರನಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಾನ್, 'ರೋಹಿತ್ ಅವರನ್ನು ಸಿಎಸ್‌ಕೆ ತಂಡದಲ್ಲಿ ನೋಡಲು ಬಯಸುವುದಾಗಿ ತಿಳಿಸಿದ್ದಾರೆ. ರೋಹಿತ್ ಶರ್ಮಾ ಹಳದಿ ಜೆರ್ಸಿಯಲ್ಲಿ ಕಂಗೊಳಿಸಲಿದ್ದಾರೆ ಎಂದು ಇವರು ಭವಿಷ್ಯ ನುಡಿದಿದ್ದಾರೆ.
ಐಪಿಎಲ್ 2024ರ ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಕಾದಾಟ ನಡೆಸಲಿವೆ.












Click it and Unblock the Notifications