RCB: ಆತನನ್ನು ಆಯ್ಕೆ ಮಾಡಿಕೊಂಡಿದ್ದು ಉತ್ತಮ ನಿರ್ಧಾರ; ಆರ್‌ಸಿಬಿ ತಂಡದಲ್ಲಿ ವಿಶೇಷತೆ ಇದೆ ಎಂದ ಮಾಜಿ ಕ್ರಿಕೆಟಿಗ

ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಅತ್ಯುತ್ತಮ ಆಲ್‌ರೌಂಡರ್ ಪ್ರದರ್ಶನ ನೀಡಿದ ಆರ್ ಸಿಬಿ ಹಾಲಿ ಚಾಂಪಿಯನ್ನರ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.

ಆರ್ ಸಿಬಿ ತಂಡದ ಆಲ್‌ರೌಂಡರ್ ಕೃನಾಲ್ ಪಾಂಡ್ಯ 3 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಅವರನ್ನು ಔಟ್ ಮಾಡುವ ಮೂಲಕ್ ಕೆಕೆಆರ್ ದೊಡ್ದ ಮೊತ್ತ ಗಳಿಸದಂತೆ ತಡೆದರು. ಕೃನಾಲ್ ಪಾಂಡ್ಯ ಅವರ ಉತ್ತಮ ಬೌಲಿಂಗ್‌ಗಾಗಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಕೂಡ ಪಡೆದುಕೊಂಡರು.

matthew hayden calls krunal pandya smart pick rcb ipl 2025

ಉತ್ತಮ ಆಯ್ಕೆ ಎಂದ ಮ್ಯಾಥ್ಯೂ ಹೇಡನ್

ಆರ್ ಸಿಬಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್, 2025ರ ಆವೃತ್ತಿಗಾಗಿ ಕೃನಾಲ್ ಪಾಂಡ್ಯ ಅವರನ್ನು ಆಯ್ಕೆ ಮಾಡಿರುವುದು 'ಸ್ಮಾರ್ಟ್ ಆಯ್ಕೆ' ಎಂದು ಹೇಳಿದ್ದಾರೆ. ಅಲ್ಲದೆ ಈ ಬಾರಿ ಆರ್ ಸಿಬಿ ತಂಡದಲ್ಲಿ ಏನೋ ವಿಶೇಷತೆ ಇದೆ ಎಂದು ಹೇಳಿದ್ದಾರೆ.

"ಹೊಸ ನಾಯಕನಾಗಿ ರಜತ್ ಪಾಟಿದಾರ್‌ಗೆ ಇದು ಪ್ರಮುಖ ಗೆಲುವು. ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿರುವುದು ಖಂಡಿತವಾಗಿಯೂ ಸಹಾಯ ಮಾಡುತ್ತದೆ" ಎಂದು ಹೇಡನ್ ಜಿಯೋಸ್ಟಾರ್ ನಲ್ಲಿ ಮಾತನಾಡಿದ್ದಾರೆ.

ಆರ್ ಸಿಬಿ ಬೌಲಿಂಗ್ ತಂಡವು ಉತ್ತಮವಾಗಿ ಕಾಣುತ್ತಿದೆ. ಕೃನಾಲ್ ಪಾಂಡ್ಯ ಮಧ್ಯಮ ಓವರ್ ಗಳಲ್ಲಿ ಉತ್ತಮ ಆಯ್ಕೆಯಾಘಿದ್ದಾರೆ. ಜೋಶ್ ಹೇಜಲ್‌ವುಡ್‌ ಉತ್ತಮ ಬೌಲಿಂಗ್ ಮಾಡಿದರು. ಹಲವು ವರ್ಷಗಳ ಬಳಿಕ ನಾನು ಆರ್ ಸಿಬಿ ಸಂಪೂರ್ಣ ತಂಡವಾಗಿ ಆಡುವುದನ್ನು ನೋಡಿದ್ದೇನೆ, ಈ ವರ್ಷ ತಂಡದಲ್ಲಿ ಏನೋ ವಿಶೇಷತೆ ಎಂದು ಹೇಳಿದ್ದಾರೆ.

ಚೆಂಡಿನ ವೇಗವನ್ನು ಬದಲಾವಣೆ ಮಾಡುವುದು ಮತ್ತು ಸ್ಟಂಪ್‌ಗಳ ಮೇಲೆ ಬೌಲಿಂಗ್ ಮಾಡುವುದು ಕೃನಾಲ್ ಪಾಂಡ್ಯ ಅವರು ವಿಕೆಟ್ ಪಡೆಯಲು ಪ್ರಮುಖ ಕಾರಣವಾಯಿತು. ಕೃನಾಲ್‌ರನ್ನು ಹರಾಜಿನಲ್ಲಿ ಖರೀದಿ ಮಾಡಿರುವುದು ಉತ್ತಮ ಆಯ್ಕೆಯಾಗಿದೆ ಎಂದರು.

ಒತ್ತಡದ ಸಂದರ್ಭಗಳಲ್ಲಿ ನೀವು ಅನುಭವವನ್ನು ಸೋಲಿಸಲು ಸಾಧ್ಯವಿಲ್ಲ, ಕೃನಾಲ್ ಪಾಂಡ್ಯ ಒತ್ತಡದಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಿದರು. ಆರ್ ಸಿಬಿ ತೊಂದರೆಯಲ್ಲಿದೆ ಎನ್ನುವಾಗಲೇ ಕೃನಾಲ್ ಪಾಂಡ್ಯ ವಿಕೆಟ್ ಪಡೆಯುವ ಮೂಲಕ ತಂಡವನ್ನು ವಾಪಸಾತಿ ಮಾಡುವಂತೆ ಮಾಡಿದರು. ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದು ತಂಡದ ಬ್ಯಾಟಿಂಗ್‌ನ ಆಧಾರ ಸ್ಥಂಭವಾಗಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+