ಆರ್‌ಸಿಬಿ ಫೈನಲ್ ಪಂದ್ಯವನ್ನ ಎಂಜಾಯ್ ಮಾಡ್ಕೊಂಡು ನೋಡ್ಬೇಕಾ? ಬೆಂಗಳೂರಿನಲ್ಲಿವೆ ಸೂಕ್ತ ಸ್ಥಳಗಳು
RCB Final 2025: ಐಪಿಎಲ್ 2025 ಮೊದಲ ಕ್ವಾಲಿಫೈಯರ್‌ನಲ್ಲೇ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಆರ್‌ಸಿಬಿ ಭರ್ಜರಿಯಾಗಿ ಫೈನಲ್ ಪ್ರವೇಶೀಸಿದೆ. ಹೈವೋಲ್ಟೇಜ್ ಫೈನಲ್ ಮ್ಯಾಚ್ ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜೂನ್ 3ರಂದು ನಡೆಯಲಿದ್ದು, ಈ ಕ್ಷಣಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಂದಿ ಕುತೂಹಲದಿಂದ ಕಾಯುತ್ತಿದ್ದಾರೆ.
ಆರ್‌ಸಿಬಿ ಈ ಸೀಸನ್ ಆರಂಭದಿಂದಲೂ ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲೂ ಉತ್ತಮವಾಗಿ ಪ್ರದರ್ಶನ ತೋರುತ್ತಾ ಬಂದಿದೆ. ಅಲ್ಲದೆ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲೇ ಪಂಜಾಬ್ ತಂಡವನ್ನು ಹೀನಾಯವಾಗಿ ಸೋಲಿಸಿ ಭರ್ಜರಿಯಾಗಿ ಫೈನಲ್ ಪ್ರವೇಶ ಮಾಡಿದೆ. ಫೈನಲ್ ಪಂದ್ಯ ಮಂಗಳವಾರ ನಡೆಯಲಿದ್ದು, ಇದಕ್ಕಾಗಿ ಬರೀ ಕರ್ನಾಟಕ, ಭಾರತ ಮಾತ್ರ ಅಷ್ಟೇ ಅಲ್ಲದೆ, ವಿದೇಶಗಳಲ್ಲಿರುವ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ.

ಆರ್‌ಸಿಬಿ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಹಿನ್ನೆಲೆ ಅಲ್ಲಿಗೆ ಹೋಗಲು ಸಾಧ್ಯವಾಗದವರು ಕರ್ನಾಕದ ಆಯಾ ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಪರದೆಗಳಲ್ಲಿ ಮ್ಯಾಚ್ ವೀಕ್ಷಣೆ ಮಾಡಲು ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಅಭಿಮಾನಿಗಳಿಗೆ ಸೂಕ್ತ ಸ್ಥಳಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಬೆಂಗಳೂರಿನಲ್ಲಿರುವ ಕೆಲವರು ಪಂದ್ಯ ಎಲ್ಲಿ ವೀಕ್ಷಣೆ ಮಾಡೋದು ಎನ್ನುವ ಯೋಚನೆಯಲ್ಲಿದ್ದಾರೆ. ಅಂತಹವರಿಗೆ ಈ ಸೂಕ್ತ ಸ್ಥಳಗಳ ಮಾಹಿತಿಯನ್ನು ನೀಡಲಾಗಿದೆ. ಆರ್‌ಸಿಬಿ ಫೈನಲ್ ಪಂದ್ಯವನ್ನು ಫೋನ್‌ನಲ್ಲಿ ನೋಡುವವರು ತುಸು ಕಡಿಮೆಯೇ. ಅಂದಿನ ದಿನ ಇಡೀ ಕರ್ನಾಟಕದಲ್ಲಿನ ಬಹುತೇಕ ಎಲ್ಲಾ ಮನೆಗಳಲ್ಲಿ ಟಿವಿಗಳು ಆನ್ ಆಗಿರುತ್ತವೆ. ವಿಶೇಷವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಬ್, ಮಾಲ್, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಅಭಿಮಾನಿಗಳ ದಂಡೇ ನೆರೆದಿರುತ್ತದೆ.
ಆರ್‌ಸಿಬಿ ಫೈನಲ್ ಪಂದ್ಯ ವೀಕ್ಷಣೆಗೆ ಬೆಂಗಳೂರಿನ ಸೂಕ್ತ ಸ್ಥಳಗಳು
* RCB Bar and Cafe,MG Road
* Toca MG Road
* Full Circle, RR Nagara
* JP Nagara Social
* Macaw by stories,Bommanahalli
* Prime Golf, Whitefeld
* Maize and Malt,Whitefield
* Flo,Chruch Street
* Dave and Busters, Koramangala
* HOD,Koramangala
* URU Brewpark,JP Nagara
* Gustoes,Jayanagara
* Boho, Koramangala
* Mykos,Bannerghatta
* Cocobolo, BEL Road
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಆಡಿರುವ 17 ಸೀಸನ್‌ಗಳಿಂದಲೂ ಒಂದೇ ಒಂದು ಟ್ರೋಫಿ ಸಹ ಗೆದ್ದುಕೊಂಡಿಲ್ಲ. ಹಾಗಂತ ಅಭಿಮಾನಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ, ಬದಲಾಗಿ ಹೆಚ್ಚಾಗುತ್ತಲೇ ಇದೆ. ಎಷ್ಟು ಬಾರಿ ಸೋತರೂ ನಮ್ಮ ತಂಡ ಆರ್‌ಸಿಬಿನೇ ಎಂದು ಅಭಿಮಾನಿಗಳು ಹೇಳುವ ಮಾತಾಗಿದೆ.
ಅದರಲ್ಲೂ ಈ ಬಾರಿ ಅಂದರೆ 18ನೇ ಆವೃತ್ತಿಯಲ್ಲಿ ಉತ್ತಮ ಆಟಗಾರರನ್ನು ಹೊಂದಿರುವ ಆರ್‌ಸಿಬಿ ಆರಂಭದಿಂದಲೂ ಬಲಿಷ್ಠ ತಂಡಗಳನ್ನು ಬಗ್ಗುಬಡಿಯುವ ಮೂಲಕ ಫೈನಲ್‌ಗೇರಿದ್ದು, ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದೆ. ಆದ್ದರಿಂದ ಅಭಿಮಾನಿಗಳು ಈ ಬಾರಿ ಫೈನಲ್ ಪಂದ್ಯ ವೀಕ್ಷಣೆ ಮಾಡಲು ಕಾತರದಲ್ಲಿದ್ದಾರೆ.
ವಿಶೇಷ ಅಂದ್ರೆ ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ 18, ಮತ್ತೊಂದೆಡೆ 18ನೇ ಆವೃತ್ತಿಯ ಐಪಿಎಲ್ ಆಗಿದೆ. ಇದು ಲಕ್ ಅಂತಲೇ ತುಂಬಾ ಜನ ಭವಿಷ್ಯ ನುಡಿದಿದ್ದು, ಆರ್‌ಸಿಬಿ ಈ ಬಾರಿ ಟ್ರೋಫಿ ಗೆಲ್ಲುವುದು ಬಹುತೇಕ ಖಚಿತ ಅಂತಲೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಬೆಂಗಳೂರು ತಂಡ ಟ್ರೋಫಿ ಗೆಲ್ಲಲ್ಲಿ ಎನ್ನುವುದೇ ನಮ್ಮ ನಿಮ್ಮೆಲ್ಲರ ಆಶಯ.












Click it and Unblock the Notifications