Manoj Bhandage: ಆರ್ಸಿಬಿ ಆಲ್‌ರೌಂಡರ್ ಅಬ್ಬರ: ಮೈಸೂರು ವಾರಿಯರ್ಸ್‌ಗೆ ಭರ್ಜರಿ ಗೆಲುವು
ಮಹಾರಾಜಾ ಟ್ರೋಫಿ ಪಂದ್ಯಾವಳಿವಲ್ಲಿ ಆರ್ ಸಿಬಿ ಆಲ್‌ರೌಂಡರ್ ಮನೋಜ್ ಭಾಂಡಗೆ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮೈಸೂರು ವಾರಿಯರ್ಸ್ ತಂಡವು ಶಿವಮೊಗ್ಗ ಲಯನ್ಸ್ ವಿರುದ್ಧ 7 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ಗೆಲುವಿನ ಶುಭಾರಂಭ ಮಾಡಿದೆ.
ಗುರುವಾರ ಮಹಾರಾಜ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2024 ( Maharaja Trophy KSCA T20 2024) ಪಂದ್ಯಾವಳಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ 9 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಮತ್ತು ಶಿವಮೊಗ್ಗ ಲಯನ್ಸ್ ಮುಖಾಮುಖಿಯಾಗಿದ್ದವು.

ಟಾಸ್ ಗೆದ್ದ ಶಿವಮೊಗ್ಗ ಲಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಎಸ್‌ಯು ಕಾರ್ತಿಕ್, ಕರುಣ್ ನಾಯರ್ ತಲಾ 18 ರನ್ ಗಳಿಸಿದರು. ಕೃಷ್ಣಪ್ಪ ಗೌತಮ್ 19 ಎಸೆತಗಳಲ್ಲಿ 21 ರನ್ ಗಳಿಸಿದರೆ, ಆಲ್‌ರೌಂಡರ್ ಮನೋಜ್ ಭಾಂಡಗೆ 16 ಎಸೆತಗಳಲ್ಲಿ 4 ಸಿಕ್ಸರ್ ಸಹಿತ ಅಜೇಯ 42 ರನ್ ಗಳಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ಕಾರಣವಾದರು.
ಪಂದ್ಯಕ್ಕೆ ಮಳೆ ಅಡ್ಡಿ
ಮೈಸೂರು ವಾರಿಯರ್ಸ್ ಇನ್ನಿಂಗ್ಸ್ ಮುಗಿದ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ಮಳೆ ನಿಂತ ಬಳಿಕ ವಿಜೆಡಿ ನಿಯಮದ ಪ್ರಕಾರ ಶಿವಮೊಗ್ಗ ಲಯನ್ಸ್‌ಗೆ 9 ಓವರ್ ಗಳಲ್ಲಿ 87 ರನ್‌ಗಳ ಗುರಿ ನೀಡಲಾಯಿತು. ಈ ಮೊತ್ತವನ್ನು ಬೆನ್ನತ್ತಿದ ಶಿವಮೊಗ್ಗ ಲಯನ್ಸ್ 9 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 80 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಅಭಿನವ್ ಮನೋಹರ್ 29 ಎಸೆತಗಳಲ್ಲಿ 52 ರನ್ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಜಗದೀಶ್ ಸುಚಿತ್ 2 ಓವರ್ ಗಳಲ್ಲಿ 15 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.
ಮನೋಜ್ ಭಾಂಡಗೆಗೆ ಸಿಗುತ್ತಾ ಅವಕಾಶ
ಮನೋಜ್ ಭಾಂಡಗೆ ಅತ್ಯುತ್ತಮ ಆಲ್‌ರೌಂಡರ್, ಸ್ಫೋಟಕ ಬ್ಯಾಟರ್ ಕೂಡ. ಆದರೂ ಅವರಿಗೆ ಆರ್ ಸಿಬಿ ತಂಡದಲ್ಲಿ ಇದುವರೆಗೂ ಆಡುವ ಅವಕಾಶ ಸಿಕ್ಕಿಲ್ಲ. ಈ ಬಾರಿ ಮೆಗಾಹರಾಜು ಇರುವ ಕಾರಣ, ಅವರನ್ನು ಈಗ ರಿಟೈನ್ ಮಾಡಿಕೊಳ್ಳದೇ ಇದ್ದರೂ, ಹರಾಜಿನಲ್ಲಿ ಮತ್ತೆ ತಂಡಕ್ಕೆ ಸೇರಿಸಿಕೊಂಡು ಕನ್ನಡಿಗರಿಗೆ ಅವಕಾಶ ಕೊಡಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.












Click it and Unblock the Notifications