MI Vs SRH: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್; ಎಸ್‌ಆರ್‌ಎಚ್ ವಿರುದ್ಧ ಮುಂಬೈ ಭರ್ಜರಿ ಗೆಲುವು
MI Vs SRH: ಐಪಿಎಲ್ 2025ನೇ ಆವೃತ್ತಿಯ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಹಾಗಾದ್ರೆ ಯಾರೆಲ್ಲಾ ಎಷ್ಟು ರನ್‌ಗಳನ್ನು ಚಚ್ಚಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಇಂದಿನ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್‌ಗಳ್ಲಿ 8 ವಿಕೆಟ್‌ಗಳ ಕಳೆದುಕೊಂಡು 143 ರನ್‌ಗಳನ್ನು ಕಲೆಹಾಕಿ 144 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಕೇವಲ 15.4 ಓವರ್‌ಗಳಿಗೆ 3 ವಿಕೆಟ್ ಕಳೆದುಕೊಂಡು 146 ರನ್ ಕಲೆಹಾಕುವ ಮೂಲಕ ಗೆದ್ದು ಬೀಗಿತು.

ಸನ್‌ರೈಸರ್ಸ್ ಹೈದರಾಬಾದ್ ಪರ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ 0, ಅಭಿಷೇಕ್ ಶರ್ಮಾ 8, ಇಶಾನ್ ಕಿಶನ್ 1, ನಿತಿಶ್ ಕುಮಾರ್ ರೆಡ್ಡಿ 2, ಹೆನ್ರಿಚ್ ಕಾಲ್ಸೆನ್ 71, ಅನಿಕೇತ್ ವರ್ಮಾ 12, ಅಭಿನವ್ ಮನೋಹರ್ 43, ಪ್ಯಾಟ್ ಕಮಿನ್ಸ್ 1, ಹರ್ಷಲ್ ಪಟೇಲ್ 1 ರನ್ ಕಲೆಹಾಕಿದರು. ಈ ಮೂಲಕದ ಹೈದಾರಾಬಾದ್ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು. ಎಸ್‌ಆರ್‌ಎಚ್ ಇಷ್ಟು ರನ್‌ಗಳ ಕಲೆಹಾಕಲು ನೆರವಾಗಿದ್ದೇ ಹೆನ್ರಿಚ್ ಕಾಲ್ಸೆನ್ ಹಾಗೂ ಅಭಿನವ್ ಸ್ಫೋಟಕ ಬ್ಯಾಟಿಂಗ್.
ಮುಂಬೈ ಪರ ಬೌಲಿಂಗ್ ಮಾಡಿದ ಟ್ರೆಂಟ್ ಬೋಲ್ಟ್ 4, ದೀಪಕ್ ಚಹಾರ್ 2 ವಿಕೆಟ್ ಪಡೆದರು. ಇನ್ನು ಜಸ್ಪ್ರಿತ್ ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 143 ರನ್‌ಗಳಿಗೆ ಕಟ್ಟಿಹಾಕಿದರು.
ಮತ್ತೊಂದೆಡೆ ಮುಂಬೈ ಪರ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಆಡುವ ಮೂಲಕ 70 ರನ್ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಅಷ್ಟೇ ಅಲ್ಲದೆ, ಸೂರ್ಯ ಕುಮಾರ್ ಯಾದವ್ 40 ರನ್ ಕಲೆಹಾಕಿ ನಾಟ್ ಆಗಿ ಉಳಿಯುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇನ್ನು ರಾಯನ್ 11, ವಿಲ್ ಜಾಕ್ಸ್, 22 ಕಲೆಹಾಕಿ ಔಟಾದರು. ತಿಲಕ್ ವರ್ಮಾ ಸೂರ್ಯ ಕುಮಾರ್ ಯಾದವ್‌ಗೆ ಸಾಥ್ ನೀಡುತ್ತಲೇ 2 ರನ್ ಕಲೆಹಾಕಿ ನಾಟ್ ಔಟ್ ಆಗಿ ಉಳಿದರು.
ಸನ್‌ರೈಸರ್ಸ್ ಹೈದರಾಬಾದ್ ಪರ ಬೌಲಿಂಗ್ ಮಾಡಿದ ಜಯದೇವ್ ಉನದ್ಕಟ್, ಇಶನ್ ಮಾಲಿಂಗ ಹಾಗೂ ಅನ್ಸಾರಿ ತಲಾ 1 ವಿಕೆಟ್ ಪಡೆದರು. ಇನ್ನು ಈ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ 8ರಲ್ಲಿ ಎರಡು ಪಂದ್ಯಗಳನ್ನು ಮಾತ್ರ ಗೆದ್ದು, ಉಳಿದ 6ರಲ್ಲಿ ಸೋಲು ಕಂಡಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 4 ಅಂಕಗಳನ್ನು ಪಡೆಯುವ ಮೂಲಕ 9ನೇ ಸ್ಥಾನಕ್ಕೆ ಕುಸಿದಿದೆ.
ಎಸ್‌ಆರ್‌ಎಚ್ ತಂಡ: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿ.ಕೀ), ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್, ಜೀಶನ್ ಅನ್ಸಾರಿ, ಇಶಾನ್ ಮಾಲಿಂಗ.
ಮುಂಬೈ ಇಂಡಿಯನ್ಸ್: ರಯಾನ್ ರಿಕಲ್ಟನ್ (ವಿ.ಕೀ), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ವಿಘ್ನೇಶ್ ಪುತ್ತೂರು.












Click it and Unblock the Notifications