Get Updates
Get notified of breaking news, exclusive insights, and must-see stories!

ಐಪಿಎಲ್ 2023: ಈ ಬಾರಿ ಆರ್‌ಸಿಬಿ ಸ್ಥಾನದ ಬಗ್ಗೆ ಭವಿಷ್ಯ ನುಡಿದ ಆಕಾಶ್ ಚೋಪ್ರಾ

ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಾಯುವಿಕೆ ಅಂತ್ಯಗೊಂಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದ್ಧೂರಿ ಚಾಲನೆ ಸಿಗಲಿದೆ.

ಐಪಿಎಲ್ ಸೀಸನ್ 16ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿವೆ.

IPL 2023: Former Cricketer Aakash Chopra Predicts Royal Challengers Bangalore Position In IPL 2023

ಇನ್ನು ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಮೊದಲ ಪಂದ್ಯವನ್ನು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಎದುರು ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.

2023ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರತಿಕ್ರಿಯಿಸಿದ್ದು, 2023ರ ಐಪಿಎಲ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಫಾಫ್ ಡು ಪ್ಲೆಸಿಸ್ ಪಡೆ ಅಗ್ರ ಮೂರರಲ್ಲಿ ಸ್ಥಾನ ಪಡೆಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

IPL 2023: Former Cricketer Aakash Chopra Predicts Royal Challengers Bangalore Position In IPL 2023

ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಫೈನಲ್ ಹಂತ ತಲುಪಿರುವ ಆರ್‌ಸಿಬಿ ತಂಡ ಶತಾಯಗತಾಯ ಈ ವರ್ಷ ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿ ಎತ್ತಿ ಹಿಡಿಯಲು ಎದುರು ನೋಡುತ್ತಿದೆ.

JioCinema ಆಯೋಜಿಸಿದ್ದ 'ಆಕಾಶವಾಣಿ' ಶೋನಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, "ಮುಂಬರುವ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಪ್ಲೇಆಫ್ ಪ್ರವೇಶಿಸಲು ನಾಲ್ಕನೇ ಸ್ಥಾನಕ್ಕಾಗಿ ಹೋರಾಡಲಿದೆ. ತವರಿನಲ್ಲಿ ಪಂದ್ಯಗಳನ್ನು ಆಡುವುದರಿಂದ ಆರ್‌ಸಿಬಿ ತಂಡಕ್ಕೆ ಹೆಚ್ಚು ತೊಂದರೆಯಾಗುತ್ತದೆ," ಎಂದು ಹೇಳಿದರು.

ಈ ಬಾರಿಯ ಪಂದ್ಯಾವಳಿಯಲ್ಲಿ ಆರ್‌ಸಿಬಿ ಬೌಲರ್‌ಗಳು ತಮ್ಮ ಅದೃಷ್ಟದ ಪರೀಕ್ಷೆ ಮಾಡಲಿದ್ದಾರೆ ಎಂದು ಆಕಾಶ್ ಚೋಪ್ರಾ ಲೆಕ್ಕ ಹಾಕಿದ್ದಾರೆ.

IPL 2023: Former Cricketer Aakash Chopra Predicts Royal Challengers Bangalore Position In IPL 2023

"ಆರ್‌ಸಿಬಿ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಬೇಕು. ಆದರೆ ತವರಿನಂಗಳದಲ್ಲಿ ಆಡುವಾಗ ಆರ್‌ಸಿಬಿ ತಂಡಕ್ಕೆ ಸಮಸ್ಯೆಗಳು ಎದುರಾಗುತ್ತವೆ. ತಟಸ್ಥ ಸ್ಥಳಗಳಲ್ಲಿ ಆಡುವಾಗ ಆರ್‌ಸಿಬಿ ಆಟಗಾರರು ಅತ್ಯುತ್ತಮವಾಗಿರುತ್ತಾರೆ. ಇದು ವಿಚಿತ್ರ ಸವಾಲಾಗಿದೆ. ಹೀಗಾಗಿ ಆರ್‌ಸಿಬಿ ತಂಡ ಈ ಬಾರಿ 4 ಮತ್ತು 6ರ ನಡುವೆ ಯಾವ ಸ್ಥಾನ ಬೇಕಾದರೂ ಗಳಿಸಬಹುದು. ಮೊದಲ ಮೂರರಲ್ಲಿ ಸ್ಥಾನ ಪಡೆಯುವುದು ಬಹುತೇಕ ಕಡಿಮೆ ಸಾಧ್ಯತೆ," ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

"ಬೌಲರ್‌ಗಳ ಪ್ರದರ್ಶನವು ಆರ್‌ಸಿಬಿ ತಂಡ ಯಾವ ಸ್ಥಾನ ಪಡೆಯಲಿದೆ ಎಂಬುದನ್ನು ನಿರ್ಧರಿಸುತ್ತದೆ. ಏಕೆಂದರೆ, ಅವರ ಬ್ಯಾಟಿಂಗ್ ಪಡೆ ಉನ್ನತ ಮಟ್ಟದಲ್ಲಿದೆ. ಆರ್‌ಸಿಬಿ ತಂಡದಲ್ಲಿ ವನಿಂದು ಹಸರಂಗ ಮತ್ತು ಜೋಶ್ ಹ್ಯಾಝಲ್‌ವುಡ್ ಅವರ ಲಭ್ಯತೆಯ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಗಳಿವೆ,'' ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

ಜೋಶ್ ಹ್ಯಾಝಲ್‌ವುಡ್ ಐಪಿಎಲ್ 2023ರ ಪಂದ್ಯಾವಳಿ ಆಡುವ ಸಾಧ್ಯತೆ ಕಡಿಮೆ

ಮಾಜಿ ಕ್ರಿಕೆಟಿಗ ಮತ್ತು ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರಾ ಮಾತು ಮುಂದುವರೆಸಿ, ಆರ್‌ಸಿಬಿ ತಂಡದ ಸ್ಟಾರ್ ಬೌಲರ್ ಜೋಶ್ ಹ್ಯಾಝಲ್‌ವುಡ್ ಬಗ್ಗೆ ಮಾತನಾಡಿದರು. "ಆರ್‌ಸಿಬಿ ತಂಡ ಬೌಲಿಂಗ್ ವಿಭಾಗದ ಆಧಾರಸ್ತಂಭ ಜೋಶ್ ಹ್ಯಾಝಲ್‌ವುಡ್ ಅವರ ಅನುಪಸ್ಥಿತಿಯಲ್ಲಿ ಆರ್‌ಸಿಬಿ ಸ್ವಲ್ಪ ದುರ್ಬಲವಾಗಲಿದೆ. ಆಸೀಸ್ ವೇಗಿಗೆ ಡೇವಿಡ್ ವಿಲ್ಲಿ ಸೂಕ್ತ ಬದಲಿ ಆಟಗಾರ ಅಲ್ಲ," ಎಂದು ಆಕಾಶ್ ಚೋಪ್ರಾ ಗಮನಸೆಳೆದರು.

ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಜೋಶ್ ಹ್ಯಾಝಲ್‌ವುಡ್ ಕಾಲಿನ ಗಾಯಕ್ಕೆ ತುತ್ತಾದರು. ಅಲ್ಲದೇ ಇತ್ತೀಚೆಗೆ ಮುಕ್ತಾಯಗೊಂಡ ಭಾರತದ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಆದ್ದರಿಂದ ಈ ಬಾರಿಯ ಐಪಿಎಲ್‌ನಲ್ಲಿ ಕೆಲವು ಆರಂಬಿಕ ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

"ಆರ್‌ಸಿಬಿ ತಂಡದಲ್ಲಿ ರೀಸ್ ಟೋಪ್ಲೆ, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್, ಸಿದ್ದಾರ್ಥ್ ಕೌಲ್ ಮತ್ತು ಹರ್ಷಲ್ ಪಟೇಲ್ ಅವರಂತಹ ಬೌಲರ್‌ಗಳನ್ನು ನೋಡಬಹುದು. ಅವರಲ್ಲದೆ ಕರ್ಣ್ ಶರ್ಮಾ ಮತ್ತು ಆಕಾಶ್ ದೀಪ್ ಕೂಡ ಇದ್ದಾರೆ. ಕೆಲವರು ಉತ್ತಮವಾಗಿ ಬೌಲಿಂಗ್ ಮಾಡಬಹುದು. ಆದರೆ, ಜೋಶ್ ಹ್ಯಾಜಲ್‌ವುಡ್ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ," ಎಂದು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+