Olympics: ಪದಕಕ್ಕೆ ಗುರಿ ಇಡುವ ವಿಶ್ವಾಸದಲ್ಲಿ ಆರ್ಚರಿ ತಂಡ
ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವದಲ್ಲಿ ಒಲಿಂಪಿಕ್ಸ್ ಮೇಳೈಸಲಿದೆ. ವಿಶ್ವದ ಕ್ರೀಡಾ ಹಬ್ಬವನ್ನು ಬರ ಮಾಡಿಕೊಳ್ಳಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಸಹ ಹಲವು ವಿಭಾಗಗಳಲ್ಲಿ ತನ್ನ ಅದೃಷ್ಟ ಪರೀಕ್ಷೆ ನಡೆಸಲಿದೆ. ಭಾರತ ಈ ಬಾರಿ ಪದಕದ ಬೇಟೆಯನ್ನು ನಡೆಸುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಅದರಂತೆ ಈ ಬಾರಿ ಭಾರತ ಈ ಒಂದು ವಿಭಾಗದಿಂದ ಸಹ ಪದಕ ಗೆಲ್ಲುವ ವಿಶ್ವಾಸ ಹೊಂದಿದೆ.
ಒಲಿಂಪಿಕ್ಸ್ ಜುಲೈ 26 ರಿಂದ ಫ್ರಾನ್ಸ್‌ನ ರಾಜಧಾನಿಯಲ್ಲಿ ಪ್ರಾರಂಭವಾಗಲಿದೆ. ಇದರಲ್ಲಿ 117 ಕ್ರೀಡಾಪಟುಗಳ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಬಾರಿಯೂ ಕುಸ್ತಿ, ಬ್ಯಾಡ್ಮಿಂಟನ್, ಶೂಟಿಂಗ್‌ನಲ್ಲಿ ಪದಕದ ಆಸೆಯನ್ನು ಇಟ್ಟುಕೊಂಡಿದೆ. ಈ ಬಾರಿ ಭಾರತ ತಂಡ ಆರ್ಚರಿ ವಿಭಾಗದಲ್ಲೂ ಪದಕದ ಕನಸು ಕಾಣುತ್ತಿದೆ.

ಅಚ್ಚರಿ ಫಲಿತಾಂಶ ನೀಡುತ್ತಾ ಆರ್ಚರಿ
ಭಾರತ ತಂಡದ ಆರು ಆರ್ಚರಿ ಪಟುಗಳು ಪರ್ಫೆಕ್ಟ್ ಗುರಿಯನ್ನು ಇಟ್ಟಲ್ಲಿ ಪದಕದ ಕನಸು ನನಸಾಗುತ್ತದೆ. ಈ ವರೆಗೆ ಭಾರತ ಒಮ್ಮೆಯೂ ಆರ್ಚರಿಯಲ್ಲಿ ಪದಕವನ್ನು ಗೆದ್ದಿಲ್ಲ. ಹೀಗಾಗಿ ಈ ಬಾರಿ ಪದಕ ಬಾಚಿಕೊಳ್ಳುವ ವಿಶ್ವಾಸವನ್ನು ಹೊಂದಿದೆ. ಈ ಮಹಾ ಕೂಟದಲ್ಲಿ ಭಾರತದ 3 ಪುರುಷ ಮತ್ತು 3 ಮಹಿಳಾ ಆಟಗಾರರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸ್ಪರ್ಧೆಗೆ ತೆರಳಿದ್ದಾರೆ.
ಈ ಬಾರಿ ಟೂರ್ನಿಗೆ ಭಾರತ ಆರ್ಚರಿ ತಂಡವನ್ನು ಭರದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಪುಣೆಯಲ್ಲಿ 10 ದಿನಗಳ ತರಬೇತಿ ಶಿಭಿರ ನಡೆಸಲಾಗಿತ್ತು. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಆರ್ಚರಿ ತಂಡ ಪದಕಕ್ಕೆ ಗುರಿ ಇಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ. 1988ರಲ್ಲಿ ಭಾರತ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸ್ಪರ್ಧೆಯಲ್ಲಿ ಭಾಗವಹಿಸಿತ್ತು ಆದರೆ ಇಲ್ಲಿಯವರೆಗೆ ಒಮ್ಮೆಯೂ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ.
ಪದಕದ ಆಸೆ ಚಿಗುರಿಸಿದ ಕ್ರೀಡಾಪಟುಗಳು
ದೀಪಿಕಾ ಕುಮಾರಿ ಮತ್ತು ತರುಣ್‌ದೀಪ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ನಿರೀಕ್ಷೆಯಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಏಕೈಕ ಭಾರತೀಯ ಮಹಿಳೆ ಎಂದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದ ದೀಪಿಕಾ ಮತ್ತು ಅವರು ಕ್ವಾರ್ಟರ್ ಫೈನಲ್‌ಗೆ ಮಾತ್ರ ತಲುಪುವಲ್ಲಿ ಯಶಸ್ವಿಯಾದರು. ಅಲ್ಲದೆ ಮಿಶ್ರ ಸ್ಪರ್ಧೆಯಲ್ಲೂ ಕ್ವಾರ್ಟರ್ ಫೈನಲ್ ತಲುಪಿದ್ದರು.
ದೀಪಿಕಾ ನಾಲ್ಕನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಕಾರಣ ಪದಕ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಲಿದ್ದಾರೆ. ದೀಪಿಕಾ ಕುಮಾರಿ ಮತ್ತು ತರುಣದೀಪ್ ರೈ ಅವರಲ್ಲದೆ, ಭಾರತದಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸ್ಪರ್ಧೆಯಲ್ಲಿ ಧೀರಜ್ ಬೊಮ್ಮದೇವರ, ಪ್ರವೀಣ್ ಜಾಧವ್, ಭಜನ್ ಕೌರ್ ಮತ್ತು ಅಂಕಿತಾ ಭಕತ್ ಅವರ ಹೆಸರುಗಳೂ ಸೇರಿವೆ.












Click it and Unblock the Notifications