India VS Zimbabwe: ಹರಾರೆಯಲ್ಲಿ ಜಿಂಬಾಬ್ವೆ ಹರೋಹರ.. ಭಾರತದ ಗೆಲುವಿನ ರೂವಾರಿ ಯಾರು?
ಭಾರತ ತಂಡ ಸೇಡಿಗೆ ಸೇಡು ತೀರಿಸಿಕೊಂಡಿದ್ದು, ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಕಂಡ ನಂತರ ಈಗ ಮತ್ತೆ ಗೆದ್ದು ಬೀಗಿದೆ. T20 ವಿಶ್ವಕಪ್ ಗೆಲುವಿನ ಸಂಭ್ರಮದ ಹಿನ್ನೆಲೆ, ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದ ಬಿಸಿಸಿಐ ಯುವಕರ ತಂಡಕ್ಕೆ ಆದ್ಯತೆ ನೀಡಿತ್ತು. ಆದರೆ ಮೊದಲನೇ ಪಂದ್ಯದಲ್ಲೇ ಭಾರತ ತಂಡದ ಕಿರಿಯರು ಹೀನಾಯ ಸೋಲು ಕಂಡು, ಆಘಾತ ಸೃಷ್ಟಿಸಿದ್ದರು. ಈಗ ಆ ಭೀಕರ ಸೋಲಿನ ಸುಳಿಯಿಂದ ವಾಪಸ್ ಬಂದಿದೆ ಭಾರತ.
ಜಿಂಬಾಬ್ವೆ ತಂಡ ಇಂದು ಆರಂಭದಲ್ಲಿಯೇ ಸೋಲಿನ ಸುಳಿಗೆ ಸಿಲುಕಿತ್ತು. ಮೊದಲಿಗೆ ಟಾಸ್ ಸೋತು ಅನಿವಾರ್ಯ ಪರಿಸ್ಥಿತಿಯಲ್ಲಿ ಜಿಂಬಾಬ್ವೆ ಟೀಂ ಬೌಲಿಂಗ್ ಆರಂಭ ಮಾಡಿತ್ತು. ಈ ಪರಿಸ್ಥಿತಿಯಲ್ಲಿ ಭಾರತ ತಂಡವನ್ನ ಬೇಗ ಕಟ್ಟಿ ಹಾಕುವ ನಿರೀಕ್ಷೆ ಕೂಡ ಹೊಂದಿತ್ತು ಇದೇ ಜಿಂಬಾಬ್ವೆ ತಂಡ. ಆದರೆ ಆಗಿದ್ದೆಲ್ಲಾ ಉಲ್ಟಾ, ಭಾರತದ ಯುವ ದಾಂಡಿಗರು ಜಿಂಬಾಬ್ವೆ ಬೌಲಿಂಗ್ ದಾಳಿಯ ಚಚ್ಚಿ ಬಿಸಾಡಿದರು. ಶನಿವಾರದ ಸೇಡನ್ನು ಭಾನುವಾರ ಬಡ್ಡಿ ಸಮೇತ ತೀರಿಸಿಕೊಂಡ ಭಾರತ, ಗೆಲುವಿನ ರಣಕಹಳೆ ಮೊಳಗಿಸಿತ್ತು.

ಭಾರತಕ್ಕೂ ಎದುರಾಗಿತ್ತು ಆಘಾತ!
ಭಾರತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಲ್ಲೇ ಶುಭಮನ್ ಗಿಲ್ ಮತ್ತೊಮ್ಮೆ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿ 2 ರನ್‌ಗೆ ಔಟ್ ಆಗಿದರು. ಹೀಗಿದ್ದಾಗ ಭಾರತ ತಂಡಕ್ಕೆ ಸಂಕಷ್ಟವು ಎದುರಾಗಿತ್ತು. ಆದರೆ ಆಗ ಅಭಿಷೇಕ್ ಶರ್ಮಾ & ರುತುರಾಜ್ ಗಾಯಕ್ವಾಡ್ ಜೋಡಿ ಗಟ್ಟಿಯಾಗಿ ನಿಂತು ಜಿಂಬಾಬ್ವೆ ದಾಳಿಯನ್ನು ಎದುರಿಸಿತು. ಹೀಗಾಗಿ ಭಾರತ ತಂಡ ನಿಧಾನವಾಗಿ ಚೇತರಿಕೆ ಕಂಡು ಕೊನೆ ಕೊನೆಗೆ ಒಂದು ಬೃಹತ್ ಮೊತ್ತದತ್ತ ದಾಪುಗಾಲು ಇಡಲು ಶುರು ಮಾಡಿತ್ತು.
ಶತಕ ಸಿಡಿಸಿದ ಅಭಿಷೇಕ್ ಶರ್ಮಾ!
ಅಭಿಷೇಕ್ ಶರ್ಮಾ 47 ಬಾಲ್ ಎದುರಿಸಿ 7 ಬೌಂಡರಿ ಹಾಗೂ 8 ಸಿಕ್ಸರ್ ಬಾರಿಸಿ ಸರಿಯಾಗಿ 100 ರನ್ ಸಿಡಿಸಿ ಔಟ್ ಆದರು. ಹಾಗೆ ರುತುರಾಜ್ ಗಾಯಕ್ವಾಡ್ 1 ಸಿಕ್ಸರ್ 11 ಬೌಂಡರಿ ಸೇರಿ ಕೇವಲ 47 ಬಾಲ್ ಆಡಿ ಬರೋಬ್ಬರಿ 77 ರನ್ ಗಳಿಸಿದರು. ಕೊನೆಯಲ್ಲಿ ಬಂದ ರಿಂಕು ಸಿಂಗ್ ನಿನ್ನೆ ಡಕ್ ಔಟ್ ಆಗಿದ್ದ ಸೇಡನ್ನ ಇಂದು ಜಿಂಬಾಬ್ವೆ ವಿರುದ್ಧ ತೀರಿಸಿಕೊಂಡರು. ಹೀಗೆ ಕೇವಲ 22 ಬಾಲ್ ಆಡಿದ ರಿಂಕು ಸಿಂಗ್ 5 ಸಿಕ್ಸರ್ ಸೇರಿ ಒಟ್ಟಾರೆ 48 ರನ್ ಚಚ್ಚಿದರು. ಈ ಮೂಲಕ ಭಾರತ ತಂಡ 20 ಓವರ್‌ನಲ್ಲಿ 234 ರನ್ ಚಚ್ಚಿದ್ದು, ಜಿಂಬಾಬ್ವೆ ತಂಡಕ್ಕೆ ಈಗ 235 ರನ್‌ಗಳ ಗುರಿ ನೀಡಿತ್ತು.
ಭಾರತ ತಂಡ ನೀಡಿದ್ದ 235 ರನ್‌ಗಳ ಗುರಿ ಬೆನ್ನು ಹತ್ತಿದ್ದ ಜಿಂಬಾಬ್ವೆ ತಂಡ ಕೇವಲ 134 ರನ್‌ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿದೆ. ಈ ಮೂಲಕ ಮೊದಲ ಪಂದ್ಯ ಗೆದ್ದು, 2ನೇ ಟಿ20 ಪಂದ್ಯದಲ್ಲೂ ಭಾರತವನ್ನು ಸೋಲಿಸುವ ಗುರಿ ಹೊಂದಿದ್ದ ಜಿಂಬಾಬ್ವೆ ತಂಡ ಈಗ ಹೀನಾಯ ಸೋಲಿನ ಮೂಲಕ ಸೈಲೆಂಟ್ ಆಗಿದೆ.












Click it and Unblock the Notifications