IPL 2026 Auction: ಆರ್ಸಿಬಿ ಸ್ಟಾರ್ ಆಲ್ರೌಂಡರ್ ದಾಖಲೆ ಮೊತ್ತಕ್ಕೆ ಕೆಕೆಆರ್ ಸೇರ್ಪಡೆ
IPL 2026 Auction: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಚಿತ್ತ 2026ರ ಸೀಸನ್ ನೆಟ್ಟಿದ್ದು, ಇಂದು (ಡಿಸೆಂಬರ್ 16) ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ಆಸ್ಟ್ರೇಲಿಯಾ ಆಲ್ರೌಂಡರ್ ಹಾಗೂ ಮಾಜಿ ಆರ್ಸಿಬಿ ಆಟಗಾರ ಕ್ಯಾಮರೂನ್ ಗ್ರೀನ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿ ಮಾಡಿದೆ. ಹಾಗಾದ್ರೆ, ಎಷ್ಟಕ್ಕೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2026 ಮಿನಿ ಹರಾಜು ಪ್ರಕ್ರಿಯೆ ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ನಡೆಯುತ್ತಿದ್ದು, ಈ ವೇಳೆ ಕೆಆರ್ ಆಸ್ಟ್ರೇಲಿಯಾ ಸ್ಟಾರ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು 25.20 ಕೋಟಿ ರೂಪಾಯಿಹಗೆ ಖರೀದಿ ಮಾಡಿದೆ. ಈ ಹರಾಜು ಪ್ರಕ್ರಿಯೆಯನ್ನು ಮಲ್ಲಿಕಾ ಸಾಗರ್ ಅವರು ನಡೆಸಿಕೊಟ್ಟಿದ್ದಾರೆ.

ಅತ್ಯಧಿಕ ಮೊತ್ತಕ್ಕೆ ಗ್ರೀನ್ ಖರೀದಿ: ಐಪಿಎಲ್ ಇತಿಹಾಸದಲ್ಲೇ ವಿದೇಶಿ ಆಟಗಾರನೊಬ್ಬ ಇಷ್ಟೊಂದು ಮೊತ್ತಕ್ಕೆ ಮಾರಾಟ ಆಗಿರುವುದು ಇದೇ ಮೊದಲು. ಈ ಹಿಂದೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 24 ಕೋಟಿ ರೂಪಾಯಿಗಳನ್ನು ಪಡೆದಿದ್ದರು. ಇದೀಗ ಗ್ರೀನ್ ಅತ್ಯಧಿಕ ಹಣ ಪಡೆದ ಮೊದಲ ವಿದೇಶಿ ಆಟಗಾರರ ಪಟ್ಟಿದೆ ಸೇರಿದ್ದಾರೆ.
ಈ ಬಾರಿ ಐಪಿಎಲ್ನ ಹರಾಜಿನಲ್ಲಿ 77 ಸ್ಲಾಟ್ಗಳು ಖಾಲಿಯಿದ್ದು ಇದಕ್ಕಾಗಿ 10 ಫ್ರಾಂಚೈಸಿಗಳು ಪೈಪೋಟಿ ನಡೆಸುತ್ತಿವೆ. ಉತ್ತಮ ಆಟಗಾರರನ್ನು ಖರೀದಿ ಮಾಡಿಕೊಳ್ಳಲು ಎಲ್ಲಾ ಫ್ರಾಂಚೈಸಿಗಳು ಹಣವನ್ನು ಹೂಡಿಕೆ ಮಾಡುತ್ತಿವೆ.
ಕಳೆದ ಬಾರಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು 27 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿರುವುದು ಐಪಿಎಲ್ ಇತಿಹಾಸದಲ್ಲಿ ದಾಖಲೆಯಾಗಿಯಾಗೇ ಉಳಿದುಕೊಂಡಿದೆ. ಪಂತ್ ಬಳಿಕ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 26.75 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದು, ಇದು ಎರಡನೇ ಅತ್ಯಧಿಕ ಮೊತ್ತ ಆಗಿದೆ.
ದಾಖಲೆ ಮೊತ್ತಕ್ಕೆ ಅನ್ಕ್ಯಾಫ್ಡ್ ಆಟಗಾರರ ಖರೀದಿ: ಅದರಲ್ಲೂ ಎಲ್ಲಾ ಫ್ರಾಂಚೈಸಿಗಳು ಇದೀಗ ಅನ್ಕ್ಯಾಪ್ಡ್ ಪ್ಲೇಯರ್ಗಳನ್ನು ಕೊಂಡುಕೊಳ್ಳು ನಾಮುಂದು ತಾಮುಂದು ಅಂತಾ ಮುಗಿಬಿದ್ದಿವೆ. ಉತ್ತರ ಪ್ರದೇಶದ 20 ವರ್ಷದ ಯುವ ಆಲ್ರೌಂಡರ್ ಪ್ರಶಾಂತ್ ವೀರ್ ಅವರನ್ನು ರವೀಂದ್ರ ಜಡೇಜಾ ಅವರ ಸ್ಥಾನ ತುಂಬಬಲ್ಲ ಆಟಗಾರ ಎಂದು ಪರಿಗಣಿಸಿ ಸಿಎಸ್ಕೆ 14.20 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಖರೀದಿ ಮಾಡಿದೆ.
ಹಾಗೆಯೇ 19 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಕಾರ್ತಿಕ್ ಶರ್ಮಾ ಅವರಿಗೂ ಸಿಎಸ್ಕೆ ಅಷ್ಟೇ ಮೊತ್ತಕ್ಕೆ ಖರೀದಿ ಮಾಡಿತು. ಕಾರ್ತಿಕ್ ಅವರಿಗಾಗಿ ಕೆಕೆಆರ್ ಮತ್ತು ಸಿಎಸ್ಕೆ ನಡುವೆ ಭಾರೀ ಪೈಪೋಟಿ ನಡೆಯಿತು. ಕೊನೆಗೆ 14.20 ಕೋಟಿ ರೂಪಾಯಿಗೆ ಸಿಎಸ್ಕೆ ಪಾಲಾದರು. ಹೀಗೆ ಪ್ರಶಾಂತ್ ವೀರ್ ಹಾಗೂ ಕಾರ್ತಿಕ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್ಕ್ಯಾಪ್ಡ್ ಆಟಗಾರರು ಎಂದು ಗುರುತಿಸಿಕೊಂಡರು. ಇನ್ನೂ ಕೂಡ ಅನ್ಕ್ಯಾಪ್ಡ್ ಪ್ಲೇಯರ್ಗಳನ್ನು ಕೊಂಡುಕೊಳ್ಳಲು ಭಾರೀ ಪೈಪೋಟಿ ನಡೆಯುತ್ತಲಿದೆ.
-
Vaibhav Suryavanshi: ಸಂಜು ಟೀಂ ವಿರುದ್ಧವೇ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ವೈಭವ್ ಸೂರ್ಯವಂಶಿ -
IPL 2026: ಸಂಜು ಸ್ಯಾಮ್ಸನ್ 'ಓಪನಿಂಗ್ ಮ್ಯಾಚ್' 'ಮ್ಯಾಜಿಕ್' ದಾಖಲೆಗೆ ಬಿತ್ತು ಬ್ರೇಕ್ -
ಚಿನ್ನಸ್ವಾಮಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿಗೆ ಅವಮಾನ: ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದ 'ತುದಿ' ಪದ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
IPL 2026 Free Ticket: ರಾಜ್ಯದ ಶಾಸಕರಿಗೆ ಪ್ರತಿ ಪಂದ್ಯಕ್ಕೂ 3 ಟಿಕೆಟ್ ಉಚಿತ; ಡಿ.ಕೆ.ಶಿವಕುಮಾರ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications