ಮೊದಲ ಮ್ಯಾಚ್ ದೇವರಿಗೆ: ಆರ್‌ಸಿಬಿ ಸೋತಿದ್ದಕ್ಕೆ ಫ್ಯಾನ್ಸ್ ಹೀಗಂದ್ರು!
ಆರ್‌ಸಿಬಿ ತಂಡ ತನ್ನ ಮೊದಲ ಪಂದ್ಯದಲ್ಲೇ ಭೀಕರ ಸೋಲು ಅನುಭವಿಸಿದೆ. 2024ರಲ್ಲಿ, ಐಪಿಎಲ್ ಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ಹಠದಲ್ಲಿ ಬಂದ ಆರ್‌ಸಿಬಿ ಆಟಗಾರರಿಗೆ ಮೊದಲ ಹೆಜ್ಜೆಯಲ್ಲೇ ಆಘಾತ ಎದುರಾಗಿದೆ. ಹೀಗಿದ್ದಾಗ ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡದ, ಭೀಕರ ಸೋಲಿನ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ? ಮುಂದೆ ಓದಿ.
ನಿನ್ನೆ ಚೆನ್ನೈ ತಂಡದ ವಿರುದ್ಧ ಆರ್‌ಸಿಬಿ ಭರ್ಜರಿ 6 ವಿಕೆಟ್ ಅಂತರದ ಸೋಲು ಕಂಡಿದೆ. ಹೀಗಿದ್ದಾಗಲೂ ಜಗತ್ತಿನ ಅತ್ಯಂತ ನೀಯತ್ತಾದ ಅಭಿಮಾನಿಗಳು ಎಂಬ ಹೆಸರು ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಫ್ಯಾನ್ಸ್, ಆರ್‌ಸಿಬಿ ಸೋತರೂ ಬಿಟ್ಟುಕೊಡದೆ ಬೆಂಬಲಕ್ಕೆ ನಿಂತಿದ್ದಾರೆ. ಅದ್ರಲ್ಲೂ ಇತ್ತೀಚೆಗೆ ತಾನೆ ಆರ್‌ಸಿಬಿ ಮಹಿಳಾ ತಂಡ ಕಪ್ ಗೆದ್ದು ಬೀಗಿದೆ. ಹೀಗಿದ್ದಾಗ ಹುಡುಗರ ತಂಡ ಕೂಡ ಕಪ್ ಗೆಲ್ಲುತ್ತೆ ಅನ್ನೋ ಆಸೆ ಚಿಗುರೊಡೆದಿತ್ತು. ಆದರೆ ಮೊದಲ ಪಂದ್ಯದಲ್ಲೇ ಆರ್‌ಸಿಬಿ ತಂಡ ಭೀಕರ ಸೋಲು ಕಂಡಿರುವುದು ಆಟಗಾರರ ನಿದ್ದೆಗೆಡಿಸಿ, ಆದರೂ ಆರ್‌ಸಿಬಿ ಅಭಿಮಾನಿಗಳು ಮಾತ್ರ ಅದೊಂದು ಡೈಲಾಗ್ ಹೇಳ್ತಿದ್ದಾರೆ.

ಮೊದಲ ಮ್ಯಾಚ್ ದೇವರಿಗೆ!
ಬೆಂಗಳೂರು ತಂಡ ಅಂದ್ರೆ ಆರ್‌ಸಿಬಿ ಅಭಿಮಾನಿಗಳು ಮೊದಲಿನಿಂದ ಕೂಡ ಒಂದು ಮಾತು ಹೇಳ್ತಾ ಬಂದಿದ್ದಾರೆ. ಅದರಲ್ಲೂ ಪ್ರತಿಬಾರಿ ಆರ್‌ಸಿಬಿ ಮೊದಲ ಮ್ಯಾಚ್ ಸೋತಾಗ ಇದು ದೇವರಿಗೆ. ಮೊದಲ ಮ್ಯಾಚ್ ದೇವರಿಗೆ ಬಿಟ್ಟುಕೊಡುವುದು ಆರ್‌ಸಿಬಿ ಸಂಪ್ರದಾಯ ಅಂತಾ ಮತ್ತೊಮ್ಮೆ ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ. ನಿನ್ನೆಯ ಸೋಲು ಆರ್‌ಸಿಬಿ ಆಟಗಾರರನ್ನ ಒಂದಷ್ಟು ಚಿಂತೆಗೆ ದೂಡಿದಿದ್ದರೂ ಅಭಿಮಾನಿಗಳು ಮಾತ್ರ ಆರ್‌ಸಿಬಿ ಟೀಂ ಬೆನ್ನಿಗೆ ನಿಂತಿದ್ದಾರೆ. ಈ ಮೂಲಕ ಮತ್ತೆ ಆರ್‌ಸಿಬಿ ಬಗ್ಗೆ ತಮ್ಮ ಅಭಿಮಾನ ಮೆರೆದಿದ್ದಾರೆ ಫ್ಯಾನ್ಸ್.
ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ & ಆರ್‌ಸಿಬಿ ಚೆನ್ನೈನ ಕ್ರೀಡಾಂಗಣದಲ್ಲಿ ಸೆಣಸಾಡಿವೆ. ಟಾಸ್ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಫಾಫ್ ಡುಪ್ಲೇಸಿಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರ್‌ಸಿಬಿ ತಂಡ ಭರ್ಜರಿ ರನ್ ಮಳೆ ಹರಿಸಲಿದೆ ಎಂಬ ಲೆಕ್ಕಾಚಾರ ಇತ್ತು. ಆರಂಭದ 4 ಓವರ್ ಉತ್ತಮವಾಗಿಯೆ ಇತ್ತು, ಆದ್ರೆ 4.3 ಓವರ್ ಆಗಿದ್ದಾಗ ಮೊದಲ ವಿಕೆಟ್ ಔಟ್ ಆಗಿತ್ತು. ಆ ನಂತರ ಆರ್‌ಸಿಬಿಗೆ, ಸರಿಯಾದ ಸಪೋರ್ಟ್ ಸಿಗಲಿಲ್ಲ.
ಸಾಲು ಸಾಲು ವಿಕೆಟ್ ಪತನ
ಡುಪ್ಲೇಸಿಸ್ 35 ರನ್‌ಗೆ ಔಟ್ ಆದ ಬಳಿಕ ಇಬ್ಬರು ಆಟಗಾರರು ಸೊನ್ನೆ ಸುತ್ತಿ ಹೋದರು. ರಜತ್ ಪಾಟಿದಾರ್ & ಗ್ಲೆನ್ ಮ್ಯಾಕ್ಸ್‌ವೆಲ್ ಹೀನಾಯವಾಗಿ ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಕ್ಯಾಮೆರೂನ್ ಗ್ರೀನ್ ಅವರು ವಿರಾಟ್ ಕೊಹ್ಲಿ ಜೊತೆ ಸೇರಿ ಒಂದಷ್ಟು ಹೊತ್ತು ನಿಂತರು. ಆದ್ರೆ 11.2 ಓವರ್ ಆಗಿದ್ದಾಗ ವಿರಾಟ್ ಕೊಹ್ಲಿ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೇವಲ 1 ರನ್ ಅಂತರದಲ್ಲಿ ಕ್ಯಾಮೆರೂನ್ ಗ್ರೀನ್ ಕೂಡ ಔಟಾಗಿ ಹೊರನಡೆದರು.
78 ರನ್ ಆಗಿದ್ದಾಗ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಆರ್‌ಸಿಬಿ. ಹೀಗಿದ್ದಾಗಲೇ ಅನುಜ್ ರಾವತ್, ದಿನೇಶ್ ಕಾರ್ತಿಕ್ 6ನೇ ವಿಕೆಟ್‌ಗೆ ಒಂದಾಗಿ ಸಖತ್ ಆಟ ಪ್ರದರ್ಶನ ಮಾಡಿದ್ರು ಈ ಇಬ್ಬರೂ ಆಟಗಾರರು ಸೇರಿ ಭರ್ಜರಿ 95 ರನ್ ಜೊತೆಯಾಟ ನೀಡಿದರು. ಕೇವಲ 52 ಬಾಲ್ ಆಡಿದ ಅನುಜ್ ರಾವತ್ ಮತ್ತು ದಿನೇಶ್ ಕಾರ್ತಿಕ್ ಸಖತ್ ರನ್ ಕದ್ದರು. ಈ ಮೂಲಕ ಆರ್‌ಸಿಬಿ ತಂಡವು 173 ರನ್ ಗಳಿಸಲು ನೆರವಾದರು. ಕೊನೆಗೆ ಈ ಗುರಿ ಬೆನ್ನತ್ತಿದ್ದ ಚೆನ್ನೈ ತಂಡ ಭಾರಿ ಆಟ ಪ್ರದರ್ಶನ ಮಾಡಿ ಗೆದ್ದು ಬೀಗಿದೆ. ಹೀಗಾಗಿ ಅಭಿಮಾನಿಗಳು ಆರ್‌ಸಿಬಿ ಬೆನ್ನಿಗೆ ನಿಂತು ಮತ್ತೊಮ್ಮೆ ಬೆಂಬಲ ನೀಡುತ್ತಿದ್ದಾರೆ.












Click it and Unblock the Notifications