Jwala Gutta: 30 ಲೀ. ಎದೆ ಹಾಲು ದಾನ ಮಾಡಿ ನವಜಾತ ಶಿಶುಗಳ ಜೀವ ಉಳಿಸಿದ ಬ್ಯಾಡ್ಮಿಂಟನ್ ತಾರೆ

ಕಾಮನ್‌ವೆಲ್ತ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತಕ್ಕಾಗಿ ಹಲವು ಪದಕಗಳನ್ನು ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಇದೀಗ ನಿಸ್ವಾರ್ಥ ಸೇವೆಯ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದ ನಂತರ, ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಎದೆ ಹಾಲು ಅಭಿಯಾನಕ್ಕೆ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ.

ವಿಶಾಲ್ ಮತ್ತು ಜ್ವಾಲಾ ಗುಟ್ಟಾ ದಂಪತಿಗೆ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದು, ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ತಮ್ಮ ಮಗುವಿಗೆ ಹಾಲುಣಿಸಿದ ನಂತರ ಉಳಿದ ಎದೆಹಾಲನ್ನು ಹಲವು ನವಜಾತ ಶಿಶುಗಳಿಗೆ ದಾನ ಮಾಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ, ಅವರು ಪ್ರತಿದಿನ ಸರ್ಕಾರಿ ಆಸ್ಪತ್ರೆಗಳಿಗೆ 600 ಮಿಲಿಲೀಟರ್ ಅಂದರೆ ನಾಲ್ಕು ತಿಂಗಳಲ್ಲಿ 30 ಲೀಟರ್ ಹಾಲು ಎದೆಹಾಲು ದಾನ ಮಾಡಿದ್ದು, ಇದೀಗ ಎಲ್ಲೆಡೆಯಿಂದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪತಿ, ನಟ-ನಿರ್ಮಾಪಕ ವಿಷ್ಣು ವಿಶಾಲ್ ಅವರೊಂದಿಗೆ ಮಗು ಮೀರಾಗೆ ತಾಯಿಯಾದ ಜ್ವಾಲಾ, ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ಹಂಚಿಕೊಂಡರು, ಅಕಾಲಿಕ ಮತ್ತು ತೀವ್ರ ಅಸ್ವಸ್ಥ ಶಿಶುಗಳಿಗೆ ಎದೆಹಾಲಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.

Jwala Gutta Donates 30 Litres Of Breast Milk Internet Applauds Noble Cause

ಆಗಸ್ಟ್‌ನಲ್ಲಿ, ಜ್ವಾಲಾ ತಮ್ಮ ಎಕ್ಸ್ (ಹಿಂದೆ ಟ್ವಿಟರ್) ಹ್ಯಾಂಡಲ್‌ನಲ್ಲಿ ತಮ್ಮ ಧ್ಯೇಯವನ್ನು ಹೇಳಿಕೊಂಡಿದ್ದು, "ಎದೆ ಹಾಲು ಜೀವಗಳನ್ನು ಉಳಿಸುತ್ತದೆ. ಅಕಾಲಿಕ ಮತ್ತು ಅನಾರೋಗ್ಯ ಪೀಡಿತ ಶಿಶುಗಳಿಗೆ, ದಾನಿ ಹಾಲು ಜೀವನವನ್ನು ಬದಲಾಯಿಸಬಹುದು. ನೀವು ದಾನ ಮಾಡಲು ಸಾಧ್ಯವಾದರೆ, ನೀವು ಅಗತ್ಯವಿರುವ ಕುಟುಂಬಕ್ಕೆ ನಾಯಕನಾಗಬಹುದು ಎಂದು ಬರೆದು ಕೊಂಡಿದ್ದಾರೆ. ವರದಿಗಳ ಪ್ರಕಾರ, ಜ್ವಾಲಾ ಇಲ್ಲಿಯವರೆಗೆ 30 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ. ತಾಯಂದಿರಿಲ್ಲದ ಶಿಶುಗಳಿಗೆ ಹಾಗೂ ಆಸ್ಪತ್ರೆಗಳಲ್ಲಿರುವ ಅಕಾಲಿಕ ಅಥವಾ ತೀವ್ರ ಅಸ್ವಸ್ಥ ಶಿಶುಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಅವರು ನಿಯಮಿತವಾಗಿ ಹಾಲು ದಾನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಮೂಲಕ ಜ್ವಾಲಾ ಗುಟ್ಟಾ ಅವರು ತಾಯಂದಿರಿಂದ ಹಾಲು ಪಡೆಯಲು ಸಾಧ್ಯವಾಗದ ಅಸಹಾಯಕ ಶಿಶುಗಳಿಗೆ ತಾಯಿಯಾಗಿದ್ದಾರೆ. ಅವರ ಆಪ್ತ ವೈದ್ಯೆ ಮಂಜುಳಾ ಅಂಗಾನಿ ಈ ನಿರ್ಧಾರಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದು ಗುಟ್ಟಾ ಹೇಳಿದ್ದಾರೆ. ತಾಯಿಯ ಹಾಲನ್ನು ಮಕರಂದ ಎಂದು ಪರಿಗಣಿಸಲಾಗುತ್ತದೆ. ಇದು ಮಗುವಿನ ದೇಹವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಜ್ವಾಲಾ ಅವರ ಈ ದಾನವು ಕೇವಲ ಸಹಾಯವಲ್ಲ, ಬದಲಾಗಿ ನೂರಾರು ಮುಗ್ಧ ಜೀವಗಳಿಗೆ ನೀಡಿದ ಹೊಸ ಜೀವನವಾಗಿದೆ.

ಜ್ವಾಲಾ ಗುಟ್ಟಾ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಬ್ಬ ಬಳಕೆದಾರರು, "ಅವರು ಅನೇಕ ಶಿಶುಗಳಿಗೆ ತಾಯಿ" ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, "ಇದು ಒಂದು ದೊಡ್ಡ ಕೊಡುಗೆ, ಅಂತಹ ಒಳ್ಳೆಯ ಕಾರ್ಯಗಳನ್ನು ಮಾಡಲು ಹೆಚ್ಚಿನವರು ಸಿದ್ಧರಿರುವುದಿಲ್ಲ. ಅವರ ಕೊಡುಗೆ ಅನೇಕ ಶಿಶುಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು. "ಅದ್ಭುತ...! ಜ್ವಾಲಾ ಗುಟ್ಟಾ, ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ! ಯಾವಾಗಲೂ ಚಾಂಪಿಯನ್," ಎಂದು ಒಬ್ಬ ವ್ಯಕ್ತಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+