ಐಪಿಎಲ್ 2025 ಆರ್‌ಸಿಬಿ ವೇಳಾಪಟ್ಟಿ
RCB Match List: 18ನೇ ಆವೃತ್ತಿಯ ಐಪಿಎಲ್ ಮಾರ್ಚ್ 22ರಿಂದ ಆರಂಭವಾಗಲಿದೆ. ಅದರಲ್ಲೂ ಇದುವರೆಗೂ ಆಡಿರುವ 17 ಆವೃತ್ತಿಗಳಲ್ಲೂ ಆರ್‌ಸಿಬಿ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಹಾಗಂತ ಅಭಿಮಾನಿಗಳ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಎಷ್ಟೇ ಬಾರೀ ಸೋತರೂ ನಾವು ಆರ್‌ಸಿಬಿ ಅಭಿಮಾನಿಗಳೇ ಎಂದು ಅಭಿಮಾನದಿಂದ ಹೇಳುತ್ತಿದ್ದಾರೆ. ಹಾಗಾದ್ರೆ ಈ ಬಾರಿ ಆರ್‌ಸಿಬಿ ಯಾವ್ಯಾವ ತಂಡಗಳ ಮೇಲೆ ಯಾವ ದಿನ ಕಾದಾಡಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಿಶ್ವದ ಅತ್ಯಂತ ದೊಡ್ಡ ಲೀಗ್ ಐಪಿಎಲ್ ಕ್ರಿಕೆಟ್ ಲೀಗ್ ಆಗಿದೆ. ಈ ಬಾರೀ 10 ತಂಡಗಳಿದ್ದು, ಈ ಪೈಕಿ ಆರ್‌ಸಿಬಿ ಕೂಡ ಒಂದಾಗಿದೆ. ಅಲ್ಲದೆ, ಎಲ್ಲಾ ತಂಡಗಳಿಗಿಂತಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ಒಂದು ಟ್ರೋಫಿ ಗೆದ್ದಿಲ್ಲ, ಆದರೂ ಆರ್‌ಸಿಬಿ ಅಭಿಮಾನಿಗಳ ಬಳಗ ಇನ್ನೂ ಹೆಚ್ಚಾಗುತ್ತಲೇ ಹೋಗುತ್ತಿದೆ. ಈ ಸೀಸನ್‌ನಲ್ಲಿ ಯಾವೆಲ್ಲಾ ತಂಡಗಳ ಮೇಲೆ ಸೆಣಸಲಿದೆ ಎನ್ನುವ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಐಪಿಎಲ್ 2025 ಆರ್‌ಸಿಬಿ ವೇಳಾಪಟ್ಟಿ
* ಮಾರ್ಚ್ 22, ಶನಿವಾರ ಸಂಜೆ 7:30ಕ್ಕೆ ಆರ್ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್- ಕೊಲ್ಕತ್ತಾ
* ಮಾರ್ಚ್ 28, ಶುಕ್ರವಾರ 7:30ಕ್ಕೆ ಆರ್ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ - ಚೆನ್ನೈ
* ಏಪ್ರಿಲ್ 2, ಬುಧವಾರ 7:30ಕ್ಕೆ ಆರ್ಸಿಬಿ vs ಗುಜರಾತ್ ಟೈಟಾನ್ಸ್ - ಬೆಂಗಳೂರು
* ಏಪ್ರಿಲ್ 7, ಸೋಮವಾರ ಸಂಜೆ 7:30: ಆರ್ಸಿಬಿ vs ಮುಂಬೈ ಇಂಡಿಯನ್ಸ್ - ಮುಂಬೈ
* ಏಪ್ರಿಲ್ 10, ಗುರುವಾರ ಸಂಜೆ 7:30ಕ್ಕೆ ಆರ್ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ - ಬೆಂಗಳೂರು
* ಏಪ್ರಿಲ್ 13, ಭಾನುವಾರ ಮಧ್ಯಾಹ್ನ 3:30ಕ್ಕೆ ಆರ್ಸಿಬಿ vs ರಾಜಸ್ಥಾನ ರಾಯಲ್ಸ್ - ಜೈಪುರ
* ಏಪ್ರಿಲ್ 18, ಶುಕ್ರವಾರ ಸಂಜೆ 7:30ಕ್ಕೆ ಆರ್ಸಿಬಿ vs ಪಂಜಾಬ್ ಕಿಂಗ್ಸ್ - ಬೆಂಗಳೂರು
* ಏಪ್ರಿಲ್ 20, ಭಾನುವಾರ ಮಧ್ಯಾಹ್ನ 3:30ಕ್ಕೆ ಆರ್ಸಿಬಿ vs ಪಂಜಾಬ್ ಕಿಂಗ್ಸ್ - ಮುಲ್ಲನ್‌ಪುರ
* ಏಪ್ರಿಲ್ 24, ಗುರುವಾರ ಸಂಜೆ 7:30ಕ್ಕೆ ಆರ್ಸಿಬಿ vs ರಾಜಸ್ಥಾನ ರಾಯಲ್ಸ್ - ಬೆಂಗಳೂರು
* ಏಪ್ರಿಲ್ 27, ಭಾನುವಾರ ಸಂಜೆ 7:30ಕ್ಕೆ ಆರ್ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ - ದೆಹಲಿ
* ಮೇ 3, ಶನಿವಾರ ಸಂಜೆ 7:30ಕ್ಕೆ ಆರ್ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ - ಬೆಂಗಳೂರು
* ಮೇ 9, ಶುಕ್ರವಾರ ಸಂಜೆ 7:30ಕ್ಕೆ ಆರ್ಸಿಬಿ vs ಲಕ್ನೋ ಸೂಪರ್ ಜೈಂಟ್ಸ್ - ಲಕ್ನೋ
* ಮೇ 13, ಮಂಗಳವಾರ ಸಂಜೆ 7:30ಕ್ಕೆ ಆರ್ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ - ಬೆಂಗಳೂರು
* ಮೇ 17, ಶನಿವಾರ ಸಂಜೆ 7:30ಕ್ಕೆ ಆರ್ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್ - ಬೆಂಗಳೂರು
ಈ ಆವೃತ್ತಿಯಲ್ಲಿ ರಜತ್ ಪಾಟೀದಾರ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಪಾಟೀದಾರ್ ಆರ್ಸಿಬಿ ತಂಡದ 8ನೇ ನಾಯಕ ಆಗಿದ್ದಾರೆ. 2021ರಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿಗೆ ಸೇರಿದಾಗಿನಿಂದ 3 ಸೀಸನ್‌ಗಳನ್ನು ಆಡಿರುವ 31 ವರ್ಷದ ಇಂದೋರ್‌ನಲ್ಲಿ ಜನಿಸಿದ ಬ್ಯಾಟ್ಸ್‌ಮನ್, 2022ರ ಸೀಸನ್ ಮಧ್ಯದಲ್ಲಿ ಲುವ್ನಿತ್ ಸಿಸೋಡಿಯಾ ಬದಲಿಗೆ ಆರ್‌ಸಿಬಿಗೆ ಮರಳಿದ್ದರು. 2021ರಲ್ಲಿ ಕೇವಲ 4 ಪಂದ್ಯಗಳನ್ನಷ್ಟೆ ಆಡಿದ್ದರು. ಐಪಿಎಲ್ ಮೆಗಾ ಹರಾಜಿಗೂ ಮೊದಲು ಆರ್‌ಸಿಬಿ ತಂಡವು ಪಾಟೀದಾರ್, ಯಶ್ ದಯಾಳ್ ಮತ್ತು ವಿರಾಟ್ ಕೊಹ್ಲಿ ಮೂವರನ್ನು ಮಾತ್ರ ಉಳಿಸಿಕೊಂಡಿತ್ತು. ಈ ಪೈಕಿ ಪಟಿದಾರ್ ಅವರನ್ನು ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದೆ.












Click it and Unblock the Notifications