RCB: ಆರ್‌ಸಿಬಿ ಪ್ಲಾನ್‌ ಫಾಲೋ ಮಾಡಿದ ಎಲ್‌ಎಸ್‌ಜಿ, ಡೆಲ್ಲಿ ಕ್ಯಾಪಿಟಲ್ಸ್‌

IPL 2025: ಐಪಿಎಲ್‌ 2025ರ ಸೀಸನ್‌ ಅದ್ಧೂರಿಯಾಗಿ ನಡೆಯುತ್ತಿದೆ. ಇನ್ನು ಆರ್‌ಸಿಬಿಯು ಮೊನ್ನೆ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ವಾಂಖೆಡೆಯಲ್ಲಿ 10 ವರ್ಷಗಳ ಬಳಿಕ ಗೆಲುವು ಸಾಧಿಸಿ ದಾಖಲೆ ನಿರ್ಮಾಣ ಮಾಡಿದೆ. ಇದೇ ಆರ್‌ಸಿಬಿಯ ಪ್ಲಾನ್‌ ಅನ್ನು ಡಿಸಿ, ಎಲ್‌ಎಸ್‌ಜಿ ಫಾಲೋ ಮಾಡಿ ಸಕ್ಸಸ್‌ ಕಂಡಿವೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿಯು ವಾಂಖೆಡೆಯಲ್ಲಿ ನಿಗದಿತ 20 ಓವರ್‌ಗಳಲ್ಲಿ 221 ರನ್‌ಗಳನ್ನು ಕಲೆಹಾಕಿ, 222 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 9 ವಿಕೆಟ್‌ಗಳನ್ನು ಕಳೆದುಕೊಂಡು 209 ರನ್‌ಗಳನ್ನು ಕಲೆಹಾಕಿ ಸೋಲೊಪ್ಪಿಕೊಂಡಿತು. ಈ ಮೂಲಕ ಆರ್‌ಸಿಬಿ 12 ರನ್‌ಗಳಿಂದ ಗೆದ್ದು ಬೀಗಿತು.

IPL 2025 LSG and Delhi Capitals Teams Win by Following RCB s Plan

ಇನ್ನು ಮುಂಬೈ ಇಂಡಿಯನಸ್‌ ಪರ ನಾಯಕ ಹಾರ್ದಿಕ್ ಪಾಂಡ್ಯ, ಟ್ರೆಂಟ್ ಬೌಲ್ಟ್ ತಲಾ 2 ಎರಡು ವಿಕೆಟ್ ಪಡೆದರೂ, ಬೃಹತ್ ರನ್‌ಗಳನ್ನು ಬಿಟ್ಟುಕೊಟ್ಟರು. ಇನ್ನು ಯುವ ಬೌಲರ್ ವಿಘ್ನೇಶ್ ಪುತ್ತೂರ್ ಸಹ ಒಂದು ವಿಕೆಟ್ ಪಡೆದಿದ್ದು, ಜಸ್ಪ್ರೀತ್ ಬುಮ್ರಾ ನಾಲ್ಕು ಓವರ್‌ಗಳಲ್ಲಿ 29ರನ್ ಬಿಟ್ಟುಕೊಟ್ಟರು.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿಯು ಆರಂಭದಿಂದಲೂ ಕೊನೆಯವರೆಗೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ 222 ಬೃಹತ್ ರನ್‌ಗಳ ಟಾರ್ಗೆಟ್‌ ನೀಡಿತು. ಇನ್ನು ಈ ಗುರಿ ಬೆನ್ನತ್ತಿದ್ದ ಮುಂಬೈ ತಂಡದ ಬ್ಯಾಟರ್‌ಗಳು ಆರಂಭಿಕ ಹಂತದಲ್ಲಿ ಹೆಣಗಾಡಿದರು.

ಬಳಿಕ ತಿಲಕ್‌ ವರ್ಮಾ ಹಾಗೂ ನಾಯಕ ಹಾರ್ದಿಕ್‌ ಪಾಂಡ್ಯ ಸಿಕ್ಸ್‌, ಪೋರ್‌ಗಳನ್ನು ಚಚ್ಚುವ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಆದರೆ ಕೊನೆಗೂ ಈ ಇಬ್ಬರು ಔಟಾದ ಬಳಿಕ ಮುಂಬೈ ತಂಡ ಸಾಲು ಸಾಲು ವಿಕೆಟ್‌ಗಳನ್ನೇ ಕಳೆದುಕೊಂಡು ಆರ್‌ಸಿಬಿ ವಿರುದ್ಧ ಕಡಿಮೆ ಅಂತರದ ರನ್‌ಗಳಿಂದ ಹೀನಾಯ ಸೋಲು ಕಂಡಿತು.

ಆರ್‌ಸಿಬಿ ನೀಡಿದ 222 ರನ್ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 12 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತ್ತು. ತಿಲಕ್ ವರ್ಮಾ 56 ಮತ್ತು ನಾಯಕ ಹಾರ್ದಿಕ್ ಪಾಂಡ್ಯ 42 ರನ್‌ ಕಲೆ ಹಾಕಿ ವಿಕೆಟ್‌ ಒಪ್ಪಿಸಿದರು. ಈ ಮೂಲಕ 89 ರನ್‌ಗಳ ಜೊತೆಯಾಟ ಆಡಿದರು. ಕೃನಾಲ್ 4, ಜೋಶ್ ಹೇಜಲ್‌ವುಡ್ 2 ಮತ್ತು ಭುವನೇಶ್ವರ್ ಕುಮಾರ್ 1 ನಿರ್ಣಾಯಕ ವಿಕೆಟ್‌ಗಳನ್ನು ಸರಿಯಾದ ಸಮಯದಲ್ಲಿ ಪಡೆದು ಆರ್‌ಸಿಬಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯು 12 ರನ್‌ಗಳಿಂದ ಗೆಲುವು ಸಾಧಿಸಿತು. ಆ ಪಂದ್ಯದಲ್ಲಿ ಆರ್‌ಸಿಬಿ ಹಿನ್ನಡೆ ಸಾಧಿಸಿತ್ತು. ಆದರೆ ನಾಯಕ ರಜತ್ ಪಾಟಿದಾರ್‌ರ ಯೋಜನೆ ಪ್ಲಾನ್‌ನಿಂದ ತಂಡ ಭರ್ಜರಿ ಗೆಲುವು ಸಾಧಿಸಿತು. ಇದೇ ಪ್ಲಾನ್‌ ಅನ್ನೇ ಡೆಲ್ಲಿ ಕ್ಯಾಪಿಟಲ್ಸ್‌ನ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ ಉಪಯೋಗಿಸಿಕೊಂಡು ಯಶಸ್ಸು ಕಂಡಿವೆ.

ಮುಂಬೈ ವಿರುದ್ಧ ಆರ್‌ಸಿಬಿ ಕೊನೆಯ 3 ಓವರ್‌ಗಳಲ್ಲಿ 41 ರನ್ ಕಾಯ್ದುಕೊಳ್ಳಬೇಕಿತ್ತು. ಇಬ್ಬರು ವೇಗಿಗಳಿಗೆ ತಲಾ ಒಂದು ಓವರ್ ಮಾತ್ರ ಇತ್ತು. 18ನೇ ಓವರ್ ಮಾಡಿದ ಭುವನೇಶ್ವರ್ ಕುಮಾರ್ 13 ರನ್, 19ನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ 9 ರನ್ ಬಿಟ್ಟುಕೊಟ್ಟರು. ಇನ್ನು ಕೊನೇ ಓವರ್‌ಗೆ ರಜತ್ ಪಾಟಿದಾರ್ ಅನುಭವಿ ಸ್ಪಿನ್ನರ್ ಕೃನಾಲ್ ಪಾಂಡ್ಯರನ್ನು ಆಯ್ಕೆ ಮಾಡಿದರು. ಪಾಂಡ್ಯ ಕೇವಲ 6 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ಗೆಲುವಿಗೆ ಸಹಾಯ ಮಾಡಿದರು.

ಪಂತ್ ಪ್ಲಾನ್‌: ಕೆಕೆಆರ್ ವಿರುದ್ಧ ಲಕ್ನೋಗೆ ಕೊನೆಯ 3 ಓವರ್‌ಗಳಲ್ಲಿ 45 ರನ್ ಕಾಯ್ದುಕೊಳ್ಳಬೇಕಿತ್ತು. 18ನೇ ಓವರ್‌ನಲ್ಲಿ ದಿಗ್ವೇಶ್ ಸಿಂಗ್ ರಾಠಿ 7 ರನ್ ಬಿಟ್ಟುಕೊಟ್ಟರು. ಕೊನೆಯ 2 ಓವರ್‌ಗಳಲ್ಲಿ 38 ರನ್‌ಗಳು ಬೇಕಿತ್ತು.

ಆಗ ರಿಷಭ್ ಪಂತ್ 19ನೇ ಓವರ್‌ಗೆ ಆವೇಶ್ ಖಾನ್‌ರನ್ನು ಬೌಲಿಂಗ್‌ಗೆ ಕಳುಹಿಸಿದರು. ಕೆಕೆಆರ್ ಪರ ಬ್ಯಾಟಿಂಗ್‌ ಮಾಡುತ್ತಿದ್ದ ರಿಂಕು ಸಿಂಗ್ ಮೊದಲ 2 ಎಸೆತಗಳಲ್ಲಿ 10 ರನ್ ಗಳಿಸಿದರು. ನಂತರ ಬೌಂಡರಿ ಹೊಡೆಯಲು ಆಗಲಿಲ್ಲ. ಕೊನೆಯ ಓವರ್‌ನಲ್ಲಿ 24 ರನ್ ಬೇಕಿತ್ತು. ರವಿ ಬಿಷ್ಣೋಯ್ ಎಸೆದ ಓವರ್‌ನಲ್ಲಿ ರಿಂಕು ಎರಡು ಬೌಂಡರಿ, ಒಂದು ಸಿಕ್ಸ್‌ ಬಾರಿಸಿದರು. ಆದರೂ ಕೂಡ ಕೆಕೆಆರ್‌ ವಿರುದ್ಧ ಕೊನೆಗೂ ಎಲ್‌ಎಸ್‌ಜಿ 4 ರನ್‌ಗಳಿಂದ ಗೆದ್ದಿತು.

ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವು: ಇತ್ತೀಚೆಗಷ್ಟೇ ಚಪಾಕ್‌ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲೇ ಸಿಎಸ್ಕೆ ಅನ್ನು ಆರ್‌ಸಿಬಿ ಬಗ್ಗು ಬಡಿದು 17 ವರ್ಷಗಳ ಬಳಿಕ ಗೆಲುವು ಸಾಧಿಸಿ ದಾಖಲೆ ನಿರ್ಮಾಣ ಮಾಡಿದೆ. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಯು 50 ರನ್ಗಳಿಂದ ಗೆಲುವು ಸಾಧಿಸಿತ್ತು.

ಚೆನ್ನೈನ ಚೆಪಾಕ್ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿ ಬೌಲಿಂಗಹ್‌ ಮೂಲಕ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ. ಆದರೆ, ಆರ್ಸಿಬಿಯು 196ರನ್ಗಳಿಸಿ, ಸಿಎಸ್‌ಕೆಗೆ 197 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಚೆನ್ನೈ ಅನ್ನು ಆರ್‌ಸಿಬಿ ಬೌಲರ್‌ಗಳಿ ಕೇವಲ 146 ರನ್‌ಗಳಿಗೆ ಕಟ್ಟಿ ಹಾಕಿ 50 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.

ಡೆಲ್ಲಿ ಪ್ಲಾನ್‌: ಡೆಲ್ಲಿ ತಂಡವೂ ಆರ್ಸಿಬಿ ಮಾದರಿಯನ್ನ ಅನುಸರಿಸಿತು. ಟಾಸ್ ಗೆಲ್ಲುತ್ತಿದ್ದಂತೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಬ್ಯಾಟಿಂಗ್ಗೆ ಇಳಿದು ಆರ್ಸಿಬಿಯಂತೆ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಮಾಡಿ 183 ರನ್ಗಳಿಸಿತು. ನಂತರ ಅತ್ಯುತ್ತಮ ಬೌಲಿಂಗ್‌ ಮಾಡಿದ ತಂಡವು ಸಿಎಸ್‌ಕೆ ತಂಡವನ್ನು 158ಕ್ಕೆ ಕಟ್ಟಿಹಾಕಿ 25 ರನ್ಗಳಿಂದ ಸುಲಭ ಜಯ ಸಾಧಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+