ಕ್ಯಾಚ್ ಪಡೆಯಲು ಹರಾಸಾಹಸ: ಇಬ್ಬರು ಆಟಗಾರರ ನಡುವೆ ಡಿಕ್ಕಿ; ವಿಡಿಯೋ ವೈರಲ್
ಟಿ20 ಕ್ರಿಕೆಟ್ ಈಗ ಕುತೂಹಲ ಘಟ್ಟ ತಲುಪಿದೆ. ಎಲ್ಲ ತಂಡಗಳು ಮುಂದಿನ ಹಂತದತ್ತ ದೃಷ್ಟಿ ನೆಟ್ಟಿವೆ. ಇನ್ನೇನು ಕೆಲವೇ ದಿನಗಳಲ್ಲಿ ಸೂಪರ್ 8 ಹಂತದ ಪಂದ್ಯಗಳು ಮುಗಿಯಲಿದ್ದು, ಸೆಮಿಫೈನಲ್ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ. ಈ ರೋಚಕತೆಯ ಮಧ್ಯ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಸೂಪರ್ 8 ಹಂತದ ಪಂದ್ಯದ ವೇಳೆ ಕ್ಯಾಚ್‌ಗಾಗಿ ಇಬ್ಬರು ಆಟಗಾರರು ಹರಸಾಹಸ ಪಟ್ಟಿರುವ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ.
ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಮುಗಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 135 ರನ್ ಗಳಿಸಿತು. ಪಂದ್ಯಕ್ಕೆ ಮಳೆ ಕಾಟ ನೀಡಿದ್ದರಿಂದ ಪಂದ್ಯವನ್ನು 17 ಓವರ್‌ಗಳಲ್ಲಿ 123 ರನ್‌ಗಳಿಗೆ ಇಳಿಸಲಾಯಿತು. ಈ ಮೊತ್ತವನ್ನು ದಕ್ಷಿಣ ಆಫ್ರಿಕಾ 16.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ದಕ್ಷಿಣ ಆಫ್ರಿಕಾ ಈ ಗೆಲುವಿನ ಮೂಲಕ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿದೆ.

ಕ್ಯಾಚ್‌ಗಾಗಿ ಮೈದಾನದಲ್ಲಿ ಜಿದ್ದು
ಈ ಪಂದ್ಯದಲ್ಲಿ ವೇಳೆ ದಕ್ಷಿಣ ಆಫ್ರಿಕಾದ ಇಬ್ಬರು ಆಟಗಾರರು ಕ್ಯಾಚ್ ಪಡೆಯಲು ಜಿದ್ದಾಜಿದ್ದಿ ನಡೆಸಿದ್ದು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ. ಕಗಿಸೊ ರಬಾಡ ಮತ್ತು ಮಾರ್ಕೊ ಜಾನ್ಸೆನ್ ಕ್ಯಾಚ್ ತೆಗೆದುಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿರುವ ವಿಡಿಯೋ ಸದ್ದು ಮಾಡುತ್ತಿದೆ.. ದಕ್ಷಿಣ ಆಫ್ರಿಕಾ ಪರ 8ನೇ ಓವರ್ ಬೌಲ್ ಮಾಡಲು ನಾಯಕ ಏಡನ್ ಮಾರ್ಕ್ರಾಮ್ ಮುಂದಾದರು. ವಿಂಡೀಸ್ ತಂಡದ ಕೈಲ್ ಮೇಯರ್ಸ್ ಏಡೆನ್ ಮಾರ್ಕ್ರಾಮ್ ಅವರ ಎಸೆತವನ್ನು ಸ್ಟ್ರೇಟ್ ಬಿಗ್ ಹಿಟ್ ಬಾರಿಸಿದರು. ಚೆಂಡು ಸಿಕ್ಸರ್ ಹೋಗುವುದನ್ನು ತಡೆಯಲು ರಬಾಡ್, ಜಾನ್ಸೆನ್ ಭರ್ಜರಿ ಪೈಪೋಟಿ ನಡೆಸಿದರು.
ಇಬ್ಬರೂ ಕ್ಯಾಚ್ ಪಡೆಯಲು ಗಾಳಿಯಲ್ಲಿ ಎರಗಿದರು. ಪರಸ್ಪರ ಇಬ್ಬರೂ ಆಟಗಾರರು ಡಿಕ್ಕಿ ಹೊಡೆದರು. ಇದರ ತೀವ್ರತೆ ಹೆಚ್ಚಾಗಿತ್ತು. ಹೀಗಾಗಿ ಇಬ್ಬರೂ ಕೆಲ ಕಾಲ ನೋವಿನಿಂದ ಮೈದಾನದಲ್ಲಿ ಒದ್ದಾಡಿದರು. ನಂತರ ಫಿಸಿಯೊ ಮೈದಾನಕ್ಕೆ ಪ್ರವೇಶಿಸಿದರು. ಐಸಿಸಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಿಂದ ವೀಡಿಯೊವನ್ನು ಹಂಚಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

ಎಂಟನೇ ಓವರ್‌ನ ಐದನೇ ಎಸೆತವನ್ನು ಮಾರ್ಕ್ರಾಮ್ ಮಿಡಲ್ ಮತ್ತು ಲೆಗ್ ಸ್ಟಂಪ್‌ನಲ್ಲಿ ಬೌಲ್ ಮಾಡಿದರು, ಅದನ್ನು ಮೇಯರ್ಸ್ ಗಾಳಿಯಲ್ಲಿ ಸಿಕ್ಸ್ ಬಾರಿಸಲು ಮುಂದಾದರು. ದಕ್ಷಿಣ ಆಫ್ರಿಕಾದ ಇಬ್ಬರು ವೇಗದ ಬೌಲರ್‌ಗಳಾದ ಕಗಿಸೊ ರಬಾಡ ಮತ್ತು ಮಾರ್ಕೊ ಜಾನ್ಸೆನ್ ಅವರು ಲಾಂಗ್ ಆನ್ ಮತ್ತು ಲಾಂಗ್ ಆಫ್‌ನಲ್ಲಿ ಚೆಂಡನ್ನು ಹಿಡಿಯಲು ಸಿದ್ಧರಾಗಿದ್ದರು. ಇಬ್ಬರೂ ಚೆಂಡನ್ನು ಹಿಡಿಯುತ್ತೇವೆ ಎಂದು ಭಾವಿಸಿದ್ದರು, ಆದರೆ ಈ ಪ್ರಕ್ರಿಯೆಯಲ್ಲಿ ಇಬ್ಬರೂ ಡಿಕ್ಕಿ ಹೊಡೆದರು. ಕ್ಯಾಚ್ ಹಿಡಿಯಲು ಥವಾ ಚೆಂಡನ್ನು ತಡೆಯಲು ಸಹ ಈ ಆಟಗಾರರಿಗೆ ಆಗಲಿಲ್ಲ. ಈ ಮಧ್ಯೆ, ರಬಾಡ ಅವರ ಮೊಣಕಾಲು, ಯಾನ್ಸೆನ್ ಅವರ ಹೊಟ್ಟೆಗೆ ತೀವ್ರವಾದ ಗಾಯವನ್ನು ಉಂಟುಮಾಡಿತು.












Click it and Unblock the Notifications