KKR vs LSG: ಗೆಲುವಿನ ಸನಿಹದಲ್ಲಿ ಎಡವಿದ ಕೆಕೆಆರ್; ಲಕ್ನೋಗೆ ಭರ್ಜರಿ ಗೆಲುವು

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 4 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಅಂತಿಮ ಓವರ್ ಗಳಲ್ಲಿ ರಿಂಕು ಸಿಂಗ್ ಅವರ ಹೋರಾಟ ವ್ಯರ್ಥವಾಗಿದ್ದು ಕೆಕೆಆರ್ ಸೋಲೊಪ್ಪಿಕೊಂಡಿತು.

ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಐಡೆನ್ ಮಾರ್ಕ್ರಮ್‌ ಮತ್ತು ಮಿಚೆಲ್ ಮಾರ್ಷ್ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಉತ್ತಮ ಆರಂಭ ನೀಡಿದರು.

lsg win against kkr by 4 runs in thriller ipl 2025

ಐಡೆನ್ ಮಾರ್ಕ್ರಮ್ 28 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ 47 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 48 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್ ಸಹಿತ 81 ರನ್ ಗಳಿಸಿ ಮಿಂಚಿದರು. ಬಳಿಕ ಬಂದ ನಿಕೋಲಸ್ ಪೂರನ್ ಕೇವಲ 36 ಎಸೆತಗಳಲ್ಲಿ 7 ಬೌಂಡರಿ 8 ಸಿಕ್ಸರ್ ಸಹಿತ ಅಜೇಯ 87 ರನ್ ಗಳಿಸುವ ಮೂಲಕ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು.

ಅಬ್ದುಲ್ ಸಮದ್ 6 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ ಅಜೇಯ 4 ರನ್ ಗಳಿಸಿದರು. ಹರ್ಷಿತ್ ರಾಣಾ 4 ಓವರ್ ಗಳಲ್ಲಿ 51 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರೆ, ಆಂಡ್ರೆ ರಸೆಲ್ 1 ವಿಕೆಟ್ ಪಡೆದರು.

ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಕೂಡ ಉತ್ತಮ ಆರಂಭ ಪಡೆದರು, ಕ್ವಿಂಟನ್ ಡಿ ಕಾಕ್ (15 ರನ್) ಅವರ ವಿಕೆಟ್ ಕಳೆದುಕೊಂಡಿತು. ಬಳಿಕ ಜೊತೆಯಾದ ಸುನಿಲ್ ನರೈನ್ ಮತ್ತು ನಾಯಕ ಅಜಿಂಕ್ಯ ರಹಾನ್ ಕೆಕೆಆರ್ ತಂಡಕ್ಕೆ ಆಸರೆಯಾದರು. ಸುನಿಲ್ ನರೈನ್ 13 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ 30 ರನ್ ಗಳಿಸಿದರು.

ನಾಯಕ ಅಜಿಂಕ್ಯ ರಹಾನೆ 35 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಹಿತ 61 ರನ್ ಗಳಿಸಿ ಔಟಾದರು. ವೆಂಕಟೇಶ್ ಅಯ್ಯರ್ ಕೂಡ 29 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ಸಹಿತ 45 ರನ್ ಗಳಿಸಿದರು. ರಮಣದೀಪ್ ಸಿಂಗ್ 1 ರನ್ ಗಳಿಸಿ ಔಟಾದರೆ, ಆಂಗ್ಕ್ರಿಶ್ ರಘುವಂಶಿ 5 ರನ್ ಗಳಿಸಿ ಔಟಾದರು, ಆಂಡ್ರೆ ರಸೆಲ್ ಕೂಡ 7 ರನ್‌ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ರಿಂಕು ಸಿಂಗ್ 15 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದರೂ ಕೆಕೆಆರ್ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿ 4 ರನ್‌ಗಳಿಂದ ಸೋಲೊಪ್ಪಿಕೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+