ಈ ಸಲ ಕಪ್ ನಮ್ದೇ... 50 ವರ್ಷಗಳ ಇತಿಹಾಸ ಧೂಳ್ ಧೂಳ್ ಮಾಡಿದ ಭಾರತದ ಮಹಿಳಾ ಕ್ರಿಕೆಟ್ ತಂಡ... World Cup

ಕ್ರಿಕೆಟ್ ಆಟವನ್ನು ದೇವರು & ಧರ್ಮ ಎಂದು ಪೂಜಿಸುವ ಭಾರತದಲ್ಲಿ ಈಗ ಹೊಸ ಇತಿಹಾಸ ನಿರ್ಮಾಣ ಆಗಿದೆ. ಇಷ್ಟು ದಿನಗಳ ಕಾಲ ಪುರುಷರು ಅಂದ್ರೆ ಹುಡುಗರ ಕ್ರಿಕೆಟ್ ತಂಡ ದಾಖಲೆ ಮೇಲೆ ದಾಖಲೆ ನಿರ್ಮಾಣ ಮಾಡಿ ದೊಡ್ಡ ಹೆಸರು ಸಂಪಾದಿಸಿ, ಲಕ್ಷಾಂತರ ಕೋಟಿ ರೂಪಾಯಿ ಹಣ ಹರಿದು ಬರುವಂತೆ ಮಾಡುತ್ತಿದ್ದರು. ಆದರೆ ಇದೀಗ ಹುಡುಗರನ್ನೂ ಮೀರಿಸಲು ಮಹಿಳಾ ಕ್ರಿಕೆಟ್ ತಂಡ ಎಂಟ್ರಿ ಕೊಟ್ಟಿದೆ. ಅಂದಹಾಗೆ, ಈ ಸಲ ಕಪ್ ನಮ್ದೇ... 50 ವರ್ಷಗಳ ಇತಿಹಾಸ ಧೂಳ್ ಧೂಳ್ ಮಾಡಿದ ಭಾರತದ ಮಹಿಳಾ ಕ್ರಿಕೆಟ್ ತಂಡ...

ಹೌದು, ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಇದೀಗ ಭಾರತದ ಮಹಿಳಾ ಕ್ರಿಕೆಟ್ ತಂಡ ನಿರ್ಮಾಣ ಮಾಡಿದೆ. ಮೊದಲ ಬಾರಿಗೆ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿಯು ಶುರುವಾಗಿದ್ದು 1973ರ ಸಮಯದಲ್ಲಿ. ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿ ಶುರುವಾಗಿ ಈಗಾಗಲೇ ಸುಮಾರು 50 ವರ್ಷ ಕಳೆದಿದೆ. ಈ 50 ವರ್ಷಗಳಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಒಂದೇ ಒಂದು ವರ್ಲ್ಡ್ ಕಪ್ ಕೂಡ ಗೆದ್ದಿರಲಿಲ್ಲ. ಆದರೆ ಈ ಬಾರಿ ಭರ್ಜರಿಯಾಗಿ ಭಾರತದ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿದೆ. ಈ ಮೂಲಕ 50 ವರ್ಷಗಳ ನಂತರ ಇತಿಹಾಸ ನಿರ್ಮಿಸಿದೆ.

Indian Cricket Team Created History At 2025 Women s ODI World Cup Final Match

ಸ್ಮೃತಿ ಅಬ್ಬರಕ್ಕೆ ಆಫ್ರಿಕಾ ಉಡೀಸ್!

ಅಂದಹಾಗೆ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರ ಬ್ಯಾಟಿಂಗ್ ಅಬ್ಬರಕ್ಕೆ ಇದೀಗ ದಾಖಲೆಗಳೂ ಧೂಳ್ ಧೂಳ್ ಆಗಿ ಹೋಗಿವೆ. ಅದರಲ್ಲೂ 45 ರನ್ ಬಾರಿಸಿ 8 ಬೌಂಡರಿ ಚಚ್ಚಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರು ಭರ್ಜರಿಯಾಗಿ ಆರಂಭವೇ ಶತಕದ ಜೊತೆಯಾಟ ಆಡಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

ಈ ಮೂಲಕ, ಅಂತಿಮವಾಗಿ ಟೀಂ ಇಂಡಿಯಾ 298 ರನ್ ಗಳಿಸಿ ಸವಾಲಿನ ಮೊತ್ತವನ್ನೇ ದಕ್ಷಿಣ ಆಫ್ರಿಕಾಗೆ ನೀಡಿತ್ತು. ಮಳೆಯ ನಡುವೆ ಇನ್ನೇನು ಮ್ಯಾಚ್ ನಿಂತು ಹೋಗುತ್ತದೆ ಎನ್ನುವಾಗ ಇದು ಅಭಿಮಾನಿಗಳಿಗೆ ನೆಮ್ಮದಿ ನೀಡಿತ್ತು. ಮತ್ತೊಂದು ಕಡೆ 299 ರನ್ ಗುರಿಯನ್ನ ಬೆನ್ನುಹತ್ತಿದ್ದ ದಕ್ಷಿಣ ಆಫ್ರಿಕಾ ತಂಡ ಕೇವಲ 246 ರನ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿತ್ತು. ಹೀಗಾಗಿ ಭಾರತ ತಂಡ 50 ವರ್ಷಗಳ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಾಣ ಮಾಡಿದೆ.

ಮಳೆ ಕಾಟದ ನಡುವೆ ಮ್ಯಾಚ್ ಶುರು!

ನಮ್ಮ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್ ಅಖಾಡದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ನೀಡಿದ್ದ ಭರ್ಜರಿ 339 ರನ್‌ಗಳ ಗುರಿಯನ್ನ ಸುಲಭವಾಗಿ ಬೆನ್ನುಹತ್ತಿ ಗೆದ್ದು ಬೀಗಿತ್ತು. ಈ ಮೂಲಕವೇ ಹೊಸ ಇತಿಹಾಸ ಕೂಡ ನಿರ್ಮಾಣ ಮಾಡಿತ್ತು. ಆದ್ರೆ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಮ್ಯಾಚ್ ಆಡಲು ಇಂಡಿಯನ್ ವುಮೆನ್ಸ್ ಕ್ರಿಕೆಟ್ ಟೀಂ ಸಜ್ಜಾಗಿತ್ತು. ಆದರೆ ಇಂತಹ ಸಮಯದಲ್ಲೇ 2025 ಮಹಿಳೆಯರ ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್ ಪಂದ್ಯಕ್ಕೆ ಮಳೆ ಕಾಟ ಎದುರಾಗಿತ್ತು. ಆದರೆ ಅಂತಿಮವಾಗಿ ಮಳೆ ಬ್ರೇಕ್ ಕೊಟ್ಟ ಕಾರಣಕ್ಕೆ ಮ್ಯಾಚ್ ಶುರುವಾಗಿತ್ತು. ಕ್ರಿಕೆಟ್ ದೇವರು ಸಚಿನ್ ಬಂದ ಕಾರಣಕ್ಕೆ ಈ ರೀತಿ ಮಳೆ ನಿಂತಿದೆ ಅನ್ನೋ ಮಾತನ್ನೂ ಅಭಿಮಾನಿಗಳು ಹೇಳಿದರು. ಅಂತಿಮವಾಗಿ ಭಾರತದ ತಂಡ ವಿಶ್ವಕಪ್ ಗೆದ್ದು ಬೀಗಿತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+