Paris Olympics: ಭಾರತಕ್ಕೆ ಮತ್ತೊಂದು ಕಂಚು: ಸ್ವಪ್ನಿಲ್ ಕುಸಾಲ್ ಐತಿಹಾಸಿಕ ಸಾಧನೆ
ಭಾರತದ ಭರವಸೆಯ ಶೂಟರ್ ಸ್ವಪ್ನಿಲ್ ಕುಸಾಲ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತ ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಮೂರನೇ ಪದಕವನ್ನು ತಮ್ಮದಾಗಿಸಿಕೊಂಡಿದೆ.
ಮಹಾರಾಷ್ಟ್ರದ ಸ್ವಪ್ನಿಲ್ ತಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ ಸೊಗಸಾದ ಪ್ರದರ್ಶನವನ್ನು ನೀಡಿದ್ದಾರೆ. ಈ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಪುರುಷರ 50 ಮೀ ರೈಫಲ್ ತ್ರಿ ಪೊಶಿಷನ್ ವಿಭಾಗದಲ್ಲಿ ಸ್ವಪ್ನಿಲ್ ಕಂಚಿನ ಸಾಧನೆ ಮಾಡಿದ್ದಾರೆ.

ಭಾರತಕ್ಕೆ ಮೂರನೇ ಪದಕ
ಒಲಿಂಪಿಕ್ಸ್‌ನಲ್ಲಿ ಭಾರತೀಯರ ಪದಕದ ಬೇಟೆ ಮುಂದುವರೆದಿದೆ. ಇದಕ್ಕೂ ಮೊದಲು ಮನು ಬಾಕರ್ ವೈಯಕ್ತಿಕ ವಿಭಾಗದಲ್ಲಿ ಕಂಚು ಪಡೆದಿದ್ದರು. ಅಲ್ಲದೆ ಮಿಶ್ರ ತಂಡ ವಿಭಾಗದಲ್ಲಿ ಮನು ಭಾಕರ್ ಹಾಗೂ ಸರಬ್‌ಜೋತ್ ಸಿಂಗ್ ಕಂಚಿಗೆ ಕೊರಳೊಡ್ಡಿದ್ದರು. ಗುರುವಾರ ಭಾರತಕ್ಕೆ ಮೂರನೇ ಪದಕ ಬಂದಿದ್ದು, ಇದು ಸಹ ಶೂಟಿಂಗ್‌ನಿಂದಲೇ ಬಂದಿದ್ದು ಭಾರತೀಯ ಅಭಿಮಾನಿಗಳಿಗೆ ಖುಷಿ ನೀಡಿದೆ.
ಅರ್ಹತಾ ಸುತ್ತಿನಲ್ಲಿ ಸೊಗಸಾದ ಪ್ರದರ್ಶನ ನೀಡಿದ ಸ್ವಪ್ನಿಲ್ ಕುಸಾಲ್ ಪದಕದತ್ತ ಚಿತ್ತವನ್ನು ನೆಟ್ಟಿದ್ದು ಬಿಡಲೇ ಇಲ್ಲ. ಹಂತ ಹಂತವಾಗಿ ಅಂಕಗಳನ್ನು ಬಾಚಿಕೊಳ್ಳುತ್ತಲೇ ಸಾಗಿದರು. ಈ ಮೂಲಕ ಪದಕದ ಹತ್ತಿರ ಬಂದು ನಿಂತರು. ಫೈನಲ್ ಶೂಟಿಂಗ್ ಆರಂಭವಾದ ಮೊದಲ ಹಂತದಲ್ಲಿ ಸ್ವಪ್ನಿಲ್ ಆರನೇ ಸ್ಥಾನದಲ್ಲಿದ್ದರು. ಆದರೆ ಧೃತಿ ಗೆಡದೆ ಸ್ವಪ್ನಿಲ್ ಸತತ ನಿಖರ ಶೂಟ್‌ಗಳನ್ನು ಮಾಡುವ ಮೂಲಕ ತಮ್ಮ ಸ್ಥಾನವನ್ನು ಏರಿಸಿಕೊಳ್ಳುತ್ತಾ ಸಾಗಿದರು.
ಚೀನಾಕ್ಕೆ ಚಿನ್ನ
50 ಮೀ ರೈಫಲ್ ತ್ರಿ ಪೊಶಿಷನ್ ವಿಭಾಗದಲ್ಲಿ ಸ್ವಪ್ನಿಲ್ ಒತ್ತಡವನ್ನು ಮೆಟ್ಟಿನಿಂತು ಶೂಟ್ ಮಾಡಿದರು. ಇದು ಸ್ವಪ್ನಿಲ್ ಅವರ ಮೊದಲ ಒಲಿಂಪಿಕ್ಸ್ ಆಗಿದ್ದು, ಮೊದಲ ಒಲಿಂಪಿಕ್ಸ್‌ನಲ್ಲೇ ಪದಕದ ಬೇಟೆಯನ್ನು ನಡೆಸಿದ್ದಾರೆ. ಈ ವಿಭಾಗದ ಚಿನ್ನವನ್ನು ಚೀನಾದ ಶೂಟರ್ ಪಡೆದರು. ಇವರು ಒಟ್ಟು 463.6 ಅಂಕಗಳನ್ನು ಕಲೆ ಹಾಕಿದರು. ಉಕ್ರೇನ್ ಶೂಟರ್ 461.3 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಭಾರತದ ಸ್ವಪ್ನಿಲ್ 451.4 ಅಂಕವನ್ನು ಕಲೆ ಹಾಕಿದರು.
ಪದಕವನ್ನು ಗೆದ್ದ ಮೇಲೆ ಮಾತನಾಡಿರುವ ಸ್ವಪ್ನಿಲ್ ಶೂಟ್ ಮಾಡುವಾಗ ಕೊಂಚ್ ನರ್ವಸ್ ಆಯಿತು. ಇಂತಹ ದೊಡ್ಡ ಈವೆಂಟ್‌ನಲ್ಲಿ ಇಂತಹ ಸಾಧನೆ ಮಾಡಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಭಾರತಕ್ಕಾಗಿ ಪದಕ ಗೆದ್ದಿರುವುದು ಖುಷಿಯ ವಿಚಾರ ಎಂದಿದ್ದಾರೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications