IPL 2023: ಶಕೀಬ್ ಅಲ್ ಹಸನ್ ಬದಲಿಗೆ ಇಂಗ್ಲೆಂಡ್‌ನ ಸ್ಪೋಟಕ ಆಟಗಾರನನ್ನು ಸೇರ್ಪಡೆಗೊಳಿಸಿದ ಕೆಕೆಆರ್

ಎರಡು ಬಾರಿಯ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಶಕೀಬ್ ಅಲ್ ಹಸನ್ ಈ ಬಾರಿಯ ಟೂರ್ನಿಯ ಅಲಭ್ಯವಾಗುವುದಾಗಿ ಮಂಗಳವಾರ ಅಧಿಕೃತವಾಗಿ ಘೋಷಿಸಿದ್ದರು. ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ಈ ಆಲ್‌ರೌಂಡರ್ ಆಟಗಾರನ ಬದಲಿಗೆ ಮತ್ತೋರ್ವ ಬಲಿಷ್ಠ ಆಟಗಾರನನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಜೇಸನ್ ರಾಯ್ ಅವರನ್ನು ಕೆಕೆಆರ್ ತಂಡ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕೆಕೆಆರ್ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. "ಕೊಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ಐಪಿಎಲ್ 2023ರ ಹರಾಜಿನಲ್ಲಿ 1.5 ಕೋಫಟಿ ಮೂಲ ಬೆಲೆ ಹೊಂದಿದ್ದ ಜೇಸನ್ ರಾಯ್ ಅವರೊಂದಿಗೆ 2.8 ಕೋಟಿಗೆ ಒಪ್ಪಂದ ಮಾಡಿಕೊಂಡಿದೆ" ಎಂದು ಕೆಕೆಆರ್ ಮಾಹಿತಿ ನೀಡಿದೆ. ಇಂಗ್ಲೆಂಡ್‌ನ ಈ ಸ್ಟಾರ್ ಆಟಗಾರ ಐಪಿಎಲ್‌ಗೆ ಹೊಸ ಮುಖವೇನು ಅಲ್ಲ. ಈ ಹಿಂದೆ 2017 ಹಾಗೂ 2018ರ ಆವೃತ್ತಿಯಲ್ಲಿ ಆಡಿದ್ದರು. 2021ರ ಐಪಿಎಲ್ ಆವೃತ್ತಿಯಲ್ಲಿಯೂ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡಿದ್ದು ಐದು ಪಂದ್ಯಗಳಲ್ಲಿ ಒಂದು ಅರ್ಧ ಶತಕದ ಸಹಿತ 150 ರನ್‌ಗಳಿಸಿದ್ದರು.

IPL 2023: Jason Roy has been signed by KKR as replace for Shakib Al Hasab

2022ರ ಐಪಿಎಲ್ ಆವೃತ್ತಿಗೂ ಮುನ್ನ ನಡೆದ ಹರಾಜಿನಲ್ಲಿ ಜೇಸನ್ ರಾಯ್ 2 ಕೊಟಿ ಮೊತ್ತಕ್ಕೆ ಗುಜರಾತ್ ಟೈಟನ್ಸ್ ತಂಡದ ಪಾಲಾಗಿದ್ದರು. ಆದರೆ ವೈಯಕ್ತಿಕ ಕಾರಣಗಳನ್ನು ನೀಡಿ ಅವರು ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದರು. 2020ರ ಆವೃತ್ತಿಯಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ 1.5 ಕೋಟಿ ನೀಡಿ ಖರೀದಿಸಿದ ಬಳಿಕ ಆಡದೆ ಹಿಂದಕ್ಕೆ ಸರಿದಿದ್ದರು.

32ರ ಹರೆಯದ ಜೇಸನ್ ರಾಯ್ ಇಂಗ್ಲೆಂಡ್ ತಂಡದ ಪರವಾಗಿ 64 ಟಿ20 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದು 137.61ರ ಸ್ಟ್ರೈಕ್‌ರೇಟ್‌ನಲ್ಲಿ 1522 ರನ್‌ ಗಳಿಸಿದ್ದಾರೆ. ಇದರಲ್ಲಿ 8 ಅರ್ಧ ಶತಕ ಸಿಡಿಸಿದ್ದಾರೆ ಇಂಗ್ಲೀಶ್ ಬ್ಯಾಟರ್. ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಅವಕಾಶ ಪಡೆದುಕೊಂಡಿರುವ ಜೇಸನ್ ರಾಯ್ ಈ ಆವೃತ್ತಿಯನ್ನು ಯಾವ ರೀತಿಯಾಗಿ ಬಳಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Ruturaj Gaikwad: ಆರೆಂಜ್ ಕ್ಯಾಪ್ ಬಗ್ಗೆ ಯೋಚನೆಯಿಲ್ಲ: ತನ್ನ ಗುರಿಯನ್ನು ಬಹುರಂಗಪಡಿಸಿದ ಋತುರಾಜ್

ಇನ್ನು ಈ ಬಾರಿಯ ಆವೃತ್ತಿಗೂ ಮುನ್ನ ನಡೆದ ಹರಾಜಿನಲ್ಲಿ ಕೆಕೆಆರ್ ತಂಡ ಬಾಂಗ್ಲಾದೇಶದ ಮತ್ತೋರ್ವ ಆಟಗಾರ ಲಿಟನ್ ದಾಸ್ ಅವರನ್ನು ಕೂಡ ಸೇರ್ಪಡೆಗೊಳಿಸಿತ್ತು. ಲಿಟನ್ ದಾಸ್ ಪ್ರಸ್ತುತ ರಾಷ್ಟ್ರೀಯ ತಂಡದ ಕರ್ತವ್ಯದಲ್ಲಿದ್ದು ಐರ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದಾರೆ. ಏಕೂಕ ಪಂದ್ಯದ ಈ ಸರನಿ ಮುಕ್ತಾಯದ ಬಳಿಕ ಲಿಟನ್ ದಾಸ್ ಕೆಕೆಆರ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಏಕೈಕ ಪಂದ್ಯವನ್ನಾಡಿದ್ದು ಎರಡನೇ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಮೊದಲ ಪಂದ್ಯವನ್ನಾಡಿದ್ದು ಈ ಪಂದ್ಯದಲ್ಲಿ ಕೆಕೆಆರ್ ಸೋಲು ಅನುಭವಿಸಿತ್ತು.ಇನ್ನು ನಾಯಕ ಶ್ರೇಯಸ್ ಐಯ್ಯರ್ ಗಾಯದಿಂದಾಗಿ ಅಲಭ್ಯವಾಗಿದ್ದು ಅವರ ಬದಲಿಗೆ ನಿತೀಶ್ ರಾಣಾ ಕೆಕೆಆರ್ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಹೊತ್ತಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ (ನಾಯಕ), ವರುಣ್ ಚಕ್ರವರ್ತಿ, ಲಾಕಿ ಫರ್ಗುಸನ್, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಹರ್ಷಿತ್ ರಾಣಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ರಿಂಕು ಸಿಂಗ್, ಟಿಮ್ ಸೌಥಿ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವೈಭವ್ ಅರೋರಾ, ಎನ್ ಜಗದೀಸನ್, ಸುಯಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಲಿಟನ್ ದಾಸ್, ಮನ್‌ದೀಪ್ ಸಿಂಗ್, ಜೇಸನ್ ರಾಯ್, ಶ್ರೇಯಸ್ ಅಯ್ಯರ್ (ಗಾಯಾಳು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+