KL Rahul: ವಿರಾಟ್ ಕೊಹ್ಲಿ ದಾಖಲೆ ಮುರಿದ ಕೆಎಲ್ ರಾಹುಲ್
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ಗುಜರಾತ್ ಟೈಟಾನ್ಸ್ ವಿರುದ್ಧ ಅಮೋಘ ಶತಕ ಗಳಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಅವರು 65 ಎಸೆತಗಳಲ್ಲಿ 14 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 112 ರನ್ ಗಳಿಸಿ ಮಿಂಚಿದರು. ಈ ಶತಕದ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದರು.
ಕೆಎಲ್ ರಾಹುಲ್ ಟಿ20 ಕ್ರಿಕೆಟ್‌ನಲ್ಲಿ 8,000 ರನ್ ಗಳಿಸುವ ಮೂಲಕ ಮತ್ತೊಂದು ದಾಖಲೆ ಬರೆದರು. ವಿರಾಟ್ ಕೊಹ್ಲಿ ಅವರಿಗಿಂತ ವೇಗವಾಗಿ ಟಿ20 ಕ್ರಿಕೆಟ್‌ನಲ್ಲಿ 8000 ರನ್ ಪೂರೈಸಿದ ಸಾಧನೆ ಮಾಡಿದರು. ಕೆಎಲ್ ರಾಹುಲ್ ತಮ್ಮ 237 ನೇ ಟಿ20 ಪಂದ್ಯದಲ್ಲಿ 224 ಇನ್ನಿಂಗ್ಸ್‌ಗಳಲ್ಲಿ 8000 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ತಮ್ಮ 243 ನೇ ಇನ್ನಿಂಗ್ಸ್‌ನಲ್ಲಿ 8,000 ರನ್ ಗಳಿಸಿದ್ದ ಸಾಧನೆ ಮಾಡಿದ್ದರು. ಶಿಖರ್ ಧವನ್ 277 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ್ದರು.

5ನೇ ಐಪಿಎಲ್ ಶತಕ ಸಿಡಿಸಿದ ಕೆಎಲ್ ರಾಹುಲ್
ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದ ಬಳಿಕ ಕೆಎಲ್ ರಾಹುಲ್ ತಮ್ಮ 5 ನೇ ಐಪಿಎಲ್ ಶತಕವನ್ನು ಬಾರಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಇದೇ ಮೊದಲ ಬಾರಿಗೆ ಆರಂಭಿಕರಾಗಿ ಕಣಕ್ಕಿಳಿದ ಅವರು 20 ನೇ ಓವರ್‌ನವರೆಗೆ ಅಜೇಯರಾಗಿ ಉಳಿದರು. ಕೇವಲ 65 ಎಸೆತಗಳಲ್ಲಿ 14 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿವೆ. ಕೆಎಲ್ ರಾಹುಲ್ ಅವರ ಅಮೋಘ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತು.
ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರು
ವಿರಾಟ್ ಕೊಹ್ಲಿ - 8
ಜೋಸ್ ಬಟ್ಲರ್ - 7
ಕ್ರಿಸ್ ಗೇಲ್ - 6
ಕೆಎಲ್ ರಾಹುಲ್ - 5
ಶುಭ್‌ಮನ್ ಗಿಲ್ - 4
ಶೇನ್ ವ್ಯಾಟ್ಸನ್ - 4
ಡೇವಿಡ್ ವಾರ್ನರ್ - 4
ಯಾವುದೇ ಕ್ರಮಾಂಕವಾದರೂ ಸಿದ್ದ!
ಕೆಎಲ್ ರಾಹುಲ್ ಈ ಐಪಿಎಲ್ ಆವೃತ್ತಿಯಲ್ಲಿ ಹಲವು ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳಿಸಿದರೂ ತಾನು ರನ್ ಗಳಿಸುತ್ತೇನೆ ಎಂದು ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್‌ನ ಆಧಾರಸ್ಥಂಭವಾಗಿದ್ದಾರೆ. 11 ಪಂದ್ಯಗಳಲ್ಲಿ 62.62 ಸರಾಸರಿ 148.04 ಸ್ಟ್ರೈಕ್‌ರೇಟ್‌ನಲ್ಲಿ 493 ರನ್ ಗಳಿಸಿದ್ದಾರೆ.












Click it and Unblock the Notifications