RCB: ಆರ್‌ಸಿಬಿಗೆ ಮತ್ತೊಬ್ಬ ಸ್ಟಾರ್ ಆಲ್‌ರೌಂಡರ್..
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಈ ಮೂಲಕ ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿತು. ಇದೀಗ ಎಲ್ಲರ ಚಿತ್ತ 19ನೇ ಸೀಸನ್‌ನತ್ತ ನೆಟ್ಟಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಹರಾಜು ಅಖಾಡಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ಸ್ಟಾರ್ ಆಲ್‌ರೌಂಡರ್‌ನತ್ತ ಚಿತ್ತ ನೆಟ್ಟಿದೆ. ಹಾಗಾದ್ರೆ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಡಿದ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಎತ್ತಿರಲಿಲ್ಲ. ಆದರೆ, 2025ರಲ್ಲಿ ಫೈನಲ್‌ನಲ್ಲಿ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಬೀಗುವ ಮೂಲಕ ಟ್ರೋಫಿ ಇಲ್ಲ ಎಂಬ ಕೊರಗಿಗೆ ತೆರೆ ಎಳೆಯಿತು. ಅಲ್ಲದೆ, ಅಭಿಮಾನಿಗಳ "ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯ" "ಈ ಸಲ ಕಪ್ ನಮ್ದು" ಎಂದಾಯಿತು.

ಎಲ್ಲಾ ಸೀಸನ್‌ಗಳಿಗಿಂತಲೂ ಆರ್‌ಸಿಬಿ 2025ರಲ್ಲಿ ಬಲಿಷ್ಠ ತಂಡವನ್ನು ಕಟ್ಟಿತ್ತು. ಇದೇ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣವಾಯಿತು. ಕೊನೆಯವರೆಗೂ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಘಟಾನುಘಟಿ ತಂಡಗಳನ್ನೇ ಬಗ್ಗುಬಡಿದು ಫೈನಲ್ ತಲುಪಿ ಕೊನೆಗೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಯಾರಾದರೂ ಒಬ್ಬ ಆಟಗಾರ ಗಾಯದಿಂದ ಹೊರಗುಳಿದರೆ, ಆ ಸ್ಥಾನವನ್ನು ತುಂಬಬಲ್ಲ ಆಟಗಾರರನ್ನು ಸಹ ಆರ್‌ಸಿಬಿ ಹೊಂದಿತ್ತು. ಇನ್ನೂ ರಿಟೈನ್ ಪ್ರಕ್ರಿಯೆ ವೇಳೆ ಆರ್‌ಸಿಬಿ ಬಹುತೇಕ ಕಳೆದ ಬಾರಿಯ ಆಟಗಾರರನ್ನೇ ಉಳಿಸಿಕೊಂಡಿದೆ. ಕೆಲವರನ್ನು ಮಾತ್ರ ಬಿಡುಗಡೆಗೊಳಿಸಿತು. ನಿರೀಕ್ಷಿಸಿದಷ್ಟು ಪ್ರದರ್ಶನ ತೋರದ ಹಾಗೂ ಬದಲಿಯಾಗಿ ತೆಗೆದುಕೊಂಡ ಆಟಗಾರರನ್ನು ಕೈಬಿಟ್ಟಿದೆ.
ಉತ್ತಮ ತಂಡ ಹೊಂದಿದ್ದರೂ ಸಹ ಮಿನಿ ಹರಾಜಿನಲ್ಲಿ ಇಬ್ಬರು ಆಲ್‌ರೌಂಡರ್‌ಗಳಿಗೆ ಗಾಳ ಹಾಕಲು ಆರ್‌ಸಿಬಿ ಭರ್ಜರಿ ಸಿದ್ಧತೆಯಲ್ಲಿದೆ. ಇದೀಗ ಹರಾಜಿಗೆ ಎಂಟ್ರಿ ಕೊಟ್ಟಿರುವ ಮಾಜಿ ಆಟಗಾರ ಕ್ಯಾಮೆರಾನ್ ಗ್ರೀನ್ ಮೇಲೆ ಕಣ್ಣಿಟ್ಟಿದೆ. ಐಪಿಎಲ್ ಹರಾಜು 2026ಕ್ಕಿಂತ ಮೊದಲು ಕ್ಯಾಮೆರಾನ್ ಗ್ರೀನ್ ಮಹತ್ವದ ಅಪ್ಡೇಟ್ ಕೊಟ್ಟಿದ್ದಾರೆ. ಇದರಿಂದ ಕ್ಯಾಮೆರಾನ್ ಗ್ರೀನ್ ಬೆಲೆ ದಿಢೀರ್ ಏರಿಕೆಯಾಗಲಿದೆ ಎಂದು ಹೇಳಲಾಗುತ್ತದೆ. ಆದರೂ ಆರ್‌ಸಿಬಿ ಇವರನ್ನು ಕೊಂಡುಕೊಳ್ಳಲು ತೆರೆಮರೆಯಲ್ಲಿ ಭಾರೀ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.
ಹರಾಜಿಗೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಕ್ಯಾಮೆರಾನ್ ಗ್ರೀನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ತಾವು ಐಪಿಎಲ್‌ನಲ್ಲಿ ಬೌಲಿಂಗ್ ಮಾಡಲು ಲಭ್ಯವಿರುವುದಾಗಿ ಭಾನುವಾರ ಸ್ಪಷ್ಟನೆ ನೀಡಿದ್ದಾರೆ.
ಆರ್‌ಸಿಬಿ ಮಾಜಿ ಆಟಗಾರ ಕ್ಯಾಮೆರಾನ್ ಗ್ರೀನ್ ಈ ಬಾರಿ ಹರಾಜಿಗೆ ತಮ್ಮ ಹೆಸರನ್ನು ನೊಂದಾಣಿ ಮಾಡಿಕೊಂಡಿದ್ದಾರೆ. ಆದರೆ, ಗ್ರೀನ್ ಮ್ಯಾನೇಜರ್ ಮಾಡಿದ ತಪ್ಪಿನಿಂದ ಮುಂದಿನ ವಾರ ನಡೆಯಲಿರುವ ಮಿನಿ ಹರಾಜಿನಲ್ಲಿ ತಮ್ಮನ್ನು ಬ್ಯಾಟ್ಸ್‌ಮನ್ ಎಂದು ತಪ್ಪಾಗಿ ನೋಂದಣಿ ಮಾಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಬೆನ್ನು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾಗ 2025ರ ಋತುವನ್ನು ತಪ್ಪಿಸಿಕೊಂಡಿದ್ದ 26 ವರ್ಷದ ಗ್ರೀನ್ ಜೂನ್‌ನಲ್ಲಿ ಬ್ಯಾಟ್ಸ್‌ಮನ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರು. ಆದರೂ, ಅವರಿಗೆ ಬೌಲಿಂಗ್ ಮಾಡಲು ಅನುಮತಿ ನೀಡಲಾಗಿದೆ ಮತ್ತು ಪ್ರಸ್ತುತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ನಡೆಯುತ್ತಿರುವ ಆಶಸ್ ಸರಣಿಯಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ನಾನು ಬೌಲಿಂಗ್ ಮಾಡಲು ಸಿದ್ಧನಾಗಿದ್ದೇನೆ. ನನ್ನ ಮ್ಯಾನೇಜರ್ ತಪ್ಪಾಗಿ ನೊಂದಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಅವರು 2023ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು 2024ರಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. ಹರಾಜಿನಲ್ಲಿ ಭಾಗವಹಿಸುವ ದೊಡ್ಡ ಹೆಸರುಗಳಲ್ಲಿ ಅವರೂ ಒಬ್ಬರಾಗಿದ್ದು, ಅವರಿಗಾಗಿ ದೊಡ್ಡ ಮೊತ್ತದ ಬಿಡ್ಡಿಂಗ್ ನಡೆಯುವ ನಿರೀಕ್ಷೆ ಇದೆ. ಗ್ರೀನ್ ಅವರ ಮೂಲ ಬೆಲೆ 2,00,00,000 ರೂಪಾಯಿ ಆಗಿದೆ. ಅವರನ್ನು ಆಲ್ ರೌಂಡರ್ ಬದಲಿಗೆ ಬ್ಯಾಟ್ಸ್‌ಮನ್‌ಗಳ ವರ್ಗದಲ್ಲಿ ಪಟ್ಟಿ ಮಾಡಲಾಗಿದೆ. ಹರಾಜು ಮಂಗಳವಾರ ಅಬುಧಾಬಿಯಲ್ಲಿ ನಡೆಯಲಿದೆ. ಈ ವೇಳೆ ಗ್ರೀನ್ ಅವರನ್ನು ಬಲೆಗೆ ಹಾಕಿಕೊಳ್ಳಲು ಆರ್‌ಸಿಬಿ ತಯಾರಿಸಿ ನಡೆಸಿದೆ ಎನ್ನಲಾಗುತ್ತಿದೆ.












Click it and Unblock the Notifications