Deepak Chahar: ಮತ್ತೆ ಗಾಯಗೊಂಡ ದೀಪಕ್ ಚಹರ್: ಪ್ರಮುಖ ಮಾಹಿತಿ ನೀಡಿದ ಸುರೇಶ್ ರೈನಾ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ದೀಪಕ್ ಚಹರ್ ಮತ್ತೆ ಗಾಯಗೊಂಡಿದ್ದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಲಕಾಲವಷ್ಟೇ ಅಂಗಳದಲ್ಲಿ ಕಾಣಿಸಿಕೊಂಡಿದ್ದರು. ಕೇವಲ ಒಂದು ಓವರ್ ಬೌಲಿಂಗ್ ಮಾಡಿದ ಚಹರ್ ಬಳಿಕ ಗಾಯದ ಕಾರಣದಿಂದಾಗಿ ಮೈದಾನವನ್ನು ತೊರೆದಿದ್ದಾರೆ. ಇದೀಗ ದೀಪಕ್ ಚಹರ್ ಬಗ್ಗೆ ಸುರೇಶ್ ರೈನಾ ಪ್ರಮುಖ ಮಾಹಿತಿ ಹಂಚಿಕೊಂಡಿದ್ದು ಮುಂದಿನ ನಾಲ್ಕೈದು ಪಂದ್ಯಗಳಿಗೆ ದೀಪಕ್ ಚಹರ್ ಲಭ್ಯವಾಗುವ ಸಾಧ್ಯತೆ ಕಡಿಮೆಯಿದೆ ಎಂದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡುವ ಬಳಗದಲ್ಲಿ ಭಾರೀ ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿತ್ತು. ಸ್ಟಾರ್ ಆಟಗಾರರಾದ ಬೆನ್ ಸ್ಟೋಕ್ಸ್, ಮೊಯೀನ್ ಅಲಿ ಆಡುವ ಬಳಗದಿಂದ ಹೊರಗುಳಿದಿದ್ದರು. ಬಳಿಕ ದೀಪಕ್ ಚಹರ್ ಕೂಡ ಪೂರ್ಣ ಪ್ರಮಾಣದಲ್ಲಿ ಆಡಲು ಲಭ್ಯವಾಗಲಿಲ್ಲ. ಹೀಗಿದ್ದರೂ ಸಿಎಸ್‌ಕೆ ತಂಡ ಈ ಪಂದ್ಯವನ್ನು ಸುಲಭವಾಗಿ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದು ಆಥ್ಮವಿಸ್ವಾಸವನ್ನು ಹೆಚ್ಚಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ದೀಪಕ್ ಚಹರ್ ಗಾಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಚಹರ್ ನಾಲ್ಕೈದು ಪಂದ್ಯಗಳಿಂದ ಹೊರಗುಳಿಯಬೇಕಾಗುವುದು ಸ್ಪಷ್ಟ ಎಂದಿದ್ದಾರೆ ಸುರೇಶ್ ರೈನಾ. ಇನ್ನು ಬೇರೆ ತಾಣಗಳಿಗೆ ಚೆನ್ನೈ ಬಹಳ ದೂರವಿರುವ ಕಾರಣ ಹೆಚ್ಚಿನ ಪ್ರಯಾಣ ಮಾಡಬೇಕಿದ್ದು ಇದು ಕೂಡ ಆಟಗಾರರ ಗಾಯಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ ಸುರೇಶ್ ರೈನಾ.
GT vs KKR Preview: ಹಾಲಿ ಚಾಂಪಿಯನ್ನರಿಗೆ ಸೋಲುಣಿಸ್ತಾರ ಕೆಕೆಆರ್? ಪ್ಲೇಯಿಂಗ್ 11, ಪಿಚ್ ವರದಿ
"ದೀಪಕ್ ನಾಲ್ಕೈದು ಪಂದ್ಯಗಳಿಂದ ಹೊರಗುಳಿಯಬೇಕಾಗುವಂತೆ ತೋರುತ್ತದೆ. ಅವರು ಮತ್ತೆ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾದಂತಿದೆ. ಚೆನ್ನೈ ಇತರ ಐಪಿಎಲ್ ಪಂದ್ಯಗಳು ನಡೆಯುವ ತಾಣಗಳಿಗಿಂತ ಹೆಚ್ಚು ದೂರದಲ್ಲಿರುವ ಕಾರಣ ಹೆಚ್ಚಿನ ಪ್ರಯಾಣವನ್ನು ನಡೆಸಬೇಕಾಗುತ್ತದೆ" ಎಂದಿದ್ದಾರೆ ಸಿಎಸ್‌ಕೆ ಮಾಜಿ ಆಟಗಾರ ಹಾಗೂ ಕಾಮೆಂಟೇಟರ್ ಸುರೇಶ್ ರೈನಾ.
ಇನ್ನು ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಬಹುನಿರೀಕ್ಷಿತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಆಘಾತ ನೀಡಿದ್ದು ಅಜಿಂಕ್ಯಾ ರಹಾನೆ ಬ್ಯಾಟಿಂಗ್. ಅಚ್ಚರಿಯೆಂಬಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಅಜಿಂಕ್ಯಾ ರಹಾನೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ್ದು ಅಬ್ಬರದ ಪ್ರದರ್ಶನ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ನೀಡಿದ 158 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಡೆವೋನ್ ಕಾನ್ವೆ ರನ್ ಗಳಿಸುವ ಮುನ್ನವೇ ವಿಕೆಟ್ ಕಳೆದುಕೊಂಡಿದ್ದರು ಕೂಡ ಅಜಿಂಕ್ಯಾ ರಹಾನೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಪರಿಣಾಮ ಸುಲಭ ಗೆಲುವು ಸಾಧಿಸಿತು ಸಿಎಸ್‌ಕೆ.
ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅಜಿಂಕ್ಯಾ ರಹಾನೆ ಈ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಂತ ವೇಗದ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ ಈ ಅನುಭವಿ ಆಟಗಾರ ಕೇವಲ 19 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಅಂತಿಮವಾಗಿ 27 ಎಸೆತಗಳನ್ನು ಎದುರಿಸಿದ ಅವರು 61 ರನ್‌ಗಳಿಸಿ ಔಟಾಗುವ ಮೂಲಕ ಸುಂದರ್ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಈ ಭರ್ಜರಿ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು.












Click it and Unblock the Notifications