2023ರ ಮಹಿಳಾ ಟಿ20 ವಿಶ್ವಕಪ್: ಫೆ.12ಕ್ಕೆ ಇಂಡೋ-ಪಾಕ್ ಪಂದ್ಯ

ದುಬೈ, ಅ.3: 2023 ರ ಮಹಿಳಾ ಟಿ 20 ವಿಶ್ವಕಪ್‌ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರದಂದು ಪ್ರಕಟಿಸಿದೆ. ಐಸಿಸಿ ವೇಳಾಪಟ್ಟಿ ಪ್ರಕಾರ ಫೆಬ್ರವರಿ 12 ರಂದು ಕೇಪ್ ಟೌನ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ ಐರ್ಲೆಂಡ್ ಜೊತೆಗೆ ಭಾರತವು ಗ್ರೂಪ್ 2 ರಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ಆಫ್ರಿಕಾದಲ್ಲಿ 2023ರ ಫೆಬ್ರವರಿ 10-26 ರ ತನಕ ಪಂದ್ಯಾವಳಿ ಆಯೋಜನೆಗೊಂಡಿದೆ.

ಭಾರತ ತನ್ನ ಎರಡನೇ ಪಂದ್ಯವನ್ನು ಫೆಬ್ರವರಿ 15 ರಂದು ವೆಸ್ಟ್ ಇಂಡೀಸ್ ವಿರುದ್ಧ ಕೇಪ್ ಟೌನ್‌ನಲ್ಲಿ ಆಡಲಿದೆ. ಫೆಬ್ರವರಿ 18 ಮತ್ತು 20 ರಂದು ಗ್ಕೆಬರ್ಹಾದಲ್ಲಿ ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧ ಸೆಣಸಲಿದೆ.

India to open campaign against Pakistan in 2023 womens T20 WC

ಕೇಪ್‌ಟೌನ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾವನ್ನು ಎದುರಿಸಲಿದೆ.
ಕೇಪ್ ಟೌನ್‌ನಲ್ಲಿ ಅಂತಿಮ ಹಣಾಹಣಿ ಫೆಬ್ರವರಿ 26 ರಂದು ಎಂದು ನಿಗದಿಯಾಗಿದೆ.

ಒಂದು ವೇಳೆ ನಿಗದಿತ ದಿನಾಂಕದಂದು ಆಟ ನಡೆಯದಿದ್ದರೆ, ಪ್ರಮುಖ ಅಡಚಣೆಗಳಿಂದ ಆಟ ರದ್ದಾದರೆ ಮರುದಿನ ಮೀಸಲು ದಿನ ಲಭ್ಯವಿರುತ್ತದೆ. ಕೇಪ್ ಟೌನ್, ಪರ್ಲ್ ಮತ್ತು ಗ್ಕೆಬರ್ಹಾ ಪಂದ್ಯಾವಳಿಯ ಪಂದ್ಯಗಳನ್ನು ಆಯೋಜಿಸಲಿದ್ದು, ಎಲ್ಲಾ ನಾಕೌಟ್ ಪಂದ್ಯಗಳು ಕೇಪ್ ಟೌನ್‌ನಲ್ಲಿ ನಡೆಯಲಿವೆ.

2023 ರ ಮಹಿಳಾ ಟಿ 20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಒಟ್ಟು10 ತಂಡಗಳಿವೆ. ಒಟ್ಟು ಇಪ್ಪತ್ಮೂರು ಪಂದ್ಯಗಳು ನಡೆಯಲಿವೆ. ಮಹಿಳೆಯರ T20 ವಿಶ್ವಕಪ್‌ನ ಎಂಟನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಜೊತೆಗೆ ಬಾಂಗ್ಲಾದೇಶ ಮತ್ತು ಐರ್ಲೆಂಡ್ ಭಾಗವಹಿಸುವ ತಂಡಗಳ ಪಟ್ಟಿಯಲ್ಲಿವೆ.

ಐದು ಬಾರಿಯ ಪ್ರಶಸ್ತಿ ವಿಜೇತರು ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವ ಗುಂಪು 1 ರಲ್ಲಿದೆ. ನ್ಯೂಜಿಲೆಂಡ್, ಆತಿಥೇಯ ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಇದೇ ಗುಂಪಿನಲ್ಲಿವೆ.

ಬಾಂಗ್ಲಾದೇಶವು ಇತ್ತೀಚೆಗೆ ಗ್ರೂಪ್ 2 ರಲ್ಲಿ ಸ್ಥಾನ ಪಡೆದಿರುವ ಇತರ ಅರ್ಹತಾ ತಂಡವಾದ ಐರ್ಲೆಂಡ್ ಅನ್ನು ಸೋಲಿಸುವ ಮೂಲಕ ಮಹಿಳಾ T20 ವಿಶ್ವಕಪ್ ಕ್ವಾಲಿಫೈಯರ್ ಫೈನಲ್ ಅನ್ನು ಗೆದ್ದಿದೆ. ಫೆಬ್ರವರಿ 21 ರವರೆಗೆ ನಡೆಯುವ ಗುಂಪು ಹಂತದಲ್ಲಿ, ಪ್ರತಿ ತಂಡವು ತಮ್ಮ ಗುಂಪಿನ ಇತರ ನಾಲ್ಕು ತಂಡಗಳನ್ನು ಒಮ್ಮೆ ಎದುರಿಸಲಿವೆ. ಗುಂಪು ಹಂತದ ಕೊನೆಯಲ್ಲಿ ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿ-ಫೈನಲ್ ಪಂದ್ಯಗಳನ್ನು ಆಡಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+