LSG vs RCB: ಆರ್‌ಸಿಬಿ ವಿರುದ್ಧದ ಲಕ್ನೋ ಸೋಲಿಗೆ ಅವರೇ ಕಾರಣ ಎಂದ ಇಮ್ರಾನ್ ತಾಹಿರ್!

ಏಕಾನ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 127 ರನ್‌ಗಳ ಗುರಿಯನ್ನು ಬೆನ್ನಟ್ಟಲು ಆರ್‌ಸಿಬಿ ವಿಫಲವಾಯಿತು. ಏಕಾನ ಕ್ರೀಡಾಂಗಣದ ನಿಧಾನಗತಿಯ ಹಾಗೂ ಕಠಿಣ ಪಿಚ್‌ನಲ್ಲಿ ಆರ್‌ಸಿಬಿ ಬೌಲರ್‌ಗಳು ಅದ್ಭುತ ಯಶಸ್ಸು ಸಾಧಿಸಿದ್ದು ಪಂದ್ಯವನ್ನು ಗೆದ್ದು ಬೀಗುವಲ್ಲಿ ಯಶಸ್ವಿಯಾದರು. ಈ ಪಂದ್ಯದ ಬಳಿಕ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಇಮ್ರಾನ್ ತಾಹಿರ್ ಹೇಳಿಕೆ ನೀಡಿದ್ದು ಆಟಗಾರರ ಜೊತೆಗೆ ಎಲ್‌ಎಸ್‌ಜಿ ತಂಡದ ಕೋಚ್‌ಗಳು ಕೂಡ ಈ ಸೋಲಿಗೆ ಕಾರಣ ಎಂದಿದ್ದಾರೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸುವುದು ಕಠಿಣವಾಗಲಿದೆ ಎಂಬುದರ ಅರಿವಿದ್ದರೂ ಎಲ್‌ಎಸ್‌ಜಿ ತಂಡದ ದಾಂಡಿಗರು ದೊಡ್ಡ ಹೊಡೆತಗಳಿಗೆ ಮುಂದಾಗಿ ವಿಕೆಟ್‌ಗಳನ್ನು ಕಳೆದುಕೊಂಡರು. ಈ ಬಗ್ಗೆ ವಿಶ್ಲೇಷನೆ ನಡೆಸಿದ ಇಮ್ರಾನ್ ತಾಹಿರ್ ಅವರ ಹೊಡೆತಗಳನ್ನು ಬಾರಿಸಲು ಆಟಗಾರರಿಗೆ ಎಲ್‌ಎಸ್‌ಜಿ ಮ್ಯಾನೇಜ್‌ಮೆಂಟ್ ಕಡೆಯಿಂದಲೇ ನಿರ್ದೇಶನ ಬಂದಿರುತ್ತದೆ ಎಂದಿದ್ದು ಇದರಿಂದಾಗಿ ದೊಡ್ಡ ತಪ್ಪಾಗಿದೆ ಎಂದಿದ್ದಾರೆ ಇಮ್ರಾನ್ ತಾಹಿರ್.

IPL 2023: Imran Tahir said Lucknow Super Giants coaches should be blamed for defeat against RCB

"ಕೆಎಲ್ ರಾಹುಲ್ ಗಾಯಕ್ಕೆ ತುತ್ತಾಗಿದ್ದು ಎಲ್ಲರಿಗೂ ತಿಳಿದಿದ್ದು ಬ್ಯಾಟಿಂಗ್‌ಗೆ ಇಳಿಯುವುದಿಲ್ಲ ಎಂಬುದು ಅರ್ಥವಾಗಿತ್ತು. ಹಾಗಾಗಿ ಅವರ ತಂಡದ ಉಳಿದ ಬ್ಯಾಟರ್‌ಗಳು ಅದರ ಜವಾಬ್ಧಾರಿ ವಹಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಕೋಚ್‌ಗಳು ಈ ವಿಚಾರವನ್ನು ಬ್ಯಾಟರ್‌ಗಳಿಗೆ ತಿಳಿಸಬೇಕಾಗಿತ್ತು ಹಾಗೂ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕಾಗಿತ್ತು" ಎಂದಿದ್ದಾರೆ ಇಮ್ರಾನ್ ತಾಹಿರ್.

"ಇದು ಅವರದ್ದೇ ಮೈದಾನ. ನನಗೆ ಇಲ್ಲಿ ಅಚ್ಚರಿಯುಂಟು ಮಾಡಿದ್ದು ಎಲ್ಲಾ ಆಟಗಾರರು ಕೂಡ ದೊಡ್ಡ ಹೊಡೆತಕ್ಕೆ ಮುಂದಾಗುತ್ತಿದ್ದರು. ಈ ಪಂದ್ಯದಲ್ಲಿ ಆ ಹೊಡೆತಗಳ ಅಗತ್ಯವಿತ್ತು ಎಂದು ನನಗೆ ಅನಿಸಲಿಲ್ಲ. ಫಾಫ್ ಡು ಪ್ಲೆಸಿಸ್ ಅವರ ಆಟವನ್ನು ನೀವು ಗಮನಿಸಿದರೆ ಅವರು ಸಿಂಗಲ್ ರನ್‌ಗಳ ಮೇಲೆ ಗಮನಹರಿಸಿದರು. ಅದು ಅವರ ಆಟದ ಶೈಲಿಯಲ್ಲ. ಸಾಮಾನ್ಯವಾದ ಆತ ಆಕ್ರಮಣಕಾರಿ ಆಟಗಾರ" ಎಂದಿದ್ದಾರೆ ಇಮ್ರಾನ್ ತಾಹಿರ್.

LSG vs RCB: ಮೈದಾನದಲ್ಲೇ ಜಗಳವಾಡಿದ ಕೊಹ್ಲಿ- ಗಂಭೀರ್‌ಗೆ ಭಾರೀ ಶಿಕ್ಷೆ; ನವೀನ್‌ಗೂ ದಂಡದ ಬಿಸಿ

ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ: ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸಿತು. ಬ್ಯಾಟಿಂಗ್‌ಗೆ ಸವಾಲೆನಿಸುವ ಪಿಚ್‌ನಲ್ಲಿ ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗ 126 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಆರ್‌ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್‌ಗೆ 61 ರನ್‌ಗಳಿಸಿದ್ದು ತಂಡ ಈ ಮೊತ್ತವನ್ನು ಗಳಿಸಲು ಕಾರಣವಾಯಿತು. ಉಳಿದಂತೆ ಯಾವುದೇ ಅಟಗಾರನಿಂದಲೂ ಉತ್ತಮ ಪ್ರದರ್ಶನ ಬಾರಲಿಲ್ಲ.

ಆರ್‌ಸಿಬಿ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಎಲ್‌ಎಸ್‌ಜಿ ತಂಡ ಆರ್‌ಸಿಬಿಯ ಭರ್ಜರಿ ಬೌಲಿಂಗ್ ದಾಳಿಗೆ ಹಿನ್ನಡೆ ಅನುಭವಿಸಿತು. ಸಂಘಟಿತ ಪ್ರದರ್ಶನ ನೀಡಿದ ಆರ್‌ಸಿಬಿ ಕೇವಲ 108 ರನ್‌ಗೆ ಎಲ್‌ಎಸ್‌ಜಿ ತಂಡವನ್ನು ಆಲೌಟ್ ಮಾಡಿದೆ. ಈ ಮೂಲಕ ಟೂರ್ನಿಯಲ್ಲಿ ಐದನೇ ಗೆಲುವು ಸಾಧಿಸಿದೆ ಆರ್‌ಸಿಬಿ. ಈ ಮೂಲಕ ಅಂಕಪಟ್ಟಯಲ್ಲಿ ಐದನೇ ಸ್ಥಾನಕ್ಕೇರಿದೆ ಆರ್‌ಸಿಬಿ ತಂಡ.

ಇನ್ನು ಆರ್‌ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ ಈ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. "ಈ ಹಾದಿಯಲ್ಲಿ ಈ ಗೆಲುವು ನಮಗೆ ಬಹಳ ಮುಖ್ಯವಾಗಿತ್ತು. ತವರಿನ ತಂಡಕ್ಕಿಂತಲೂ ಇಲ್ಲಿ ನಮಗೆ ದೊರೆತ ಬೆಂಬಲ ನಂಬಲಸಾಧ್ಯವಾಗಿತ್ತು. ಇದು ತಂಡವಾಗಿ ನಾವು ಎಷ್ಟು ಪ್ರೀತಿಯನ್ನು ಪಡೆದುಕೊಂಡಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ಸಹಿಹಿಯಾದ ಗೆಲುವಾಗಿದ್ದು ಹಲವು ಕಾರಣಗಳಿಗಾಗಿ ಉತ್ತಮವಾದ ಅನುಭವ ನೀಡಿದೆ. ಬಹಳ ಮುಖ್ಯವಾಗಿ ಈ ಮೊತ್ತವನ್ನು ರಕ್ಷಿಸಿಕೊಳ್ಳಲು ನಾವು ತೋರಿದ ಮನೋಭಾವ ಬಹಳ ಮುಖ್ಯವಾಗುತ್ತದೆ. ನಮ್ಮಿಂದ ಇದು ಸಾಧ್ಯ ಎಂಬ ಭಾವನೆ ಎಲ್ಲರಲ್ಲಿಯೂ ಇತ್ತು. ಈ ಕಾರಣದಿಂದಾಗಿಯೇ ನಾವು ಗೆಲುವು ಸಾಧಿಸಿದ್ದೇವೆ" ಎಂದಿದ್ದಾರೆ ವಿರಾಟ್ ಕೊಹ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+