IPL 2026 RCB: ಆರ್‌ಸಿಬಿಯಲ್ಲಿರುವ ಬ್ಯಾಟರ್ಸ್, ಬೌಲರ್ಸ್, ಆಲ್‌ರೌಂಡರ್ಸ್: ಇಲ್ಲಿದೆ ಸಂಪೂರ್ಣ ಪಟ್ಟಿ
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಮುಂದಿನ ಬಾರಿ 2026ರಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವತ್ತ ಚಿತ್ತ ನೆಟ್ಟಿದೆ. ಹಾಗಾದ್ರೆ, ತಂಡದಲ್ಲಿ ಇದೀಗ ಎಷ್ಟು ಮಂದಿ ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳು ಹಾಗೂ ಆಲ್‌ರೌಂಡರ್ಸ್ ಇದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ರಾಯಲ್ ಚಾಲೆಂಜಸರ್ ಬೆಂಗಳೂರು ತಂಡ ಐಪಿಎಲ್ 2026 ಮಿನಿ ಹರಾಜಿನ ಬಳಿಕ ಒಟ್ಟು 25 ಆಟಗಾರರನ್ನು ಹೊಂದಿದೆ. ಇದರಲ್ಲಿ ಬಹುತೇಕ ಎಲ್ಲಾರೂ ಸಹ ಉತ್ತಮವಾಗಿ ಪ್ರದರ್ಶನ ತೋರಬಲ್ಲವರಿದ್ದಾರೆ. 25 ಜನರಲ್ಲಿ 10 ಮಂದಿ ಬ್ಯಾಟರ್ಸ್, 8 ಬೌಲರ್ಸ್ ಹಾಗೂ ಆಲ್‌ರೌಡರ್‌ನಲ್ಲಿ ಆಡುವವರು 7 ಮಂದಿ ಇದ್ದಾರೆ. ಹಾಗಾದ್ರೆ ಅವರು ಯಾರು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬ್ಯಾಟರ್ಸ್ ಪಟ್ಟಿ
* ವಿರಾಟ್ ಕೊಹ್ಲಿ (ಭಾರತ)
* ದೇವದತ್ ಪಡಿಕ್ಕಲ್ (ಭಾರತ)
* ಫಿಲ್ ಸಾಲ್ಟ್ (ಇಂಗ್ಲೆಂಡ್)
* ರಜತ್ ಪಾಟಿದಾರ್ (ಭಾರತ)
* ಟಿಮ್ ಡೆವಿಟ್ (ಆಸ್ಟ್ರೇಲಿಯಾ)
* ಜಿತೇಶ್ ಶರ್ಮಾ (ಭಾರತ)
* ಜೇಕಬ್ ಬೆಥೆಲ್ (ಇಂಗ್ಲೆಂಡ್)
* ಜೋರ್ಡನ್ ಕಾಕ್ಸ್ (ಇಂಗ್ಲೆಂಡ್)
* ಅಭಿನಂದನ್ ಸಿಂಗ್ (ಭಾರತ)
* ವಿಹಾನ್ ಮಲ್ಹೋತ್ರಾ (ಭಾರತ)
ಬೌಲರ್‌ಗಳ ಪಟ್ಟಿ
* ಭುವನೇಶ್ವರ್ ಕುಮಾರ್ (ಭಾರತ)
* ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ)
* ನುವಾನ್ ತುಷಾರ (ಶ್ರೀಲಂಕಾ)
* ಯಶ್ ದಯಾಳ್ (ಭಾರತ)
* ರಸಿಕ್ ದಾರ್ (ಭಾರತ)
* ಸುಯೇಶ್ ಶರ್ಮಾ (ಭಾರತ)
* ಮಂಗೇಶ್ ಯಾದವ್ (ಭಾರತ)
* ಜೇಕಬ್ ಡಫ್ಫಿ (ಇಂಗ್ಲೆಂಡ್)
ಆಲ್‌ರೌಂಡರ್‌ಗಳು
* ಕೃನಾಲ್ ಪಾಂಡ್ಯ (ಭಾರತ)
* ವೆಂಕಟೇಶ್ ಅಯ್ಯರ್ (ಭಾರತ)
* ರೊಮಾರಿಯೋ ಶೆಫರ್ಡ್ (ವೆಸ್ಟ್ ಇಂಡೀಸ್)
* ಸ್ವಪ್ನಿಲ್ ಸಿಂಗ್ (ಭಾರತ)
* ಸಾತ್ವಿಕ್ ದೇಸ್ವಾಲ್ (ಭಾರತ)
* ವಿಕ್ಕಿ ಓಸ್ವಾಲ್ (ಭಾರತ)
* ಕನಿಷ್ಕ್ ಚೌಹಾಣ್ (ಭಾರತ)
ಯಾವ ದೇಶದವರು ಎಷ್ಟು ಆಟಗಾರರು ಇದ್ದಾರೆ?: ಈ ಪಟ್ಟಿಯಲ್ಲಿ ಭಾರತ ಬಿಟ್ಟರೆ, ಹೊರದೇಶದವರಲ್ಲಿ ಇಂಗ್ಲೆಂಡ್ ಆಟಗಾರರೇ ಹೆಚ್ಚಿದ್ದಾರೆ. 17 ಮಂದಿ ಭಾರತೀಯ ಆಟಗಾರಿದ್ದಾರೆ. ನಾಲ್ಕು ಮಂದಿ ಇಂಗ್ಲೆಂಡ್ ಆಟಗಾರರಿದ್ದರೆ, ಇಬ್ಬರು ಆಸ್ಟೇಲಿಯಾ, ಒಬ್ಬರು ಶ್ರೀಲಂಕಾ, ಒಬ್ಬರು ವೆಸ್ಟ್ ಇಂಡೀಸ್ ಆಟಗಾರರು ಇದ್ದಾರೆ.
ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ (ನಾಯಕ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್‌ವುಡ್, ಸುಯಾಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್. ಇದೀಗ ಈ ಪಟ್ಟಿಗೆ ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫ್ಫಿ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್ ಸೇರ್ಪಡೆಯಾಗಿದ್ದಾರೆ.
ಆರ್‌ಸಿಬಿ ಸಂಭ್ಯವ್ಯ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್ ಅಥವಾ ವೆಂಕಟೇಶ್ ಅಯ್ಯರ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿ.ಕೀ.), ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್. ಐಪಿಎಲ್ ವೇಳೆಗೆ ಇದರಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.












Click it and Unblock the Notifications