ಧಾರವಾಡದಲ್ಲಿ ಅಕ್ಟೋಬರ್‌ನಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಟೂರ್ನಿ

ಧಾರವಾಡ, ಸೆಪ್ಟೆಂಬರ್ 14; ಕರ್ನಾಟಕದ ವಿದ್ಯಾಕಾಶಿ ಧಾರವಾಡದಲ್ಲಿ ಅಕ್ಟೋಬರ್‌ನಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಟೂರ್ನಿ ಆಯೋಜನೆ ಮಾಡಲಾಗಿದೆ. ವಿಶ್ವ ಮಟ್ಟದ ರ‍್ಯಾಂಕಿಂಗ್‌ನ ದಿಗ್ಗಜ ಆಟಗಾರರು ಈ ಟೂರ್ನಿಗಾಗಿ ಆಗಮಿಸುತ್ತಾರೆ.

ಧಾರವಾಡ ಜಿಲ್ಲಾ ಲಾಣ್ ಟೆನ್ನಿಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಜಂಟಿಯಾಗಿ ಧಾರವಾಡದಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಟೂರ್ನಿ ಆಯೋಜಿಸಿವೆ.

International Tennis Games At Dharwad In October 2023

ಸುಮಾರು 96 ವರ್ಷಗಳ ಇತಿಹಾಸವನ್ನು ಧಾರವಾಡದ ಟೆನ್ನಿಸ್ ಕೋರ್ಟ್ ಹೊಂದಿದೆ. ವಿಶ್ವ ಮಟ್ಟದ ಟೆನ್ನಿಸ್ ಟೂರ್ನಿಗಳನ್ನು ಆಯೋಜನೆ ಮಾಡುವ ಮೂಲಕ ಈ ಭಾಗದ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದೆ.

ಧಾರವಾಡದ ಟೆನ್ನಿಸ್ ಕೋರ್ಟ್‌ 5 ಸಿಂಥೆಟಿಕ್ ಯುಎಸ್‌ಟಿಎ ಶ್ರೇಣಿಯ ಕೋರ್ಟ್‌ಗಳನ್ನು ಒಳಗೊಂಡಿದೆ. ಕ್ರೀಡಾಪಟುಗಳಿಗಾಗಿ ಉತೃಷ್ಟ ದರ್ಜೆಯ ಜಿಮ್, ಉತ್ತಮ ಕೋಚ್‌ಗಳನ್ನು ಸಹ ಒಳಗೊಂಡಿದೆ.

ಸದಸ್ಯತ್ವಕ್ಕೆ ಅರ್ಜಿ ಆಹ್ವಾನ; ಈ ಅಂತರಾಷ್ಟ್ರೀಯ ಟೆನ್ನಿಸ್ ಟೂರ್ನಿಯ ಅಂಗವಾಗಿಯೇ ಟೆನ್ನಿಸ್ ಕ್ರೀಡಾ ಆಸಕ್ತರಿಗೆ ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್‌ನ ಆಜೀವ ಸದಸ್ಯತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್‍ ಆಜೀವ ಸದಸ್ಯತ್ವ ಪಡೆಯಲು ಸೆಪ್ಟೆಂಬರ್ 15 ರಿಂದ 22ರ ವರೆಗೆ ಸೀಮಿತ ಕಾಲಾವಕಾಶವನ್ನು ನೀಡಲಾಗಿದೆ. ನಿಗದಿತ ಅರ್ಜಿ ನಮೂನೆ ಹಾಗೂ ಸದಸ್ಯತ್ವ ಶುಲ್ಕದೊಂದಿಗೆ ಆಸಕ್ತರು ಸದಸ್ಯತ್ವ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂದೀಪ ಬಣವಿ, ಕಾರ್ಯದರ್ಶಿಗಳು, ಧಾರವಾಡ ಜಿಲ್ಲಾ ಲಾನ್ ಟೆನ್ನಿಸ್ ಅಸೋಸಿಯೇಷನ್ ಇವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9448460955, 6361398510.

ಟೆನ್ನಿಸ್ ಕಚೇರಿಗೆ ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಭೇಟಿ ನೀಡಿ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಧಾರವಾಡದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+