IPL 2025: ಐಪಿಎಲ್‌ನಲ್ಲಿ ಅತೀ ಕಡಿಮೆ ರನ್ ಗಳಿಸಿ ಗೆದ್ದ ತಂಡಗಳು: ಆರ್‌ಸಿಬಿ ದಾಖಲೆ ತಿಳಿಯಿರಿ
Top 10 Lowest Total Defended In IPL History: ಐಪಿಎಲ್ 2025ನೇ ಆವೃತ್ತಿ ಅದ್ಧೂರಿಯಾಗಿ ನಡೆಯುತ್ತಿದೆ. ಅದರಲ್ಲೂ ನಿನ್ನೆ ನಡೆದ ಪಂದ್ಯದಲ್ಲಿ ಅತ್ಯಂತ ಕಡಿಮೆ ರನ್‌ಗಳನ್ನು ಕಲೆಹಾಕಿ ಪಂಜಾಬ್ ಕಿಂಗ್ಸ್ ತಂಡವು ಕೆಕೆಆರ್ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಸಾಧನೆಯನ್ನು ಬೇರೆ ತಂಡಗಳು ಕೂಡ ಮಾಡಿವೆ. ಹಾಗಾದ್ರೆ ಯಾವಾಗ ಹಾಗೂ ಯಾವ ಟೀಂ ಮೇಲೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ನಿನ್ನೆ (ಏಪ್ರಿಲ್ 15) ಚಂಡೀಗಢದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಪಂಜಾಬ್ ಕಿಂಗ್ಸ್ ತಂಡವು 15.3 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 111 ರನ್‌ಗಳನ್ನು ಮಾತ್ರ ಕಲೆಹಾಕಿತು. ಈ ಮೂಲಕ 112 ಸುಲಭದ ಗುರಿ ಇದ್ದರೂ ಸಹ ಕೆಕೆಆರ್ 15.1 ಓವರ್‌ಗಳಿಗೆ ತನ್ನಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಬರೀ 95 ರನ್‌ಗಳಿಸಿ ಹೀನಾಯ ಸೋಲನುಭವಿಸಿತು.

ಸಾಮಾನ್ಯವಾಗಿ ಇದು ಭಾರೀ ಸುಲಭದ ಗುರಿ ಆಗಿದ್ದು, ಬರೀ ಸಿಂಗಲ್ ರನ್‌ಗಳನ್ನು ಓಡುವ ಮೂಲಕವೇ ಕೆಕೆಆರ್ ಪಂದ್ಯ ಗೆಲ್ಲಬಹುದಾಗಿತ್ತು. ಆದರೆ, ಆರಂಭ, ಮಧ್ಯಮ ಕ್ರಮಾಂಕದಲ್ಲಿ ಬಂದವರೂ ಸಹ ಜೋರಾಗಿ ಬ್ಯಾಟ್ ಬೀಸಲು ಹೋಗಿ ಜವಾಬ್ದಾರಿಯುತ ಆಟ ಆಡದೇ ತನ್ನೆಲ್ಲಾ ವಿಕೆಟ್‌ಗಳನ್ನು ಒಪ್ಪಿಸಿಬಿಟ್ಟರು.
ಪಂಜಾಬ್ ಪರ ಬೌಲಿಂಗ್ ಮಾಡಿದ ಚಹಾಲ್ 4 ವಿಕೆಟ್ ಪಡದು ಮಿಂಚಿದರು. ಇನ್ನೂ ಜಾನ್ಸನ್ 3, ಕ್ಸವೀರ್, ಅರ್ಷ್‌ದೀಪ್ ಸಿಂಗ್, ಗ್ಲೇನ್ ಮ್ಯಾಕ್ಸ್‌ವೆಲ್ ತಾಲಾ 1 ವಿಕೆಟ್‌ಗಳನ್ನು ಪಡೆದು ಪಂಜಾಬ್ ಗೆಲುವಿಗೆ ಪ್ರಮುಖ ಪಾತ್ರವಾಹಿಸಿದರು. ಅದರಲ್ಲೂ ಚಹಾಲ್ ಅವರು ಬೌಲಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು ಎಂದರೆ ತಪ್ಪಾಗಲಾರದು. ಇನ್ನೂ ಅತೀ ಕಡಿಮೆ ಸ್ಕೋರ್ ಮಾಡಿ ಪಂಜಾಬ್ ಎರಡು ಬಾರಿ ಗೆದ್ದು ಬೀಗಿದೆ.
* ಐಪಿಎಲ್ 2025ರಲ್ಲಿ ಪಂಜಾಬ್ ಕಿಂಗ್ಸ್ ಕೇವಲ 111 ರನ್‌ಗಳ ಅತೀ ಕಡಿಮೆ ರನ್‌ಗಳನ್ನು ರಕ್ಷಿಸಿ ಕೆಕೆಆರ್ ವಿರುದ್ಧ 16 ರನ್‌ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ದಾಖಲೆಯನ್ನೇ ಮಾಡಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ 2009ರಲ್ಲಿ ಸಿಎಸ್‌ಕೆ ರಕ್ಷಿಸಿದ 116 ರನ್‌ಗಳ 16 ವರ್ಷಗಳ ಹಳೆಯ ದಾಖಲೆಯನ್ನು ನುಚ್ಚುನೂರು ಮಾಡಿದೆ.
* ಚಂಡೀಗಢದಲ್ಲಿ ನಿನ್ನೆ ನಡೆದ ಈ ಕೆಕೆಆರ್ ಸುಲಭವಾಗಿ ಗೆಲ್ಲುವ ಸ್ಥಿತಿಯಲ್ಲಿತ್ತು, ಆದರೆ ಚಹಲ್ ಮತ್ತು ಜಾನ್ಸನ್ ಬೌಲಿಂಗ್ ದಾಳಿಗೆ ವಿಕೆಟ್ ಕಳೆದುಕೊಂಡು ದಿಢೀರ್ ನೆಲಕಚ್ಚಿತು. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಈ ಗೆಲುವಿನ ಮೂಲಕ ಐಪಿಎಲ್‌ನಲ್ಲಿ ಕಡಿಮೆ ಅತೀ ಕಡಿಮೆ ರನ್‌ಗಳನ್ನು ರಕ್ಷಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿತು.
* 2009ರಲ್ಲಿ ಸಿಎಸ್‌ಕೆ ಇದೇ ಇಲೆವನ್ ಪಂಜಾಬ್ ವಿರುದ್ಧ 116 ರನ್‌ಗಳನ್ನು ರಕ್ಷಿಸಿ ಗೆದ್ದು ದಾಖಲೆ ನಿರ್ಮಾಣ ಮಾಡಿತ್ತು. ಮುತ್ತಯ್ಯ ಮುರಳೀಧರನ್ (2/8) ಮತ್ತು ಅಶ್ವಿನ್ (2/13), ರೈನಾ (17ಕ್ಕೆ2) ಬೌಲಿಂಗ್‌ನಿಂದ ಪಂಜಾಬ್ 92/8ಕ್ಕೆ ಸೀಮಿತವಾಗಿ 24 ರನ್‌ಗಳ ಹೀನಾಯ ಸೋಲನುಭವಿಸಿತ್ತು. ಇದೀಗ, ಪಂಜಾಬ್ ಈ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ.
1. ಪಂಜಾಬ್ ಕಿಂಗ್ಸ್
* ರನ್ - 111
* ಎದುರಾಳಿ: ಕೆಕೆಆರ್
* ಕೆಕೆಆರ್ ವಿರುದ್ಧ ಪಂಜಾ 16 ರನ್‌ಗಳಿಂದ ಗೆಲುವು
* ಪಂದ್ಯದ ದಿನಾಂಕ - 2025 ಏಪ್ರಿಲ್ 15
2. ಸಿಎಸ್‌ಕೆ
* ರನ್ - 116/9
* ಎದುರಾಳಿ - ಕಿಂಗ್ಸ್ ಇಲೆವನ್ ಪಂಜಾಬ್
* ಪಂಜಾಬ್ ವಿರುದ್ಧ ಸಿಎಸ್‌ಕೆ 24 ರನ್‌ಗಳಿಂದ ಗೆಲುವು
* ಪಂದ್ಯದ ದಿನಾಂಕ - 2009 ಮೇ 20
3. ಸನ್‌ರೈಸರ್ಸ್ ಹೈದರಾಬಾದ್
* ರನ್ - 118
* ಎದುರಾಳಿ - ಮುಂಬೈ ಇಂಡಿಯನ್ಸ್
* ಮುಂಬೈ ಇಂಡಿಯನ್ಸ್ ವಿರುದ್ಧ ಎಸ್‌ಆರ್‌ಎಚ್ 31 ರನ್‌ಗಳಿಂದ ಗೆಲುವು
* ಪಂದ್ಯದ ದಿನಾಂಕ - 2018 ಮೇ 24
4. ಕಿಂಗ್ಸ್ ಇಲೆವನ್ ಪಂಜಾಬ್
* ರನ್ - 119/8
* ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ 24 ರನ್‌ಗಳಿಂದ ಗೆಲುವು
* ಪಂದ್ಯದ ದಿನಾಂಕ - 2009 ಏಪ್ರಿಲ್ 20
5. ಎಸ್‌ಆರ್‌ಎಚ್
* ರನ್ - 119/8
* ಪುಣೆ ವಾರಿಯರ್ಸ್ ವಿರುದ್ಧ ಎಸ್‌ಆರ್‌ಎಚ್ 11 ರನ್‌ಗಳಿಂದ ಗೆಲುವು
* ಪಂದ್ಯದ ದಿನಾಂಕ - 2013 ಏಪ್ರಿಲ್ 17
6. ಮುಂಬೈ ಇಂಡಿಯನ್ಸ್
* ರನ್ - 120/9
* ಪುಣೆ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 1 ರನ್‌ನಿಂದ ಗೆಲುವು
* ಪಂದ್ಯದ ದಿನಾಂಕ - 2012 ಮೇ 3
7. ಪಂಜಾಬ್ ಕಿಂಗ್ಸ್
* ರನ್ - 125/7
* ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ 5 ರನ್‌ಗಳಿಂದ ಗೆಲುವು
* ಪಂದ್ಯದ ದಿನಾಂಕ - 2021 ಸೆಪ್ಟೆಂಬರ್ 25
8. ರಾಯಲ್ ಚಾಲೆಂಜರ್ಸ್ ಬೆಂಗಳೂರು
* ರನ್ - 126/8
* ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ 14 ರನ್‌ಗಳಿಂದ ಗೆಲುವು
* ಪಂದ್ಯದ ದಿನಾಂಕ 2008 ಮೇ 21
9. ಸನ್‌ರೈಸರ್ಸ್ ಹೈದರಾಬಾದ್
* ರನ್ - 126/6
* ಪುಣೆ ವಾರಿಯರ್ಸ್ ವಿರುದ್ಧ ಎಸ್‌ಆರ್‌ಎಚ್ 22 ರನ್‌ಗಳಿಂದ ಗೆಲುವು
* ಪಂದ್ಯದ ದಿನಾಂಕ - 2013 ಏಪ್ರಿಲ್ 5
10. ಕಿಂಗ್ಸ್ ಇಲೆವನ್ ಪಂಜಾಬ್
* ರನ್ - 126/7
* ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ 12 ರನ್‌ಗಳಿಂದ ಗೆಲುವು
* ಪಂದ್ಯದ ದಿನಾಂಕ - 2020 ಅಕ್ಟೋಬರ್ 24
11. ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಮೊತ್ತ - 126/9
* ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಆರ್‌ಸಿಬಿ 18 ರನ್‌ಗಳಿಂದ ಗೆಲುವು
* ಪಂದ್ಯದ ದಿನಾಂಕ - 2023 ಮೇ 1












Click it and Unblock the Notifications