CSK vs GT: ಐಪಿಎಲ್ ಫೈನಲ್ ಪಂದ್ಯದ ಇತ್ತೀಚಿನ ಹವಾಮಾನ ವರದಿ: ಕ್ರಿಕೆಟ್ ಪ್ರೇಮಿಗಳಿಗೆ ಖುಷಿಯ ಸುದ್ದಿ!
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆಯಾಗಿದೆ. ಮೇ 28ಕ್ಕೆ ಭಾನುವಾರ ಆಯೋಜನೆಯಾಗಬೇಕಿದ್ದ ಈ ಪಂದ್ಯಕ್ಕೆ ಮಳೆ ಭಾರೀ ಅಡ್ಡಿಯುಂಟು ಮಾಡಿದ ಕಾರಣ ಒಂದೂ ಎಸೆತ ಕಾಣಲು ಸಾಧ್ಯವಾಗಿಲ್ಲ. ಹೀಗಾಗಿ ಪಂದ್ಯವನ್ನು ಇಂದು ಸೋಮವಾರಕ್ಕೆ ಮುಂದೂಡಲಾಗಿದೆ. ಇಂದಿನ ಪಂದ್ಯಕ್ಕೂ ಮಳೆ ಸವಾಲೆಸೆಯುವ ಭೀತಿ ಇದೆಯಾದರೂ ಈ ಕ್ಷಣದ ಹವಮಾನ ವರದಿ ಅಭಿಮಾನಿಗಳಿಗೆ ಖುಷಿ ನಿಡುವಂತಿದೆ.
ಸೋಮವಾರ ಬೆಳಗಿನ ಹವಮಾನ ವರದಿಯ ಪ್ರಕಾರ ಸಂಜೆ 4-6 ಗಂಟೆಯವರೆಗೆ ಅಹ್ಮದಾಬಾದ್‌ನಲ್ಲಿ ಧಾರಾಕಾರವಾಗಿ ಮಳೆಯಾಗುವ ಸಾಧ್ಯತೆ 40-50 ಶೇಕಡಾದಷ್ಟಿದೆ ಎಂದು ಮಾಹಿತಿಯಿತ್ತು. ಇದು ಪಂದ್ಯದ ಆರಂಭವನ್ನು ಕೆಲ ಕಾಳ ವಿಳಂಬವಾಗಿಸವ ಸಾಧ್ಯತೆಯಿತ್ತು. ಆದರೆ ಕಳೆದ ಕೆಲ ಗಂಟೆಗಳಲ್ಲಿ ವಾತಾವರಣದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು ಪಂದ್ಯಕ್ಕೆ ಪೂರಕವಾಗಿದೆ.

'ಅಕ್ಯುವೆದರ್' ಮಾಹಿತಿಯ ಪ್ರಕಾರ ಈಗ 4-5 ಗಂಟೆಯ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆ ಶೇಕಡಾ 7ರಷ್ಟು ಮಾತ್ರವೇ ಇದೆ. ಇದು 6 ಗಂಟೆಯ ವೇಳೆಗೆ ಐದು ಶೇಕಡಾಗೆ ಇಳಿಯುವ ಸಾಧ್ಯತೆಯಿದೆ. ರಾತ್ರಿ 7 ಗಂಟೆಯ ಬಳಿಕ ಮಳೆಯಾಗುವ ಯಾವುದೇ ಸಾಧ್ಯತೆಯಿಲ್ಲ ಎಂದು ಹವಾಮಾನ ಹವಮಾನ ವರದಿ ತಿಳಿಸುತ್ತಿದೆ. ಹೀಗಾಗಿ ಪಂದ್ಯಕ್ಕೆ ಮಳೆಯ ಅಡ್ಡಿಯ ಪ್ರಮಾಣ ಮತ್ತಷ್ಟು ಕ್ಷೀಣಿಸಿದೆ.
ಭಾನುವಾರ ಹವಾಮಾನ ವರದಿಯಲ್ಲಿ ಇದ್ದಂತೆಯೇ ಭಾರೀ ಪ್ರಮಾಣದಲ್ಲಿ ಮಳೆಯಾಯಿತು. ಒಂದು ಹಂತದಲ್ಲಿ ಮಳೆ ನಿಂತು ಪಂದ್ಯ ಇನ್ನೇನು ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ ಮತ್ತೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲು ಆರಂಬಿಸಿದ ಕಾರಣ ಪಂದ್ಯ ನಡೆಯಲು ಅವಕಾಶವೇ ದೊರೆಯಲಿಲ್ಲ. ಹೀಗಾಗಿ ಇಂದಿಗೆ ಪಂದ್ಯ ಮುಂದೂಡಲಾಯಿತು.
ಮೀಸಲು ದಿನವೂ ವಾಶೌಟ್ ಆದರೆ?
ಮೀಸಲು ದಿನಕ್ಕೂ ಕೂಡ ಒಂದೇ ರೀತಿಯ ನಿಮಯವನ್ನು ಅಳವಡಿಸಿಕೊಳ್ಳಲಾಗಿದೆ. ರಾತ್ರಿ 9:45ರ ಅವಧಿಯವರೆಗೆ ಯಾವುದೇ ಓವರ್‌ಗಳ ಕಡಿತವಿಲ್ಲದೆ ಸಂಪೂರ್ಣ 20 ಓವರ್‌ಗಳ ಪಂದ್ಯ ನಡೆಯಲಿದೆ. ಅದಾದ ಬಳಿಕ ಓವರ್‌ಗಳನ್ನು ಕಡಿತಗೊಳಿಸಿ ಪಂದ್ಯ ನಡೆಸಲಾಗುತ್ತದೆ. ರಾತ್ರಿ 11.56ರ 5 ಓವರ್‌ಗಳ ಪಂದ್ಯಕ್ಕೆ ಕಟ್ಆಫ್ ಅವಧಿಯಾಗಿರಲಿದೆ. ಅದು ಕೂಡ ಸಾಧ್ಯವಾಗದಿದ್ದರೆ 1:20ರ ನಂತರ ಸೂಪರ್ ಓವರ್ ಮೂಲಕ ಫಲಿತಾಂಶ ಪಡೆಯುವ ಅವಕಾಶವಿದೆ.
ಇನ್ನು ಇಂದು ಕೂಡ ಪಂದ್ಯ ವಾಶೌಟ್ ಆದರೆ ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ತಂಡ ಚಾಂಪಿಯನ್ ಎನಿಸಿಕೊಳ್ಳಲಿದೆ. ಆಗ ಗುಜರಾತ್ ಟೈಟನ್ಸ್ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲಿದೆ.
ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ(ನಾಯಕ), ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಸುಭ್ರಾಂಶು ಸೇನಾಪತಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಮಹೇಶ್ ತೀಕ್ಷಣ, ಪ್ರಶಾಂತ್ ಸೋಲಂಕಿ, ದೀಪಕ್ ಚಾಹರ್, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶ ಪತಿರಾನ, ಬೆನ್ ಸ್ಟೋಕ್ಸ್, ಸಿಸಂದಾ ಮಗಲಾ, ಅಜಿಂಕ್ಯ ರಹಾನೆ, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್, ಭಗತ್ ವರ್ಮಾ, ಆಕಾಶ್ ಸಿಂಗ್
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ(ನಾಯಕ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಶೀದ್ ಖಾನ್, ಸಾಯಿ ಕಿಶೋರ್, ನೂರ್ ಅಹ್ಮದ್, ಜಯಂತ್ ಯಾದವ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಳ್, ದರ್ಶನ್ ನಲ್ಕಂಡೆ, ಪ್ರದೀಪ್ ಸಾಂಗ್ವಾನ್, ಶಿವಂ ಮಾವಿ, ಜೋಶುವಾ ಲಿಟಲ್, ಕೆಎಸ್ ಭರತ್, ಒಡಿಯನ್ ಸ್ಮಿತ್, ಮೋಹಿತ್ ಶರ್ಮಾ, ಉರ್ವಿಲ್ ಪಟೇಲ್.












Click it and Unblock the Notifications