Ind vs Aus: ಆಸ್ಟ್ರೇಲಿಯಾಗೆ ಎಚ್ಚರಿಕೆ ನೀಡಿದ ಕನ್ನಡಿಗ!
ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯ ರೋಚಕ ಘಟ್ಟ ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 185 ರನ್‌ಗಳಿಗೆ ಆಲೌಟ್ ಆಗಿದ್ದ ಭಾರತ ಬಳಿಕ ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 181 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 4 ರನ್‌ಗಳ ಮುನ್ನಡೆ ಪಡೆದುಕೊಂಡಿತು. ಬಳಿಕ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿದೆ.
ಭಾರತ ಈಗ 145 ರನ್ ಮುನ್ನಡೆ ಪಡೆದುಕೊಂಡಿದ್ದು 200 ಕ್ಕಿಂತ ಹೆಚ್ಚು ರನ್‌ಗಳ ಮುನ್ನಡೆ ಪಡೆಯುವ ನಿರೀಕ್ಷೆಯಲ್ಲಿದೆ. ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದು ಭಾರತದ ಚಿಂತೆಯನ್ನು ಹೆಚ್ಚಿಸಿದೆ. ಆದರೆ 200 ಕ್ಕಿಂತ ಹೆಚ್ಚಿನ ರನ್ ಮುನ್ನಡೆ ಪಡೆದುಕೊಂಡರೆ ಆಸ್ಟ್ರೇಲಿಯಾವನ್ನು ಆಲೌಟ್ ಮಾಡಿ ಗೆಲುವ ಸಾಧಿಸುವ ವಿಶ್ವಾಸದಲ್ಲಿದೆ ಭಾರತ.

ಎಚ್ಚರಿಕೆ ಕೊಟ್ಟ ಪ್ರಸಿದ್ಧ್ ಕೃಷ್ಣ
ಎರಡನೇ ದಿನದಾಟ ಮುಗಿದ ಬಳಿಕ ಮಾತನಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆಸ್ಟ್ರೇಲಿಯಾ ತಂಡಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. "ಸಿಡ್ನಿ ಪಿಚ್‌ನಲ್ಲಿ ಆಡುವುದು ಸುಲಭವಲ್ಲ, ಚೆಂಡು ಕೆಲವೊಮ್ಮೆ ಬೌನ್ಸ್ ಆಗುತ್ತಿದೆ, ಕೆಲವೊಮ್ಮೆ ಕೆಳಗಡೆಯೇ ಹೋಗುತ್ತದೆ." ಎಂದು ಹೇಳಿದರು.
ಆಸ್ಟ್ರೇಲಿಯಾಗೆ ಎಷ್ಟು ಟಾರ್ಗೆಟ್ ನೀಡಿದರೆ ಡಿಫೆಂಡ್ ಮಾಡಿಕೊಳ್ಳಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಆ ರೀತಿ ಯಾವುದೇ ನಿರ್ದಿಷ್ಟ ಗುರಿ ಇಟ್ಟುಕೊಂಡಿಲ್ಲ. ಆದರೆ ನಾವು ಎಷ್ಟು ರನ್ ಗಳಿಸಿದರೂ ಅದು ಉತ್ತಮವಾಗಿರುತ್ತದೆ. ಯಾವುದೇ ಮೊತ್ತ ಡಿಫೆಂಡ್ ಮಾಡಲು ನಾವು ಬೌಲ್ ಮಾಡಲು ಸಿದ್ಧರಿದ್ದೇವೆ" ಎಂದು ಹೇಳಿದರು.
ತಮ್ಮ ಹೇಳಿಕೆಯ ಮೂಲಕ ಆಸ್ಟ್ರೇಲಿಯಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಎರಡನೇ ದಿನ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ನಡುವೆಯೂ ಭಾರತದ ವೇಗಿಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. 2 ವಿಕೆಟ್ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಬೆನ್ನಿನ ಸೆಳೆತದಿಂದ ಮೈದಾನದಿಂದ ಹೊರನಡೆದರು. ಬಳಿಕ ಪ್ರಸಿದ್ಧ್ ಕೃಷ್ಣ, ನಿತೀಶ್ ರೆಡ್ಡಿ ಮತ್ತು ಸಿರಾಜ್ ಉತ್ತಮ ಬೌಲಿಂಗ್ ಮೂಲಕ ಆಸ್ಟ್ರೇಲಿಯಾವನ್ನು ಬೇಗನೆ ಆಲೌಟ್ ಮಾಡಿದರು.
ಪ್ರಸಿದ್ಧ್ ಕೃಷ್ಣ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಕೂಡ 3 ವಿಕೆಟ್ ಪಡೆದರು. ನಿತೀಶ್ ಕುಮಾರ್ ರೆಡ್ಡಿ 2 ವಿಕೆಟ್ ಪಡೆದುಕೊಂಡರು. ಸದ್ಯ ಭಾರತ 145 ರನ್ ಮುನ್ನಡೆ ಪಡೆದುಕೊಂಡಿದ್ದು 250 ಕ್ಕಿಂತ ಹೆಚ್ಚಿನ ರನ್ ಗಳಿಸಿದರೆ ಆಸ್ಟ್ರೇಲಿಯಾವನ್ನು ಬೇಗನೆ ಆಲೌಟ್ ಮಾಡಲು ಯೋಜಿಸಬಹುದು.
ಜಸ್ಪ್ರೀತ್ ಬುಮ್ರಾ ಸ್ಕ್ಯಾನಿಂಗ್‌ಗೆ ಒಳಗಾಗಿದ್ದು ಅವರು ಬೌಲಿಂಗ್ ಮಾಡುತ್ತಾರಾ ಇಲ್ಲವಾ ಎನ್ನುವುದು ಭಾನುವಾರ ಬೆಳಗ್ಗೆ ಆಟ ಆರಂಭವಾಗುವ ಮುನ್ನ ತಿಳಿಯಲಿದೆ. ಬುಮ್ರಾ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ನಿಭಾಯಿಸಿದ್ದಾರೆ.
ಮೂರನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದ್ದು ಭಾರತದ ಬ್ಯಾಟರ್ ಗಳು ಇನ್ನೆಷ್ಟು ರನ್ ಕಲೆ ಹಾಕುತ್ತಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ಬೌಲಿಂಗ್ ಮಾಡದೇ ಇದ್ದರೆ ಭಾರತದ ರಣತಂತ್ರ ಏನಿರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.












Click it and Unblock the Notifications