ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಮನಿಷಾ ಭಾನ್ವಾಲಾಗೆ ಚಿನ್ನ; ಇತಿಹಾಸ ಸೃಷ್ಟಿಸಿದ ಭಾರತದ ಕುಸ್ತಿಪಟು

Manisha Bhanwala: ಭಾರತೀಯ ಕ್ರೀಡಾ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಐತಿಹಾಸಿಕ ಸಾಧನೆಯೊಂದಾಗಿದೆ. ಕಜಕಸ್ತಾನ್‌ನ ಅಸ್ತಾನಾದಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಕುಸ್ತಿಪಟು, 29 ವರ್ಷದ ಮನಿಷಾ ಭಾನ್ವಾಲಾ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮಹಿಳೆಯರ 59 ಕೆ.ಜಿ. ವಿಭಾಗದ ಫೈನಲ್ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಅಮೆರಿಕದ ಪ್ಯಾನ್ ಅಮೆರಿಕನ್ ಚಾಂಪಿಯನ್ ಎಲಿಜಬೆತ್ ನೆಟ್ಟೆ ವಿರುದ್ಧ ಸೆಣಸಾಡಿದ ಮನಿಷಾ, ಆರಂಭಿಕ ಹಂತದಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದರು. ಪಂದ್ಯದ ಮೊದಲಾರ್ಧ ಮುಕ್ತಾಯದ ವೇಳೆಗೆ ಅವರು 1-5 ಅಂತರದಿಂದ ಹಿಂದೆ ಇದ್ದರು. ಆದರೆ ದ್ವಿತೀಯಾರ್ಧದಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್‌ ಮಾಡಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಮನಿಷಾ, ಅಂತಿಮವಾಗಿ 8-6 ಅಂತರದ ಭರ್ಜರಿ ಜಯ ದಾಖಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

Manisha Bhanwala Wins Gold at World Wrestling Championships Creates History for India Know details

ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಮೊದಲ ಭಾರತೀಯ ಮಹಿಳೆ

59 ಕೆ.ಜಿ. ವಿಭಾಗವು ಒಲಿಂಪಿಕ್ ಕ್ರೀಡಾಕೂಟಕ್ಕೆ ಸೇರ್ಪಡೆಯಾಗದ ವಿಭಾಗವಾಗಿದ್ದರೂ, ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಇದುವರೆಗೆ ಯಾವುದೇ ಭಾರತೀಯ ಮಹಿಳಾ ಕುಸ್ತಿಪಟು ಚಿನ್ನದ ಪದಕ ಗೆದ್ದಿರಲಿಲ್ಲ. ಈ ಸಾಧನೆ ಮಾಡುವ ಮೂಲಕ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಭಾರತದ ಪ್ರಥಮ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನಿಷಾ ಪಾತ್ರರಾಗಿದ್ದಾರೆ.

ಮನಿಷಾ ಫೈನಲ್ ಹಾದಿ ಹೇಗಿತ್ತು?

ಏಷ್ಯನ್ ಗೇಮ್ಸ್‌ನ 57 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಅಕಾರಿ ಫ್ಯೂಜಿನಾಮಿ ವಿರುದ್ಧ ಸೋತು ಹಿನ್ನಡೆ ಅನುಭವಿಸಿದ್ದ ಮನಿಷಾ, ವಿಶ್ವ ಚಾಂಪಿಯನ್‌ಷಿಪ್‌ಗಾಗಿ ತಮ್ಮ ತೂಕದ ವಿಭಾಗವನ್ನು 59 ಕೆ.ಜಿ.ಗೆ ಬದಲಾಯಿಸಿಕೊಂಡರು. ಈ ನಿರ್ಧಾರ ಅವರ ಕ್ರೀಡಾ ಜೀವನದ ಅತ್ಯುತ್ತಮ ಹೆಜ್ಜೆಯಾಗಿ ಮಾರ್ಪಟ್ಟಿತು. ಫೈನಲ್‌ಗೆ ತಲುಪುವ ಹಾದಿಯಲ್ಲಿ ಅವರು ಕೆನಡಾದ ಲಾರೆನ್ಸ್ ಬೊರೆಗಾರ್ಡ್, ಮಂಗೋಲಿಯಾದ ಬೊಲೊರ್ತುಯಾ ಖುರೆಲ್ಖೂ ಹಾಗೂ ಕಜಕಸ್ತಾನ್‌ನ ಅಲ್ಟಿನ್ ಶಾಗಾಯೇವಾ ಅವರಿಗೆ ಸೋಲುಣಿಸಿದರು.

ಮನಿಷಾ ಹಿನ್ನೆಲೆ ಏನು?

ಹರಿಯಾಣದ ಜಿಂದ್ ಜಿಲ್ಲೆಯವರಾದ ಮನಿಷಾ, 57 ಕೆ.ಜಿ.ಯಿಂದ 65 ಕೆ.ಜಿ.ವರೆಗಿನ ವಿವಿಧ ತೂಕದ ವಿಭಾಗಗಳಲ್ಲಿ ಸ್ಪರ್ಧಿಸಿದ ಅಪಾರ ಅನುಭವ ಹೊಂದಿದ್ದಾರೆ. ಮೂರು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡ ಅನುಭವವನ್ನು ಸೂಕ್ತವಾಗಿ ಬಳಸಿ ಈ ಬಾರಿ ದೇಶಕ್ಕೆ ಬೃಹತ್ ಯಶಸ್ಸು ತಂದುಕೊಟ್ಟಿದ್ದಾರೆ.

ಈ ಬಾರಿಯ ಸರಣಿಯಲ್ಲಿ ಭಾರತದ ಇತರ ಕ್ರೀಡಾಪಟುಗಳೂ ಸಹ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 50 ಕೆ.ಜಿ. ವಿಭಾಗದಲ್ಲಿ ನೀಲಮ್ ಸಿರೋಹಿ ಹಾಗೂ 76 ಕೆ.ಜಿ. ವಿಭಾಗದಲ್ಲಿ ಕಾಜಲ್ ಧೋಚಕ್ ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಹಿಂದೆ 2021ರಲ್ಲಿ ಅಂಶು ಮಲಿಕ್ ಬೆಳ್ಳಿ ಗೆದ್ದಿದ್ದರೆ, ವಿನೇಶ್ ಫೋಗಟ್ ಮತ್ತು ಅಂತಿಮ್ ಪಂಗಲ್ ತಲಾ ಎರಡು ಕಂಚಿನ ಪದಕಗಳನ್ನು ತಂದಿದ್ದರು. ಮನಿಷಾ ಅವರ ಈ ಯಶಸ್ಸಿಗೆ ಭಾರತೀಯ ಕುಸ್ತಿ ಫೆಡರೇಶನ್, ಕ್ರೀಡಾ ಸಚಿವಾಲಯ ಹಾಗೂ ದೇಶದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತೀಯ ಮಹಿಳಾ ಕುಸ್ತಿ ಕ್ಷೇತ್ರಕ್ಕೆ ಈ ಗೆಲುವು ಹೊಸ ಭರವಸೆಯನ್ನು ನೀಡಿದೆ ಅಂದರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+