India vs Australia: ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್‌ ಮಾಸ್ಟರ್ಸ್ ಲೀಗ್ ಟಿ20 ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 94 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಭಾರತ ಫೈನಲ್ ಪ್ರವೇಶಿಸಿದೆ. ಯುವರಾಜ್ ಸಿಂಗ್, ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೆ, ಶಹಬಾಜ್ ನದೀಮ್ ಮತ್ತು ವಿನಯ್ ಕುಮಾರ್ ಬೌಲಿಂಗ್‌ನಲ್ಲಿ ಮಿಂಚುವ ಮೂಲಕ ಭಾರತಕ್ಕೆ ಬೃಹತ್ ಗೆಲುವು ತಂದುಕೊಟ್ಟರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಾಸ್ಟರ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 220 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ನಾಯಕ ಸಚಿನ್ ತೆಂಡೂಲ್ಕರ್ 30 ಎಸೆತಗಳಲ್ಲಿ 42 ರನ್ ಗಳಿಸಿದರೆ, ಯುವರಾಜ್ ಸಿಂಗ್ 30 ಎಸೆತಗಳಲ್ಲಿ 1 ಬೌಂಡರಿ 7 ಸಿಕ್ಸರ್ ಸಹಿತ 59 ರನ್ ಗಳಿಸಿ ಅಬ್ಬರಿಸಿದರು.

India win against australia semifinal international masters league t20

ಸ್ಟುವರ್ಟ್ ಬಿನ್ನಿ 21 ಎಸೆತಗಳಲ್ಲಿ 36 ರನ್ ಗಳಿಸಿದರೆ, ಯೂಸುಫ್ ಪಠಾಣ್ 10 ಎಸೆತಗಳಲ್ಲಿ 23 ರನ್ ಗಳಿಸಿದರು. ಇರ್ಫಾನ್ ಪಠಾಣ್ 7 ಎಸೆತಗಳಲ್ಲಿ 19 ರನ್ ಗಳಿಸಿ ಮಿಂಚಿದರು. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಬೃಹತ್ ಮೊತ್ತ ಕಲೆಹಾಕಿತು.

ಭಾರತದ ಮಾರಕ ಬೌಲಿಂಗ್‌

ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಮಾಸ್ಟರ್ಸ್ ಭಾರತದ ಮಾರಕ ಬೌಲಿಂಗ್ ದಾಳಿಗೆ ಸಿಲುಕು ನಲುಗಿತು. 18.1 ಓವರ್ ಗಳಲ್ಲಿ 126 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ನಾಯಕ ಶೇನ್ ವ್ಯಾಟ್ಸನ್ 5 ರನ್ ಗಳಿಸಿ ಔಟಾದರೆ, ಶಾನ್ ಮಾರ್ಷ್ ಮತ್ತು ಬೆನ್ ಡಂಕ್ ತಲಾ 21 ರನ್ ಗಳಿಸಿದರು.

ಡೇನಿಯಲ್ ಕ್ರಿಶ್ಚಿಯನ್ 2 ರನ್ ಗಳಿಸಿ ನಿರಾಸೆ ಮೂಡಿಸಿದರು. ಬೆನ್ ಕಟಿಂಗ್ 39 ರನ್ ಗಳಿಸುವ ಮೂಲಕ ಆಸರೆಯಾದರೂ ಆಸ್ಟ್ರೇಲಿಯಾದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಶಬಾಜ್ ನದೀಮ 4 ಓವರ್ ಗಳಲ್ಲಿ ಕೇವಲ 15 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದುಕೊಂಡರು. ವಿನಯ್ ಕುಮಾರ್ ಮತ್ತು ಇರ್ಫಾನ್ ಪಠಾಣ್ ತಲಾ 2 ವಿಕೆಟ್ ಪಡೆದರು. ಸ್ಟುವರ್ಟ್ ಬಿನ್ನಿ ಮತ್ತು ಪವನ್ ನೇಗಿ ತಲಾ 1 ವಿಕೆಟ್ ಪಡೆದುಕೊಂಡರು.

ಈ ಗೆಲುವಿನ ಮೂಲಕ ಇಂಡಿಯಾ ಮಾಸ್ಟರ್ಸ್ ಫೈನಲ್ ತಲುಪಿದ್ದು ಮಾರ್ಚ್ 16ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಅಥವಾ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಗುರುವಾರ (ಮಾರ್ಚ್ 14) ನಡೆಯಲಿರುವ ಮತ್ತೊಂದು ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್‌ ತಂಡಗಳು ಸೆಣೆಸಲಿದ್ದು ಇಲ್ಲಿ ಗೆಲ್ಲುವ ತಂಡ ಭಾರತದ ವಿರುದ್ಧ ಫೈನಲ್‌ನಲ್ಲಿ ಆಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+