ಇದ್ಯಾರು ಯುವಿನಾ ಅಥವಾ ಬೂಮ್ರಾನಾ; ಸಚಿನ್ ಟ್ವೀಟ್ ಹಿಂದಿನ ಮರ್ಮವೇನು?

ಎಡ್ ಬ್ಯಾಸ್ಟನ್, ಜುಲೈ 02: ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ಅಖಾಡಕ್ಕೆ ಇಳಿದ ಜಸ್ಪ್ರೀತ್ ಬೂಮ್ರಾ ಬ್ಯಾಟಿಂಗ್ ಶೈಲಿಗೆ ಸ್ವತಃ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಶಾಕ್ ಆಗಿದ್ದಾರೆ.

ಅರೇ.. ಫೀಲ್ಡ್ ನಲ್ಲಿ ಆಟ ಆಡುತ್ತಿರುವುದು ಯುವರಾಜ್ ಸಿಂಗ್ ಅಥವಾ ಜಸ್ಪ್ರೀತ್ ಬೂಮ್ರಾನಾ ಎಂದು ಸಚಿನ್ ತೆಂಡೂಲ್ಕರ್ ಅಚ್ಚರಿಯ ಟ್ವೀಟ್ ಮಾಡಿದ್ದಾರೆ. ಏಕೆಂದರೆ ಶನಿವಾರ ಜಸ್ಪ್ರೀತ್ ಬೂಮ್ರಾ ಪ್ರದರ್ಶಿಸಿ ಬ್ಯಾಟಿಂಗ್ ವೈಖರಿ ಹಾಗಿತ್ತು.

ಒಂದೇ ಓವರ್ ನಲ್ಲಿ 4, 4, 6, 4, 6, 4, 1 ಸೇರಿದಂತೆ ಒಟ್ಟು ಏಳು ಎಸೆತಗಳಲ್ಲಿ 29 ರನ್ ಗಳಿಸಿದ್ದಾರೆ. ಈ ಮಾಸ್ಟರ್ ಸ್ಟ್ರೋಕ್ ಆಟದ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಆಟದ ಶೈಲಿಯನ್ನು ನೆನಪಿಸಿಕೊಂಡಿದ್ದಾರೆ.

Kya yeh Yuvi hai ya Bumrah: Sachin Tendulkar reaction about Batting style of Team india Captain

ಯುವರಾಜ್ ಸಿಂಗ್ ಬಗ್ಗೆ ಸಚಿನ್ ಟ್ವೀಟ್:

2007 ರಲ್ಲಿ ಬ್ರಾಡ್ ವಿರುದ್ಧ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ ಯುವರಾಜ್ ಸಿಂಗ್‌ಗೆ ಭಾರತೀಯ ವೇಗಿಯನ್ನು ಹೋಲಿಸಿದ ಸಚಿನ್ ತೆಂಡೂಲ್ಕರ್ ಬುಮ್ರಾ ಅವರನ್ನು ಶ್ಲಾಘಿಸುವ ಟ್ವೀಟ್‌ನೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಕ್ಯಾ ಯೇ ಯುವಿ ಹೈ ಯಾ ಬುಮ್ರಾ!? 2007 ಕಿ ಯಾದ್ ದಿಲಾ ದಿ.." ಎಂದು ಸಚಿನ್ ಬರೆದುಕೊಂಡಿದ್ದಾರೆ.

ಬ್ರಿಯಾನ್ ಲಾರಾ ರೆಕಾರ್ಡ್ ಬ್ರೇಕ್:

ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಶ್ರೇಷ್ಠ ಬ್ರಿಯಾನ್ ಲಾರಾ ಮಾಡಿದ ದಾಖಲೆಯನ್ನು ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ವೇಗದ ಬ್ಯಾಟಿಂಗ್ ಶೈಲಿಯಿಂದ ಹಿಂದಿಕ್ಕಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಭಾರತದ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ವಿರುದ್ಧ ಒಂದೇ ಓವರ್ ನಲ್ಲಿ ಬರೋಬ್ಬರಿ 29 ರನ್ ಗಳಿಸುವ ಮೂಲಕ ಜಸ್ಪ್ರೀತ್ ಬೂಮ್ರಾ ಹೊಸ ದಾಖಲೆ ಬರೆದಿದ್ದಾರೆ. ಈ ಹಿಂದೆ ಟೆಸ್ಟ್ ಪಂದ್ಯದ ಒಂದು ಓವರ್ ನಲ್ಲಿ ಬ್ರಿಯಾನ್ ಲಾರಾ 28 ರನ್ ಗಳಿಸಿದ್ದೇ ಗರಿಷ್ಠ ರನ್ ಎನಿಸಿಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+