ಗೌತಮ್ ಗಂಭೀರ್ ಅಲ್ಲ 9 ವಿಕೆಟ್‌ಗಳಿಂದ ಭಾರತ ಗೆದ್ದು ಬೀಗಲು ಇದೇ ಕಾರಣ... Virat Kohli
ಭಾರತ ಕ್ರಿಕೆಟ್ ತಂಡದಲ್ಲಿ ಬಿರುಗಾಳಿ ಎದ್ದಿದ್ದು, ಗೌತಮ್ ಗಂಭೀರ್ ವಿರುದ್ಧ 100 ಕೋಟಿಯನ್ನು ಮೀರಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡ ಹಾಳು ಮಾಡೋದಕ್ಕೆ ಗೌತಮ್ ಗಂಭೀರ್ ಬಂದಿರೋದು ಅನ್ನೋ ಗಂಭೀರ ಆರೋಪಗಳು ಕೂಡ ಸಂಚಲನ ಸೃಷ್ಟಿ ಮಾಡಿವೆ. ಇದಕ್ಕೆಲ್ಲಾ ಬೆಂಬಲ ನೀಡುವಂತೆ ವಿರಾಟ್ ಕೊಹ್ಲಿ ಇಲ್ಲದೆ ನಡೆದಿದ್ದ ಟೆಸ್ಟ್ ಸರಣಿಯಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಲ್ಲಿ ಭೀಕರವಾದ ಸೋಲು ಕಂಡಿತ್ತು ಭಾರತ ತಂಡ. ಆದರೆ ಈಗ ಸೇಡಿಗೆ ಸೇಡು ತೀರಿದ್ದು ಹರಿಣಗಳನ್ನ ಅಟ್ಟಾಡಿಸಿಕೊಂಡು ಬಾರಿಸಿದ್ದಾರೆ ವಿರಾಟ್ ಕೊಹ್ಲಿ, ಇಂತಹ ಸಮಯದಲ್ಲೇ...
ಗೌತಮ್ ಗಂಭೀರ್ ಮಾಡಿರುವ ಎಡವಟ್ಟಿನ ಬಗ್ಗೆ ವಿರಾಟ್ ಕೊಹ್ಲಿ ಅಭಿಮಾನಿಗಳು ಆಕ್ರೋಶದ ಕಿಡಿ ಹೊರ ಹಾಕುತ್ತಿದ್ದಾರೆ. ಗೌತಮ್ ಗಂಭೀರ್ ಸೇಡು ಹಾಗೂ ಕುತಂತ್ರ ಮಾಡುತ್ತಿದ್ದಾರೆ ಎಂಬ ಆರೋಪ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅಭಿಮಾನಿಗಳದ್ದು. ಅದರಲ್ಲೂ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಭವಿಷ್ಯ ಮುಗಿಸುವ ಪ್ರಯತ್ನ ಕೂಡ ಇದಾಗಿದೆ ಎಂಬ ಆರೋಪ ಸಂಚಲನ ಸೃಷ್ಟಿಸಿದೆ. ಹೀಗಿದ್ದಾಗಲೇ ಗೌತಮ್ ಗಂಭೀರ್ ಅಲ್ಲ 9 ವಿಕೆಟ್‌ಗಳಿಂದ ಭಾರತ ಗೆದ್ದು ಬೀಗಲು ಇದೇ ಕಾರಣ...

ಗೌತಮ್ ಗಂಭೀರ್ ಅಲ್ಲ 9 ವಿಕೆಟ್‌ಗಳಿಂದ...
ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಇರುವ ಬಿರುಕು ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗುತ್ತಿದ್ದು, ಗೌತಮ್ ಗಂಭೀರ್ ಕಂಡ್ರೆ ಸಾಕು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಉರಿದು ಉರಿದು ಬೀಳುತ್ತಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ದಿಢೀರ್ ಟಿ20 & ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿ ಹೊರಗೆ ಹೋಗಲು ಕಾರಣವೇ ಗೌತಮ್ ಗಂಭೀರ್ ಅನ್ನೋ ಗಂಭೀರ ಆರೋಪ ಕೂಡ ಮಾಡಲಾಗುತ್ತಿದೆ.
ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಜೀವನ ಮುಗಿಸಲು ಹಲವರು ಸಂಚು ಮಾಡಿದ್ದಾರೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದೆ. ಇಂತಹ ಸಮಯದಲ್ಲೇ, ಈ ಇಬ್ಬರೂ ಲೆಜೆಂಡ್ ಆಟಗಾರರು ಸೇರಿ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಗೆಲುವಿಗೆ ರಣತಂತ್ರ ಹೆಣೆದಿದ್ದರು ಎಂಬ ವಿಚಾರ ಈಗ ಮತ್ತೊಮ್ಮೆ ಹಲ್‌ಚಲ್ ಎಬ್ಬಿಸಿದೆ. ಹಾಗಾದ್ರೆ ಗೌತಮ್ ಗಂಭೀರ್ ಏನೂ ಅಲ್ವಾ?
ರೋ & ಕೋ ಜೋಡಿ ಮೋಡಿ!
ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3ನೇ ಪಂದ್ಯ ಗೆದ್ದು ಸರಣಿ ವಶ ಮಾಡಿಕೊಳ್ಳಲು ಇದೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕಾರಣ ಅಂತಿದ್ದಾರೆ ಅಭಿಮಾನಿಗಳು. ಯಾಕಂದ್ರೆ ಒಂದು ಹಂತದಲ್ಲಿ 350 ರನ್ ಗಡಿ ದಾಟುವ ರೀತಿ ಆಡುತ್ತಿದ್ದ ದಕ್ಷಿಣ ಆಫ್ರಿಕಾ ತಂಡದ ಸಾಲು ಸಾಲು ದಾಂಡಿಗರನ್ನು ಔಟ್ ಮಾಡಲು ತಂತ್ರ ಹೆಣೆದಿದ್ದೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ.
ಹೇಗೆಂದರೆ ವಿರಾಟ್ ಕೊಹ್ಲಿ & ಶರ್ಮಾ ತಮ್ಮ ಅನುಭವದ ಆಧಾರದಲ್ಲಿ ಬೌಲರ್‌ಗಳಿಗೆ ಸರಿಯಾದ ಮಾಹಿತಿ ನೀಡಿ, ಎಲ್ಲಿ ಬಾಲ್ ಹಾಕಿದರೆ ಅವರು ಔಟ್ ಆಗುತ್ತಾರೆ? ಅನ್ನೋದನ್ನ ಪ್ಲಾನ್ ಮಾಡಿ ಆರಂಭದಲ್ಲೇ ರಣತಂತ್ರ ಹೆಣೆದರು. ಇದರ ಪರಿಣಾಮ ದಕ್ಷಿಣ ಆಫ್ರಿಕಾ ತಂಡ ಭಾರತ ತಂಡದ ಎದುರು ಹೀನಾಯವಾಗಿ ಸೋತು ಹೋಯಿತು ಅಂತಾ ಅಭಿಮಾನಿಗಳು ವಿವರಣೆ ನೀಡುತ್ತಿದ್ದಾರೆ. ಅಲ್ಲದೆ, ಗೌತಮ್ ಗಂಭೀರ್ ಅಲ್ಲ 9 ವಿಕೆಟ್‌ಗಳಿಂದ ಭಾರತ ಗೆದ್ದು ಬೀಗಲು ವಿರಾಟ್ ಕೊಹ್ಲಿ ಹಾಗು ರೋಹಿತ್ ಶರ್ಮಾ ಕಾರಣ ಅಂತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು...












Click it and Unblock the Notifications