KL Rahul: ಕೆಎಲ್ ರಾಹುಲ್‌ಗೆ ಮತ್ತೆ ಅವಮಾನ?
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯವಾಗಿ ಸೋತ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಕೆಎಲ್ ರಾಹುಲ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಅದಾದ ಬಳಿಕ ಸಂಜೀವ್ ಗೊಯೆಂಕಾ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಕೆಎಲ್ ರಾಹುಲ್ ತಂಡದ ನಾಯಕತ್ವ ಬಿಡುತ್ತಾರೆ, ಅವರು ತಂಡದ ಜೊತೆ ಪ್ರಯಾಣಿಸಿಲ್ಲ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ನಾಯಕತ್ವ ವಹಿಸಿಕೊಳ್ಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.

ಇದಕ್ಕೂ ಮುನ್ನ ಕೆಎಲ್ ರಾಹುಲ್ ಸಂಜೀವ್ ಗೊಯೆಂಕಾ ಅವರ ಮನೆಯಲ್ಲಿ ಊಟ ಮಾಡುವ ಮೂಲಕ, ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಲಾಗಿದೆ. ಗೊಯೆಂಕಾ ಮತ್ತು ಕೆಎಲ್ ರಾಹುಲ್ ನಡುವೆ ಎಲ್ಲವೂ ಸರಿ ಇದೆ ಎನ್ನುವ ಸಂದೇಶ ನೀಡಲು ಫ್ರಾಂಚೈಸಿ ಪ್ರಯತ್ನ ಮಾಡಿದೆ.
ಅಭಿಮಾನಿಗಳಿಗೆ ಕೋಪ ಯಾಕೆ?
ತಂಡದಲ್ಲಿ ಕೆಎಲ್ ರಾಹುಲ್ ಇದ್ದರೂ ಅವರಿಗೆ ತಕ್ಕ ಬೆಲೆ ಸಿಗುತ್ತಿಲ್ಲ ಎನ್ನುವ ಆರೋಪ ಅಭಿಮಾನಿಗಳದ್ದಾಗಿದೆ. ಫ್ರಾಂಚೈಸಿ ಜೊತೆ ಒಪ್ಪಂದ ಮಾಡಿಕೊಂಡಿರುವ ಪಾನೀಯ ಒಂದರ ಜಾಹೀರಾತಿನಲ್ಲಿ ಕೆಎಲ್ ರಾಹುಲ್ ಅವರೇ ಕಾಣೆಯಾಗಿದ್ದು, ಮಯಾಂಕ್ ಯಾದವ್, ಕೃನಾಲ್ ಪಾಂಡ್ಯ, ದೇವದತ್ ಪಡಿಕ್ಕಲ್ ಕಾಣಿಸಿಕೊಂಡಿದ್ದಾರೆ.
ಸಂಜೀವ್ ಗೊಯೆಂಕಾ ಅವರ ವರ್ತನೆ ಬಳಿಕ ಈ ರೀತಿ ಮಾಡಿರುವುದು ಅಭಿಮಾನಿಗಳಿಗೆ ಅನುಮಾನ ಮೂಡಿಸಿದೆ. ಇದು ಬೇಕಂತಲೇ ಮಾಡಿದ್ದಾ, ಇಲ್ಲವಾ ಎನ್ನುವ ಬಗ್ಗೆ ಖಾತ್ರಿ ಇಲ್ಲವಾದರೂ, ಅಭಿಮಾನಿಗಳು ಮಾತ್ರ ಕೋಪಗೊಂಡಿದ್ದಾರೆ.
ತಂಡದಿಂದ ಹೊರಕ್ಕೆ?
ಸಂಜೀವ್ ಗೊಯೆಂಕಾ ಅವರ ವರ್ತನೆ ಕೆಎಲ್ ರಾಹುಲ್ ಅಭಿಮಾನಿಗಳಿಗೆ ಕೋಪ ತರಿಸಿದೆ. ನೀವು ಎಲ್‌ಎಸ್‌ಜಿ ತಂಡವನ್ನು ಬಿಟ್ಟುಬಿಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮುಂದಿನ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬನ್ನಿ ಎಂದು ಕೂಡ ಆಹ್ವಾನ ನೀಡಿದ್ದಾರೆ.
ಕಳೆದ ಎರಡೂ ಆವೃತ್ತಿಗಳಲ್ಲಿ ಕೆಎಲ್ ರಾಹುಲ್ ನಾಯಕತ್ವದಲ್ಲಿ ಎಲ್‌ಎಸ್‌ಜಿ ತಂಡ ಪ್ಲೇ ಆಫ್ ತಲುಪಿತ್ತು. ಈ ಬಾರಿ ಕೂಡ ಪ್ಲೇ ಆಫ್ ತಲುಪುವ ಅವಕಾಶ ಇದ್ದು, ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಿದೆ.
ಕೆಎಲ್ ರಾಹುಲ್ ಈ ವರ್ಷದ ಐಪಿಎಲ್ ಬಳಿಕ ತಂಡವನ್ನು ತೊರೆಯಲಿದ್ದಾರೆ ಎನ್ನಲಾಗಿದೆ. 2025ರ ಐಪಿಎಲ್‌ಗೆ ಮುನ್ನ ಮೆಗಾ ಹರಾಜು ನಡೆಯಲಿದ್ದು, ಹರಾಜಿಗೆ ಬರುತ್ತಾರ, ಅಥವಾ ಎಲ್‌ಎಸ್‌ಜಿ ತಂಡವೇ ಅವರನ್ನು ರಿಟೈನ್ ಮಾಡಿಕೊಳ್ಳುತ್ತಾ ಎನ್ನುವ ಕುತೂಹಲ ಇದೆ.












Click it and Unblock the Notifications