IPL: ಐಪಿಎಲ್ ಪಂದ್ಯಗಳ ಸಂಖ್ಯೆ ಹೆಚ್ಚಿಸಲು ಚಿಂತನೆ

ಐಪಿಎಲ್ 2025ರ ಆವೃತ್ತಿಯ ರೋಚಕ ಹಂತದಲ್ಲಿರುವಾಗಲೇ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಮುಂಬರುವ ವರ್ಷಗಳಲ್ಲಿ ಐಪಿಎಲ್ ಮತ್ತಷ್ಟು ರೋಚಕವಾಗಲಿದೆ. ಯಾಕೆಂದರೆ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಗಂಭೀರವಾದ ಚಿಂತನೆ ನಡೆದಿದೆ. ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ 74 ಪಂದ್ಯಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ 94 ಪಂದ್ಯಗಳನ್ನು ನಡೆಸಲು ಬಿಸಿಸಿಐ ಗಂಭೀರವಾಗಿ ಚಿಂತನೆ ನಡೆಸಿದೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ದೃಢಪಡಿಸಿದ್ದಾರೆ.

2028ರಿಂದ ಐಪಿಎಲ್ ಪಂದ್ಯಗಳ ಸಂಖ್ಯೆ ಏರಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. 2022 ರಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಎಂಬ ಎರಡು ಹೊಸ ಫ್ರಾಂಚೈಸಿಗಳನ್ನು ಪರಿಚಯಿಸುವ ಮೂಲಕ ಐಪಿಎಲ್ ಪಂದ್ಯಗಳ ಸಂಖ್ಯೆ 74ಕ್ಕೆ ಏರಿಕೆ ಮಾಡಲಾಗಿತ್ತು. 2025 ರ ವೇಳೆಗೆ 84 ಪಂದ್ಯಗಳಿಗೆ ಏರಿಕೆ ಮಾಡುವ ಉದ್ದೇಶವಿದ್ದರೂ ಅಂತಾರಾಷ್ಟ್ರೀಯ ಪಂದ್ಯಗಳ ವೇಲಾಪಟ್ಟಿಯ ಕಾರಣದಿಂದ ಅದನ್ನು ಮಾಡಲು ಸಾಧ್ಯವಾಗಿಲ್ಲ.

ipl expansion 94 matches by 2028 arun dhumal

ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಜೊತೆ ಮಾತನಾಡಿರುವ ಧುಮಾಲ್, ದ್ವಿಪಕ್ಷೀಯ ಮತ್ತು ಐಸಿಸಿ ಪಂದ್ಯಾವಳಿಗಳಿಗೆ ಹೋಲಿಸಿದರೆ ಫ್ರಾಂಚೈಸಿ ಮತ್ತು ಟಿ20 ಕ್ರಿಕೆಟ್‌ನ ಬಗ್ಗೆ ಅಭಿಮಾನಿಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಈ ಬಗ್ಗೆ ಬಿಸಿಸಿಐ ಒಳಗೆ ಮತ್ತು ಐಸಿಸಿ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.

ನಾವು ಐಸಿಸಿಯಲ್ಲಿ ಚರ್ಚಿಸುತ್ತಿದ್ದೇವೆ, ಬಿಸಿಸಿಐನಲ್ಲಿ ಆಂತರಿಕವಾಗಿ ಚರ್ಚಿಸುತ್ತಿದ್ದೇವೆ. ಫ್ರಾಂಚೈಸಿ ಕ್ರಿಕೆಟ್ ಮತ್ತು ಟಿ 20 ಕ್ರಿಕೆಟ್‌ಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮತ್ತು ಐಸಿಸಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಭಿಮಾನಿಗಳ ಆಸಕ್ತಿ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ವಿವರಿಸಲಾಗಿದೆ ಎಂದರು.

100 ಪಂದ್ಯಗಳಿಗೆ ವಿಸ್ತರಣೆ?

ಐಪಿಎಲ್‌ನ ಆವೃತ್ತಿಯಲ್ಲಿ 94 ಪಂದ್ಯ ನಡೆದರೆ ಪ್ರತಿ ತಂಡವು ಉಳಿದ ಒಂಭತ್ತು ತಂಡಗಳ ಜೊತೆ ಎರಡು ಪಂದ್ಯ ಆಡಲಿದೆ. ತವರಿನಲ್ಲಿ ಒಂದು ತವರಿನ ಹೊರಗಡೆ ಒಂದು ಪಂದ್ಯ ನಡೆಯಲಿದೆ. ಇದರಿಂದ ಸ್ಪರ್ಧೆಯಲ್ಲಿ ಸಮತೋಲನ ಬರಲಿದೆ ಎಂದು ಧುಮಾಲ್ ಹೇಳಿದ್ದಾರೆ. ಆದರೂ ಏಕಾಏಕಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ, ಸದ್ಯ ಐಪಿಎಲ್‌ಗೆ 9 ವಾರಗಳ ಕಾಲವಾಕಶ ನೀಡಿದ್ದು ಪಂದ್ಯಗಳ ಸಂಖ್ಯೆ ಹೆಚ್ಚಾದ ಬಳಿಕ 11 ವಾರಗಳಿಗೆ ಏರಿಕೆಯಾಗಲಿದೆ.

ಫ್ಯೂಚರ್ ಟೂರ್ಸ್ ಪ್ರೋಗ್ರಾಂ (FTP) ನಲ್ಲಿ ಐಪಿಎಲ್‌ನ ಅಸ್ತಿತ್ವದಲ್ಲಿರುವ ವಿಂಡೋ 2027 ರವರೆಗೆ ಲಾಕ್ ಆಗಿದೆ. ಸದ್ಯ ಪಂದ್ಯಾವಳಿ ಮಾರ್ಚ್ ಮಧ್ಯದಿಂದ ಮೇ ಅಂತ್ಯದವರೆಗೆ ನಡೆಯುತ್ತದೆ. 2028ರ ಬಳಿಕ ಮಾಧ್ಯಮ ಹಕ್ಕುಗಳ ಹರಾಜು ನಡೆಯಲಿದ್ದು ಅದಾದ ಬಳಿಕ ಪಂದ್ಯಗಳ ಸಂಖ್ಯೆ ಏರಿಕೆಯಾಗಲಿದೆ.

ಸದ್ಯ ಐಪಿಎಲ್‌ನಲ್ಲಿ ಒಂದು ತಂಡವು 5 ತಂಡಗಳ ಜೊತೆ 2 ಪಂದ್ಯ ಆಡಲಿದ್ದು ಉಳಿದ ನಾಲ್ಕು ತಂಡಗಳ ಜೊತೆ 1 ಪಂದ್ಯ ಆಡಲಿದೆ. ಒಟ್ಟಾರೆ ಪ್ರತಿ ತಂಡ 14 ಪಂದ್ಯ ಆಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+