India VS Pakistan: ಭಾರತಕ್ಕೆ ಭರ್ಜರಿ ಗೆಲುವು, ಪಾಕಿಸ್ತಾನಕ್ಕೆ ಸೋಲು: ಕ್ರಿಕೆಟ್ ಅಖಾಡದಲ್ಲಿ ಅಬ್ಬರಿಸಿದ ಯುವರಾಜ್ & ರಾಯುಡು!

ಭಾರತ ಕ್ರಿಕೆಟ್ ಲೋಕಕ್ಕೆ ಈ ದಿನ ಮರೆಯಲಾಗದ ಸಮಯ ಎನ್ನಬಹುದು. ಯಾಕಂದ್ರೆ ಮತ್ತೆ ಪಾಕಿಸ್ತಾನ ತಂಡವನ್ನ ಭಾರತ ಹೀನಾಯವಾಗಿ ಸೋಲಿಸಿ ಚಾಂಪಿಯನ್ ಆಗಿದೆ. ಅದು ಕ್ರಿಕೆಟ್ ಅಖಾಡದಲ್ಲಿ ಭಾರತದ ಬಲವನ್ನ ಮತ್ತೊಮ್ಮೆ ಇಡೀ ಜಗತ್ತಿಗೆ ತೋರಿಸುತ್ತಿದೆ. ಅರೆರೆ ಈಗ ಯಾಕೆ ಪಾಕಿಸ್ತಾನದ ವಿರುದ್ಧ ಮ್ಯಾಚ್ ನಡೆಯಿತು ಅಂದ್ರಾ? ಭಾರತ ಹೇಗೆ ಮತ್ತೊಮ್ಮೆ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದೆ? ಅನ್ನೋ ಪ್ರಶ್ನೆ ಕಾಡ್ತಾ ಇದ್ರೆ ಭಾರತದ ಗೆಲುವಿನ ಕುರಿತಾಗಿ ತಿಳಿಯಲು ಮುಂದೆ ಓದಿ.

ಬರ್ಮಿಂಗ್‌ಹ್ಯಾಮ್‌ ನಗರದಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024ರ ಫೈನಲ್ ಮ್ಯಾಚ್‌ನಲ್ಲಿ ಭಾರತ ತಂಡಕ್ಕೆ ಅತ್ಯದ್ಭುತ ಗೆಲುವು ಸಿಕ್ಕಿದೆ. ಭಾರತದ ಶತ್ರು ದೇಶವಾದ ಪಾಕಿಸ್ತಾನ ತಂಡದ ವಿರುದ್ಧ ಭಾರತದ ಹಳೇ ಹುಲಿಗಳು, ಅಂದ್ರೆ ಯುವರಾಜ್ ಸಿಂಗ್, ಅಂಬಾಟಿ ರಾಯುಡು, ಇರ್ಫಾನ್ ಪಠಾಣ್, ಯೂಸಫ್ ಪಠಾಣ್, ಸುರೇಶ್ ರೈನಾ ಸೇರಿದಂತೆ ಹಲವಾರು ಅದ್ಭುತ ಆಟಗಾರರು ಸೇರಿ ಪಾಕಿಸ್ತಾನ ತಂಡಕ್ಕೆ ಮಣ್ಣು ಮುಕ್ಕಿಸಿದ್ದಾರೆ. ಹಾಗಾದ್ರೆ ಈ ಮ್ಯಾಚ್ ಗೆಲ್ಲಲು ಕಾರಣ ಆಗಿದ್ದು ಯಾರು? ಅಂಬಾಟಿ ರಾಯುಡು & ಯೂಸಫ್ ಪಠಾಣ್ ಸಹಾಯ ಈ ಭರ್ಜರಿ ಗೆಲುವಿನಲ್ಲಿ ಎಂತಹ ಪಾತ್ರ ಬೀರಿತ್ತು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

India Become The World Champion In Cricket After Winning Against The Pakistan

ಟಾಸ್ ಸೋತು ಹೋಗಿದ್ದ ಭಾರತ!

ಭಾರತ ಚಾಂಪಿಯನ್ಸ್ ಫೈನಲ್ ಪಂದ್ಯದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ್ದರು. ಯಾಕಂದ್ರೆ ಟಾಸ್ ಗೆದ್ದ ಪಾಕಿಸ್ತಾನ ಚಾಂಪಿಯನ್ಸ್ ಮೊದಲು ಬ್ಯಾಟಿಂಗ್ ತೆಗೆದುಕೊಂಡಿತ್ತು. ಹಾಗೇ ಅತ್ಯುತ್ತಮ ರನ್ ಗಳಿಸಿ ಭಾರತದ ವಿರುದ್ಧ ಗೆಲ್ಲಲು ಪಾಕಿಸ್ತಾನ ತಂಡದ ಮಾಜಿ ಆಟಗಾರರು ಸ್ಕೆಚ್ ಹಾಕಿದ್ದರು. ಆದರೆ ಭಾರತ ತಂಡದ ಅತ್ಯುತ್ತಮ ಬೌಲಿಂಗ್ ದಾಳಿಗೆ ನಲುಗಿ ಹೋದ ಪಾಕಿಸ್ತಾನ ಚಾಂಪಿಯನ್ಸ್ ತಂಡದ ಆಟಗಾರರು, ಕೇವಲ 156 ರನ್ ಗಳಿಸಿದರು. ಇನ್ನೂ ಈ ಗುರಿ ಬೆನ್ನುಹತ್ತಿದ್ದ ಭಾರತ ತಂಡ ಗೆದ್ದಿದ್ದು ಯಾರ ಸಹಾಯದಿಂದ ಗೊತ್ತಾ? ಬನ್ನಿ ತಿಳಿಯೋಣ.

ರಾಯುಡು ಭರ್ಜರಿ ಬ್ಯಾಟಿಂಗ್!

ಭಾರತ ತಂಡ ಪಾಕಿಸ್ತಾನ ವಿರುದ್ಧ ಗೆದ್ದು ಬೀಗಲು ಕಾರಣ ಆಗಿದ್ದೇ ಅಂಬಾಟಿ ರಾಯುಡು ಅವರ ಅದ್ಭುತ ಅರ್ಧ ಶತಕ ಅಂದ್ರೆ 50 ರನ್‌ಗಳ ಸಹಾಯದಿಂದ ಎನ್ನಬಹುದು. ಯಾಕಂದ್ರೆ ಭಾರತ ತಂಡಕ್ಕೆ ಅಗತ್ಯ ಇದ್ದ ಸಮಯದಲ್ಲಿ ಅಂಬಾಟಿ ರಾಯುಡು ಕೇವಲ 30 ಬಾಲ್ ಆಡಿ 5 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 50 ರನ್ ಗಳಿಸಿದರು. ರಾಯುಡು ಹೊರತುಪಡಿಸಿ ಗುರ್ಕೀರತ್ ಸಿಂಗ್ ಮನ್ 33 ಎಸೆತಗಳಲ್ಲಿ 34 ರನ್ ಕೊಡುಗೆ ನೀಡಿದರು. ಇನ್ನು 16 ಎಸೆತಗಳಲ್ಲಿ 30 ರನ್ ಸಿಡಿಸಿದ ಯೂಸುಫ್ ಪಠಾಣ್ ಭಾರತ ತಂಡ ಹೊಸ ಇತಿಹಾಸ ಬರೆಯಲು ಸಹಾಯ ಮಾಡಿದರು. ಹಾಗೇ ತಂಡದ ಕ್ಯಾಪ್ಟನ್ ಯುವರಾಜ್ ಸಿಂಗ್ ಕೂಡ ಭರ್ಜರಿ ಕೊಡುಗೆ ನೀಡಿದ್ದರು.

ಕ್ರಿಕೆಟ್ ಜಗತ್ತಿಗೆ ಭಾರತವೇ ಕಿಂಗ್!

ಒಟ್ನಲ್ಲಿ ಅದೆಷ್ಟೇ ಪ್ರಯತ್ನ ಮಾಡಿದರೂ ಭಾರತ ತಂಡವನ್ನು ಸೋಲಿಸುವುದು ಅಸಾಧ್ಯವಾದ ಸಂಗತಿ ಅನ್ನೋದು, ಇದೀಗ ಮತ್ತೊಮ್ಮೆ ಪಾಕಿಸ್ತಾನ ತಂಡದ ಆಟಗಾರರಿಗೆ ಮನವರಿಕೆ ಆಗಿದೆ. ಭಾರತದ ವಿರುದ್ಧ ಗೆಲ್ಲಲು ಎಷ್ಟೆಲ್ಲಾ ಪ್ರಯತ್ನ ಮಾಡಿದರು ಅದು ವರ್ಕೌಟ್ ಆಗದೆ ಈಗ ಪಾಕ್ ತಂಡವು ಮಂಡಿಯೂರಿದೆ. ಹಾಗೇ ಭಾರತ ತಂಡದ ಮಾಜಿ ಹುಲಿಗಳು ಇದೀಗ ಘರ್ಜಿಸಿದ್ದು, ಈ ಮೂಲಕ ಕ್ರಿಕೆಟ್ ಆಟದಲ್ಲಿ ಭಾರತವೇ ಸಾರ್ವಕಾಲಿಕ ದೊರೆ ಎಂಬುದನ್ನ ಮತ್ತೊಮ್ಮೆ ಜಗತ್ತಿಗೆ ತೋರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+