ಐಪಿಎಲ್‌ 2025 ಫೈನಲ್‌ ಪ್ರವೇಶಿಸಿದ ಪಂಜಾಬ್‌ ಕಿಂಗ್ಸ್‌; ಟೂರ್ನಿಯಿಂದ ಹೊರನಡೆದ ಮುಂಬೈ ಇಂಡಿಯನ್ಸ್

IPL 2025 MI Vs PBKS: ಐಪಿಎಲ್‌ 2025 ಕ್ವಾಲಿಫೈಯರ್- 2 ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಪಂಜಾಬ್‌ ಕಿಂಗ್ಸ್‌ ಫೈನಲ್‌ ಪ್ರವೇಶಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್‌ ತಂಡವನ್ನು ಟೂರ್ನಿಯಿಂದಲೇ ಹೊರತಳ್ಳಿದೆ. ಇನ್ನೂ ಪಂಜಾಬ್‌ ತಂಡವು ಆರ್‌ಸಿಬಿ ಜೊತೆ ಫೈನಲ್‌ ಮ್ಯಾಚ್ ಅನ್ನು ಜೂನ್‌ 3ರಂದು ಆಡಲಿದೆ.

ಕ್ವಾಲಿಫೈಯರ್-2 ಪಂದ್ಯ ಅಹಮದಬಾದ್‌ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಮುಂಬೈ ಇಂಡಿಯನ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 203 ರನ್‌ ಕಲೆಹಾಕಿ 204 ರನ್‌ಗಳನ್ನು ಗುರಿ ನೀಡಿತು.

IPL 2025 Punjab Kings Entered Final After win Against Mumbai Indians

ಈ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ 19 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 107 ರನ್‌ಗಳನ್ನು ಕಲೆಹಾಕಿ ಭರ್ಜರಿಯಾಗಿ ಗೆದ್ದು ಫೈನಲ್‌ ಪ್ರವೇಶಿಸಿತು. ಅಲ್ಲದೆ, ಮುಂಬೈ ಇಂಡಿಯನ್ಸ್ ತಂಡವನ್ನು ಟೂರ್ನಿಯಿಂದಲೇ ಹೊರತಳ್ಳಿತು. ಪಂಜಾಬ್‌ ಕಿಂಗ್ಸ್‌ ಗೆಲುವಿಗೆ ಪ್ರಮುಖ ಕಾರಣ ನಾಯಕ ಶ್ರೇಯಸ್‌ ಅಯ್ಯರ್ ಬ್ಯಾಟ್‌ನಿಂದ ಬಂದಂತಹ ಬೃಹತ್‌ ರನ್‌ಗಳೇ ಕಾರಣ ಅಂದ್ರೆ ತಪ್ಪಾಗಲಾರದು. ಮುಂಬೈ ಇಂಡಿಯನ್ಸ್ ಬೌಲರ್‌ಗಳನ್ನು ಬೆಂಡೆತ್ತುವ ಮೂಲಕ ಬರೀ 41 ಬಾಲ್‌ಗಳಿಗೆ 87 ರನ್‌ಗಳನ್ನು ಸಿಡಿಸಿ ಅಜೆಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಮುಟ್ಟಿಸಿ ಮಿಂಚಿದರು.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 203 ರನ್‌ ಕಲೆಹಾಕಿ 204 ರನ್‌ಗಳನ್ನು ಗುರಿ ನೀಡಿತು. ಪಂಜಾಬ್‌ ಕಿಂಗ್ಸ್‌ ಈ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಯಿತು. ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 8 ರನ್‌, ಜಾನಿ ಬೈರ್‌ಸ್ಟೋ 38, ತಿಲಕ್ ವರ್ಮ 44, ಸೂರ್ಯಕುಮಾರ್ ಯಾದವ್ 44 ರನ್, ನಮನ್ ಧೀರ್ 37 ರನ್, ಹಾರ್ದಿಕ್ ಪಾಂಡ್ಯ 15 ರನ್, ರಾಜ್ ಬಾವ 8 ರನ್‌ ಗಳಿಸಿದರು.

ಮುಂಬೈ ಇಂಡಿಯನ್ಸ್ ನೀಡಿದ 204 ರನ್‌ಗಳ ಗುರಿಯನ್ನು ಪಂಜಾಬ್ ಕಿಂಗ್ಸ್‌ ತಂಡವು ತಲುಪುವಲ್ಲಿ ಯಶಸ್ವಿಯಾಯಿತು. ಪ್ರಿಯಾಂಶ್ ಆರ್ಯ 20 ರನ್, ಶ್ರೇಯಸ್ ಅಯ್ಯರ್‌ 87, ಜೋಶ್ ಇಂಗ್ಲಿಶ್ 38 ರನ್, ನೆಹಲ್ ವಧೇರಾ 48 ರನ್, ಶಶಾಂಕ್ ಸಿಂಗ್ 2 ರನ್, ಮಾರ್ಕಸ್ ಸ್ಟೋಯಿನಿಸ್ 2 ರನ್ ಗಳಿಸಿದರು. ಅದರಲ್ಲೂ ನಾಯಕ ಶ್ರೇಯಸ್‌ ಅಯ್ಯರ್ ಸಿಡಿಸಿದ 87 ರನ್‌ಗಳು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದವು. ಇನ್ನೂ ಈ ಪಂದ್ಯದಲ್ಲಿ ಗೆದ್ದಿರುವ ಪಂಜಾಬ್‌ ಕಿಂಗ್ಸ್‌ ತಂಡ ಜೂನ್‌ 3ರಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಜೊತೆ ಫೈನಲ್‌ ಆಡಲು ಅರ್ಹತೆ ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+