T20 2026: ಭಾರತದ ವಿಜಯಕ್ಕೆ ಪಾಕಿಸ್ತಾನದಲ್ಲೂ ಸಂಭ್ರಮಾಚರಣೆ, ವಿಡಿಯೋ ವೈರಲ್ Viral Video
ಶ್ರೀಲಂಕಾದ ಕೊಲಂಬೊದಲ್ಲಿ ನಡೆದ 2026ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಪಾಕಿಸ್ತಾನವನ್ನು 61 ರನ್‌ಗಳಿಂದ ಸೋಲಿಸಿ ತನ್ನ ದಾಖಲೆಯನ್ನು ಮುಂದುವರಿಸಿದೆ. ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ಪಂದ್ಯದ ಬಗ್ಗೆ ಇದೀಗ ಸಾಕಷ್ಟು ಚರ್ಚೆಗಳು ನಡೆದಿವೆ. ಆನ್‌ಲೈನ್ ಟ್ರೋಲ್ ಹಾಗೂ ಮೀಮ್ಸ್‌ಗಳು ಶುರುವಾಗಿವೆ. ವೀರೇಂದ್ರ ಸೆಹ್ವಾಗ್ ಹಾಗೂ ದೇವೇಂದ್ರ ಫಡ್ನವಿಸ್ ಸೇರಿದಂತೆ ಹಲವು ಗಣ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ವಿರುದ್ಧ ಪಂದ್ಯ ಸೋತಿರುವ ಪಾಕಿಸ್ತಾನವನ್ನು ಅಲ್ಲಿನ ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. ಪಾಕಿಸ್ತಾನದ ಸೋಲಿನ ನಂತರ ಶೋಯೆಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸಿದ್ದಾರೆ. ಭಾರತದ ವಿಜಯಕ್ಕೆ ಪಾಕಿಸ್ತಾನದಲ್ಲೂ ಸಂಭ್ರಮಾಚರಣೆ ನಡೆದಿದೆ. ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ.
2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ಭರ್ಜರಿ 61 ರನ್‌ಗಳ ಗೆಲುವು ದಾಖಲಿಸಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್‌ಗೆ ಕಾರಣವಾಗಿದೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಕ್ರಿಕೆಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು 175 ರನ್‌ಗಳ ಅಲ್ಪ ಮೊತ್ತದ ಟಾರ್ಗೆಟ್ ನೀಡಿತ್ತು. ಆದರೆ ಪಾಕಿಸ್ತಾನಕ್ಕೆ ಇದರ ಸಮೀಪವೂ ಬರಲು ಸಾಧ್ಯವಾಗಲಿಲ್ಲ.

ವಿವಿಧ ಪ್ರದೇಶಗಳಲ್ಲಿ ಭಾರತದ ಗೆಲುವನ್ನು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಭಾರತದಲ್ಲಿ ಭಾರತದ ಗೆಲುವಿಗೆ ವಿಡಿಯೋ, ಪೋಸ್ಟ್ ಹಾಗೂ ಪಾಕಿಸ್ತಾನದ ಟ್ರೋಲ್ ಕಂಡು ಬಂದರೆ, ಟೀಮ್ ಇಂಡಿಯಾದ ಪ್ರಬಲ ಪ್ರದರ್ಶನಕ್ಕೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದಲೂ ಕೆಲವರು ಸಂಭ್ರಮಿಸಿರುವ ವಿಡಿಯೋ ಹಾಗೂ ಪೋಸ್ಟ್‌ಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಭಾರತದ ಗೆಲುವಿಗೆ ಯಾರು ಏನಂದ್ರು
ವೀರೇಂದರ್ ಸೆಹ್ವಾಗ್: ಮಾಜಿ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ಅವರು, ಇಶಾನ್ ಕಿಶನ್ ನಿಜವಾದ ಧುರಂಧರನಂತೆ ಆಡಿದರು. ಟಿ-20 ಕ್ರಿಕೆಟ್‌ಗೆ ಹಳೆಯ ರೀತಿಯ ಆಟವನ್ನೇ ಮುಂದುವರಿಸುತ್ತಿರುವ ಪಾಕಿಸ್ತಾನ, ಭಾರತಕ್ಕೆ ಸೋಲಿಸಲು ಸುಲಭ ತಂಡವಾಗಿ ಕಂಡಿತು. ಎಂದಿನಂತೆ ಅವರಿಗೆ ಭಾರೀ ಸೋಲು ಎದುರಾಯಿತು.
ದೇವೇಂದ್ರ ಫಡ್ನವಿಸ್: ಸಂವೇದನಾಶೀಲ ಗೆಲುವು ಮತ್ತು ಸಂಪೂರ್ಣ ಪ್ರದರ್ಶನಕ್ಕಾಗಿ ಟೀಮ್ ಇಂಡಿಯಾವನ್ನು ಅಭಿನಂದಿಸಿದ್ದಾರೆ.
ಇರ್ಫಾನ್ ಪಠಾಣ್: Padosiyo... Sunday kesa raha? ಪಕ್ಕದ ಮನೆಯವರೇ ಭಾನುವಾರ ಹೇಗಿತ್ತು ಎಂದು ಕಿಚಾಯಿಸಿದ್ದಾರೆ.
ಪಿಸಿಬಿಯನ್ನು ಟೀಕಿಸಿದ ಶೋಯಬ್ ಅಖ್ತರ್
ಇನ್ನು ಭಾರತದ ವಿರುದ್ಧ ಪಾಕಿಸ್ತಾನ ಸೋತ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ತಂಡದ ನಿರ್ವಹಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ದೂರದರ್ಶನದ ಸಂವಾದದಲ್ಲಿ ಮಾತನಾಡಿದ ಅಖ್ತರ್, ಕಳಪೆ ಪ್ರದರ್ಶನ ನೀಡುವ ಹಿರಿಯ ಆಟಗಾರರನ್ನು ಬೆಂಬಲಿಸುವುದು ತಂಡಕ್ಕೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಆಡಳಿತಾತ್ಮಕ ನಿರ್ಧಾರಗಳು ಮತ್ತು ಪಾಕಿಸ್ತಾನ ಕ್ರಿಕೆಟ್‌ನ ತೀರ್ಮಾನಗಳ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕಳಪೆ ಫೀಲ್ಡಿಂಗ್ ಹೆಚ್ಚಿನ ಒತ್ತಡದ ಪಂದ್ಯಗಳಲ್ಲಿ ಪುನರಾವರ್ತಿತ ಸೋಲುಗಳಿಗೆ ಕಾರಣವಾಗಿದೆ. ಪಾಕಿಸ್ತಾನದ ಸೋಲು ತಂಡದ ಪ್ರದರ್ಶನ ಮತ್ತು ಮಂಡಳಿಯ ಕಾರ್ಯನಿರ್ವಹಣೆಯ ಪರಿಶೀಲನೆಯನ್ನು ತೋರಿಸುತ್ತದೆ ಎಂದಿದ್ದಾರೆ.
#INDvsNapak
— Mir Yar Baloch (@miryar_baloch) February 15, 2026
Congratulations🎉 to #TeamBharat #Bharat, love ❤ #RepublicOfBalochistan.@narendramodi @hyrbyair_marri pic.twitter.com/OMsxyuDCZr
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯ ಸಂಭ್ರಮಾಚರಣೆ
ಇನ್ನು ಭಾರತ - ಪಾಕಿಸ್ತಾನ ಟಿ- 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯ ಸಂಭ್ರಮಾಚರಣೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Congratulations India full support from Afghanistan🤣#T20WorldCup #INDvsPAK pic.twitter.com/DJuiAvAmdW
— Pathan Bhai (@PathanBhaiii) February 15, 2026












Click it and Unblock the Notifications