IPL 2023: ಆರ್‌ಸಿಬಿ ವಿರುದ್ಧ ಗೆದ್ದ ಕೆಕೆಆರ್‌ಗೆ ಆಘಾತ: ದಿಢೀರ್ ತವರಿಗೆ ತೆರಳಿದ ಸ್ಟಾರ್ ವಿದೇಶಿ ಕ್ರಿಕೆಟಿಗ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕಳಪೆ ಪ್ರದರ್ಶನ ನೀಡಿದರೂ ಆರ್‌ಸಿಬಿ ತಂಡದ ವಿರುದ್ಧ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಹೀಗಾಗಿ ಆಡಿರುವ 8 ಪಂದ್ಯಗಳಲ್ಲಿ ಕೆಕೆಆರ್ 3 ಗೆಲುವು ಸಾಧಿಸಿದೆ. ಬುಧವಾರ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೋಲಿನ ಸರಪಳಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇದರ ಬೆನ್ನಲ್ಲೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಘಾತವೊಂದು ಉಂಟಾಗಿದ್ದು ತಂಡದ ಸ್ಟಾರ್ ಆಟಗಾರ ದಿಢೀರ್ ಆಗಿ ತವರಿಗೆ ವಾಪಾಸಾಗಿದ್ದಾರೆ.

ಕೆಕೆಆರ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಬಾಂಗ್ಲಾದೇಶದ ಲಿಟನ್ ದಾಸ್ ಟೂರ್ನಿಯ ಮಧ್ಯದಲ್ಲಿಯೇ ತವರಿಗೆ ವಾಪಾಸಾಗಿರುವ ಕ್ರಿಕೆಟಿಗನಾಗಿದ್ದಾರೆ. ಕೌಟುಂಬಿಕ ಕಾರಣಗಳಿಂದಾಗಿ ಲಿಟನ್ ದಾಸ್ ಶುಕ್ರವಾರ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮಾಹಿತಿಯನ್ನು ಕೆಕೆಆರ್ ಮ್ಯಾನೇಜ್‌ಮೆಂಟ್ ಕೂಡ ಖಚಿತಪಡಿಸಿದ್ದು ಟೂರ್ನಿಗೆ ಲಿಟನ್ ದಾಸ್ ವಾಪಾಸ್ ಮರಳಲಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಖಚಿತತೆಯಿಲ್ಲ.

IPL 2023: Kolkata Knight Riders player Litton Das returns home in midway of tournament

"ಕುಟುಂಬದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯುಂಟಾಗಿರುವ ಕಾರಣದಿಂದಾಗಿ ಲಿಟನ್ ದಾಸ್ ಅವರು ಇಂದು ಮುಂಜಾನೆ ಬಾಂಗ್ಲಾದೇಶಕ್ಕೆ ವಾಪಾಸ್ ತೆರಳಬೇಕಾಯಿತು. ಈ ಕಠಿಣ ಸಂದರ್ಭದಲ್ಲಿ ಅವರ ಹಾಗೂ ಅವರ ಕುಂಟುಂಬದ ಪರವಾಗಿ ನಮ್ಮ ಪ್ರಾರ್ಥನೆಯಿರುತ್ತದೆ" ಎಂದು ಕೆಕೆಆರ್ ಮಾಹಿತಿ ನೀಡಿದೆ.

ಲಿಟನ್ ದಾಸ್ ಬಾಂಗ್ಲಾದೇಶಕ್ಕೆ ವಾಪಾಸಾಗಿರುವ ಕಾರಣ ಇದೀಗ ಐಪಿಎಲ್ ಟೂರ್ನಿಯಲ್ಲಿ ಬಾಂಗ್ಲಾದೇಶದಿಂದ ಕೇವಲ ಒಬ್ಬನೇ ಆಟಗಾರ ಉಳಿದುಕೊಂಡಂತಾಗುತ್ತದೆ. ಮುಸ್ತಫಿಜುರ್ ರಹ್ಮಾನ್ ಮಾತ್ರವೇ ಈಗ ಬಾಂಗ್ಲಾದೇಶದಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರನಾಗಿದ್ದಾರೆ. ಶಕೀಬ್ ಅಲ್ ಹಸನ್ ಟೂರ್ನಿಯ ಆರಂಭಕ್ಕೂ ಮುನ್ನವೇ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುತ್ತಿರುವುದಾಗಿ ಪ್ರಕಟಿಸಿದ್ದರು.

RR vs CSK: ಮತ್ತೊಂದು ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್: ತಂಡದ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ನಾಯಕ

ನಿತೀಶ್ ರಾಣಾ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶಣ ನೀಡಲು ವಿಫಲವಾಗಿದೆ. ಆರ್‌ಸಿಬಿ ವಿರುದ್ಧದ ಎರಡು ಪಂದ್ಯಗಳನ್ನು ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಕೆಕೆಆರ್ ಆಟಗಾರರಿಂದ ಉತ್ತಮ ಪ್ರದರ್ಶನ ವ್ಯಕ್ತವಾಗಲಿಲ್ಲ. ತಂಡ ಸಾಂಘಿಕ ಪ್ರದರ್ಶನ ನೀಡಲು ವಿಫಲವಾಗುತ್ತಿರುವುದು ತಂಡ ಈ ಮಟ್ಟದಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಗುತ್ತಿದೆ.

ಇನ್ನು ಆರ್‌ಸಿಬಿ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಭವಿಸಿದ ಭರ್ಜರಿ ಗೆಲುವು ಕೆಕೆಆರ್ ತಂಡಕ್ಕೆ ಸಹಜವಾಗಿಯೇ ದೊಡ್ಡ ಆತ್ಮವಿಶ್ವಾಸ ತುಂಬಿರುವುದರಲ್ಲಿ ಅನುಮಾನವಿಲ್ಲ. ತಂಡದ ಸ್ಪಿನ್ ಬೌಲಿಂಗ್ ವಿಭಾಗ ಪರಿಣಾಮಕಾರಿಯಾಗಿ ಗೋಚರಿಸುತ್ತಿದ್ದು ಉಳಿದ ಎದುರಾಳಿಗಳಿಗೂ ಇದು ಅಪಾಯಕಾರಿಯಾಗುವ ಸಾಧ್ಯತೆಯಿದೆ. ಇನ್ನು ಬ್ಯಾಟಿಂಗ್‌ನಲ್ಲಿಯೂ ತಂಡದ ಉತ್ಸಾಹ ಹೆಚ್ಚಿಸಿದ್ದು ಗೆಲುವಿನ ಲಯದಲ್ಲಿ ಮುಂದುವರಿಯುವ ಲಕ್ಕಾಚಾರದಲ್ಲಿದೆ.

ಕೊಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ (ನಾಯಕ), ವರುಣ್ ಚಕ್ರವರ್ತಿ, ಲಾಕಿ ಫರ್ಗುಸನ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಹರ್ಷಿತ್ ರಾಣಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ರಿಂಕು ಸಿಂಗ್, ಟಿಮ್ ಸೌಥಿ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವೈಭವ್ ಅರೋರಾ, ಎನ್ ಜಗದೀಸನ್, ಸುಯಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಲಿಟನ್ ದಾಸ್, ಮನ್‌ದೀಪ್ ಸಿಂಗ್, ಜೇಸನ್ ರಾಯ್, ಆರ್ಯ ದೇಸಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+