John Cena: ಜಾನ್ ಸೀನ ಕುಸ್ತಿ ಮುಗಿದ ಅಧ್ಯಾಯ.. ಅಭಿಮಾನಿಗಳಿಗೆ ಆಘಾತ..
ಜಾನ್ ಸೀನ ಅಭಿಮಾನಿಗಳಿಗೆ ಇಂದು ಆಘಾತ ಎದುರಾಗಿದೆ, ಇಷ್ಟು ದಿನ ಜಾನ್ ಸೀನ ಅವರ ಕುಸ್ತಿ ನೋಡುತ್ತಾ ಕೇಕೆ ಹಾಕಿ ಎಂಜಾಯ್ ಮಾಡುತ್ತಿದ್ದ ಅಭಿಮಾನಿಗಳಿಗೆ ಇದೀಗ ದೊಡ್ಡ ಆಘಾತವೇ ಎದುರಾಗಿದೆ. ಹಾಗಾದ್ರೆ ಏನಾಯ್ತು ಕುಸ್ತಿಪಟು & ಹಾಲಿವುಡ್ ನಟ ಜಾನ್ ಸೀನ ಅವರಿಗೆ? ಅಭಿಮಾನಿಗಳಿಗೆ ಸಿಕ್ಕಿರುವ ಆಘಾತಕಾರಿ ಸುದ್ದಿ ಏನು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ವೃತ್ತಿಪರ ಕುಸ್ತಿಪಟು ಎನಿಸಿಕೊಂಡ ಜಾನ್ ಸೀನಾ ಯಾರಿಗೆ ಗೊತ್ತಿಲ್ಲ ಹೇಳಿ? WWE ಸೂಪರ್ ಸ್ಟಾರ್ ಜಾನ್ ಸೀನ ಜಗತ್ತಿನ ವಿವಿಧ ದೇಶಗಳಲ್ಲಿ ಚಿರಪರಿಚಿತ. ಅದ್ರಲ್ಲೂ ಸೀನ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಇಂತಿಪ್ಪ ಜಾನ್ ಸೀನಾ, ಆಗಾಗ ಸುದ್ದಿಯಲ್ಲೂ ಇರುತ್ತಾರೆ. ಆದ್ರೆ ಈ ಬಾರಿ ಬೇರೆಯದ್ದೇ ವಿಷಯಕ್ಕೆ ಸಂಚಲನ ಸೃಷ್ಟಿ ಮಾಡಿದ್ದಾರೆ. ಕೋಟ್ಯಂತರ ಫ್ಯಾನ್ಸ್ ಹೊಂದಿರುವ ಜಾನ್ ಸೀನ ಅವರು ಆಟ ಮುಗಿಸಿದ್ದು, ಅಭಿಮಾನಿಗಳಿಗೆ ಆಘಾತ ನೀಡಿದೆ.

ಅಭಿಮಾನಿಗಳಿಗೆ ಜಾನ್ ಸೀನ ಆಘಾತ!
ಜಾನ್ ಸೀನ ಅನ್ನೋ ಹೆಸರು ಸುಮ್ಮನೆ ಬಂದಿಲ್ಲ, ಹತ್ತಾರು ವರ್ಷಗಳ ಕಾಲ ಕಷ್ಟಪಟ್ಟಿದ್ದ ಜಾನ್ ಸೀನ ಕೊನೆಗೂ 2002 ರಲ್ಲಿ ಕಷ್ಟಪಟ್ಟು WWE ಕುಸ್ತಿ ಅಖಾಡಕ್ಕೆ ಬಂದಿದ್ದರು. ಆ ಬಳಿಕ ಜಾನ್ ಸೀನ ಅವರ ಬದುಕು ಬದಲಾಗಿ ಹೋಗಿತ್ತು. ಯಾಕಂದ್ರೆ ಜಾನ್ ಸೀನ ತಮ್ಮ ಜೀವನ ಪೂರ್ತಿ ಕಷ್ಟಗಳನ್ನೇ ನೋಡುತ್ತಾ ಬೆಳೆದವರು. ಕೈಯಲ್ಲಿ ಕಾಸು ಇಲ್ಲದೆ, ಊಟಕ್ಕೆ ಕೂಡ ಪರದಾಡಿದ್ದ ವ್ಯಕ್ತಿ. ಆದರೆ ಇಂದು, ಸಾವಿರಾರು ಕೋಟಿ ಆಸ್ತಿಯ ಒಡೆಯನಾದ ಈ ವ್ಯಕ್ತಿ ಇದೀಗ WWE ಕುಸ್ತಿ ಅಖಾಡದಿಂದ ನಿವೃತ್ತಿ ಪಡೆಯುತ್ತಿರುವ ಬಗ್ಗೆ ಘೋಷಣೆ ಹೊರಡಿಸಿದ್ದು ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications