Ind vs Aus: ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ: ರೋಹಿತ್ ಶರ್ಮಾ ಹೇಳಿದ್ದೇನು?
ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಮೆಗಾ ಫೈನಲ್ ಪಂದ್ಯ ನಡೆಯುತ್ತಿದ್ದು, 20 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ.
ಈ ಬಾರಿ ವಿಶ್ವಕಪ್‌ನಲ್ಲಿ ಭಾರತ ಅಜೇಯವಾಗಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಆಡಿರುವ 10 ಪಂದ್ಯಗಳನ್ನು ಗೆದ್ದಿರುವ ಭಾರತಕ್ಕೆ ವಿಶ್ವ ಚಾಂಪಿಯನ್ ಆಗಲು ಇನ್ನೊಂದು ಗೆಲುವು ಬೇಕಾಗಿದೆ. ರೋಹಿತ್ ಶರ್ಮಾ ಪಡೆಗೆ ತವರಿನಲ್ಲಿ ಭಾರಿ ಬೆಂಬಲ ಸಿಕ್ಕಿದ್ದು, ಮೂರನೇ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ಪಿಚ್ ವರದಿ ಏನು?
ಐದನೇ ಪಿಚ್ ಸಂಖ್ಯೆಯಲ್ಲಿ ಈ ಪಂದ್ಯ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಇದೇ ಪಿಚ್‌ನಲ್ಲಿ ನಡೆದಿತ್ತು. ಆದರೆ ಇಂದಿನ ಪಂದ್ಯ ಅದಕ್ಕಿಂತ ಭಿನ್ನವಾಗಿದೆ. ಪಿಚ್ ತುಂಬಾ ಒಣಗಿದ್ದು ಚೆಂಡು ಸ್ವಲ್ಪ ತಿರುಗುವ ನಿರೀಕ್ಷೆ ಇದ್ದು, ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಸಹಾಯ ಸಿಗುವ ಸಾಧ್ಯತೆ ಇದೆ.
ಸಂಜೆಯ ನಂತರ ಇಬ್ಬನಿ ಬೀಳುವ ಸಾಧ್ಯತೆ ಇದೆ, ಇಬ್ಬನಿ ಬೀಳದಿದ್ದರೆ ಚೇಸಿಂಗ್ ಕಷ್ಟವಾಗಲಿದೆ. ಮೊಲದು ಬ್ಯಾಟ್ ಮಾಡಿ ಉತ್ತಮ ರನ್ ಕಲೆಹಾಕಿದರೆ ಎದುರಾಳಿಗಳ ಮೇಲೆ ಒತ್ತಡ ಹಾಕಬಹುದು ಎಂದು ರವಿಶಾಸ್ತ್ರಿ ಪಿಚ್ ವರದಿಯಲ್ಲಿ ಹೇಳಿದ್ದಾರೆ.
ರೋಹಿತ್ ಶರ್ಮಾ ಹೇಳಿದ್ದೇನು?
ಟಾಸ್ ಬಳಿಕ ಮಾತನಾಡಿದ ಅವರು, "ಟಾಸ್ ಗೆದ್ದಿದ್ದರೆ ನಾವು ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆವು, ಉತ್ತಮ ಪಿಚ್, ದೊಡ್ಡ ಆಟ, ಬೋರ್ಡ್ ಮೇಲೆ ದೊಡ್ಡ ಮೊತ್ತ ಹಾಕಬೇಕು, ಇದು ಅದ್ಭುತವಾಗಿರುತ್ತದೆ, ಪ್ರತಿ ಬಾರಿ ನಾವು ಇಲ್ಲಿ ಆಡುವಾಗ, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದು ಕ್ರಿಕೆಟ್ ಈವೆಂಟ್‌ನಲ್ಲಿ ದೊಡ್ಡ ಸಂದರ್ಭ. ನಾವು ಶಾಂತವಾಗಿ ಮತ್ತು ಸಂತೋಷದಿಂದ ಇರಬೇಕು. ಫೈನಲ್‌ನಲ್ಲಿ ತಂಡದ ನಾಯಕನಾಗುವ ಕನಸು ನನಸಾಗಿದೆ. ನಾವು ಚೆನ್ನಾಗಿ ಆಡಬೇಕು ಮತ್ತು ಫಲಿತಾಂಶವನ್ನು ಪಡೆಯಬೇಕು. ನೀವು ಮೈದಾನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕಳೆದ 10 ಪಂದ್ಯಗಳಲ್ಲಿ ನಾವು ಸತತವಾಗಿ ಮಾಡಿದ್ದೇವೆ. ನಾವು ಒಂದು ತಂಡವಾಗಿ ಆಡುತ್ತಿದ್ದೇವೆ" ಎಂದು ಹೇಳಿದರು.
ಉಭಯ ತಂಡಗಳ ಆಡುವ ಬಳಗ
ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ : ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.












Click it and Unblock the Notifications