IND vs SL 2nd Test: ನಡಿಯೋ ಸಾಕು ಎಂದಿದ್ದಕ್ಕೆ ಶ್ರೀಲಂಕಾ ಬೌಲರ್‌ ಜೊತೆ ಜಗಳಕ್ಕಿಳಿದ ಯಶಸ್ವಿ ಜೈಸ್ವಾಲ್, ಭಾರಿ ವೈರಲ್

Yashasvi Jaiswal: ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದೇ ಮೈದಾನದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ಲಂಕಾದ ವೇಗಿ ಅಸಿತ ಫೆರ್ನಾಂಡೋ ನಡುವ ಜಗಳ ನಡೆದಿದ್ದು, ಪರಿಸ್ಥಿತಿ ಹೊಡೆದಾಡಿಕೊಳ್ಳುವ ಹಂತಕ್ಕೂ ತಲುಪಿತು. ಹಾಗಾದ್ರೆ ಮುಂದಾಗಿದ್ದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದ್ದರು. 53 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 45 ರನ್ ಗಳಿಸಿದ ಜೈಸ್ವಾಲ್, ಅಸಿತ ಫೆರ್ನಾಂಡೋ ಅವರ 17ನೇ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.

IND vs SL 2nd Test Yashasvi Jaiswal- Asitha Fernando Clash on Field Video Viral on Social media

ಮೈದಾನದಲ್ಲೇ ವಾಗ್ವಾದಕ್ಕಿಳಿದ ಆಟಗಾರರು

ಜೈಸ್ವಾಲ್ ವಿಕೆಟ್ ಪಡೆದ ತಕ್ಷಣವೇ ಅಸಿತ ಫೆರ್ನಾಂಡೋ ವಿಚಿತ್ರ ರೀತಿಯಲ್ಲಿ ಸಂಭ್ರಮಿಸಿದ್ದಲ್ಲದೆ, ಪೆವಿಲಿಯನ್‌ಗೆ ತೆರಳುವಂತೆ ಜೈಸ್ವಾಲ್‌ಗೆ ಹೇಳಿದರು. ಈ ವೇಳೆ ಕೋಪಗೊಂಡ ಯಶಸ್ವಿ ಜೈಸ್ವಾಲ್ ಅವರು ಫೆರ್ನಾಂಡೋ ವಿರುದ್ಧ ಮೈದಾನದಲ್ಲೇ ಜಗಳಕ್ಕಿಳಿದ ಘಟನೆ ನಡೆಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇಬ್ಬರೂ ಆಟಗಾರರು ಅತ್ಯಂತ ಹತ್ತಿರ ಬಂದು ಪರಸ್ಪರ ತಲೆ ಮುಟ್ಟಿಸಿಕೊಂಡಿದ್ದು ದೃಶ್ಯಗಳಲ್ಲಿ ಕಂಡುಬಂದಿತು. ಪರಿಸ್ಥಿತಿ ಕೈಮೀರಿ ಹೋಗುವುದನ್ನು ಗಮನಿಸಿದ ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಹಾಗೂ ಮೈದಾನದಲ್ಲಿದ್ದ ಇತರ ಆಟಗಾರರು ತಕ್ಷಣವೇ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿ ದೂರ ಕರೆದೊಯ್ದು ಶಾಂತಗೊಳಿಸಿದರು.

ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ

ಇದಕ್ಕೂ ಮೊದಲು ಮತ್ತೊಬ್ಬ ಆರಂಭಿಕ ಬ್ಯಾಟರ್ ಕನ್ನಡಿಗ ಕೆ.ಎಲ್.ರಾಹುಲ್ ಅವರು 18 ರನ್‌ಗಳಿಗೆ ಲಹಿರು ಕುಮಾರ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. 66 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ ಮತ್ತು ಶುಭ್‍ಮನ್ ಗಿಲ್ ಆಸರೆಯಾದರು. ಪ್ರಥಮ ಟೆಸ್ಟ್ ಪಂದ್ಯವನ್ನು 165 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ, ಈ ಪಂದ್ಯದಲ್ಲೂ ಉತ್ತಮ ಸ್ಥಿತಿಯಲ್ಲಿದೆ. ಇನ್ನು ಪಂದ್ಯದ ವೇಳೆ ನಡೆದ ಕ್ರೀಡಾ ಸ್ಫೂರ್ತಿಗೆ ಭಂಗ ತರುವಂತಹ ಘಟನೆಯ ಕುರಿತು ರೆಫರಿ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+