Get Updates
Get notified of breaking news, exclusive insights, and must-see stories!

Karun Nair: ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಶ್ವದಾಖಲೆ ಬರೆದ ಕನ್ನಡಿಗ ಕರುಣ್ ನಾಯರ್

ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕನ್ನಡಿಗ ಕರುಣ್ ನಾಯರ್ ವಿಶ್ವದಾಖಲೆ ಬರೆದಿದ್ದಾರೆ. ಕರ್ನಾಟಕ ತೊರೆದು ವಿದರ್ಭ ತಂಡಕ್ಕಾಗಿ ಆಡುತ್ತಿರುವ ಕರುಣ್ ನಾಯರ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಂದು (ಶುಕ್ರವಾರ, ಜನವರಿ 3) ನಡೆದ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಅವರು ಈ ದಾಖಲೆ ಬರೆದರು.

ಸತತ ಮೂರನೇ ಶತಕ ಸಿಡಿಸಿದ ಅವರು ಈ ದಾಖಲೆ ಮಾಡಿದರು. ಉತ್ತರ ಪ್ರದೇಶ ನಿಡಿದ್ದ 308 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಕರುಣ್ ನಾಯರ್ 112 ರನ್ ಗಳಿಸಿದರು. ಆರಂಭಿಕ ಬ್ಯಾಟರ್ ಯಶ್ ರಾಥೋಡ್ ಕೂಡ ಶತಕ ಸಿಡಿಸಿದರು. ಕರುಣ್ ನಾಯರ್ 70 ರನ್‌ಗಳನ್ನು ಗಳಿಸಿದ್ದಾಗ ಹೊಸ ದಾಖಲೆ ನಿರ್ಮಾಣವಾಯಿತು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಔಟಾಗದೆ ಒಟ್ಟಾರೆ 500 ರನ್ ಗಳಿಸಿ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡರು.

Karun nair world record list a century vijay hazare trophy 2024

ಕರ್ನಾಟಕ ತೊರೆದು ವಿದರ್ಭ ಸೇರಿರುವ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಅಜೇಯ 112 ರನ್ ಗಳಿಸಿ ಪಂದ್ಯಾವಳಿಯನ್ನು ಆರಂಭಿಸಿದ ಅವರು, ಬಳಿಕ ಛತ್ತೀಸ್‌ಗಢದ ವಿರುದ್ಧ ಅಜೇಯ 44 ರನ್ ಗಳಿಸಿದರು. ಬಳಿಕ ಚಂಡೀಗಢ ವಿರುದ್ಧ ಅಜೇಯ 163 ರನ್ ಮತ್ತು ತಮಿಳುನಾಡು ವಿರುದ್ಧ ಅಜೇಯ 111 ರನ್ ಗಳಿಸಿದ್ದರು.

ಉತ್ತರ ಪ್ರದೇಶ ವಿರುದ್ಧ ಶತಕ ಗಳಿಸಿದ ಅವರು 527 ರನ್‌ಗಳ ದಾಖಲೆಯನ್ನು ಹೊಂದಿದ್ದ ನ್ಯೂಜಿಲೆಂಡ್‌ನ ಜೇಮ್ಸ್ ಫ್ರಾಂಕ್ಲಿನ್ ಅವರ ದಾಖಲೆ ಮುರಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಔಟಾಗದೆ 542 ರನ್ ಗಳಿಸಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಹರಾಜು

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಕರುಣ್ ನಾಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹರಾಜಾದರು. ಕರುಣ್ ನಾಯರ್ ತಮ್ಮ ಮೂಲ ಬೆಲೆ 50 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು, ಯಾವುದೇ ತಂಡ ಅವರನ್ನು ಖರೀದಿಸಲು ಆಸಕ್ತಿ ತೋರಿಸದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಮೂಲ ಬೆಲೆಗೆ ಖರೀದಿಸಿತು.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಔಟಾಗದೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

ಕರುಣ್ ನಾಯರ್ - 542 ರನ್
ಜೇಮ್ಸ್ ಫ್ರಾಂಕ್ಲಿನ್ - 527 ರನ್
ಜೋಶುವಾ ವ್ಯಾನ್ ಹೀಡ್ರೇನ್- 512 ರನ್
ಫಖರ್ ಜಮಾನ್ - 455 ರನ್
ತೌಫೀಕ್ ಉಮರ್ - 422 ರನ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+