ಆರ್‌ಸಿಬಿ ತಂಡಕ್ಕೆ ಆಘಾತ, ಯುದ್ಧದ ಕಾರಣಕ್ಕೆ 2025 ಐಪಿಎಲ್ ಟೂರ್ನಿ ಅರ್ಧಕ್ಕೆ... Virat Kohli
18 ವರ್ಷಗಳ ವನವಾಸ ಮುಕ್ತಾಯ ಆಗಲಿದೆ, ವಿರಾಟ್ ಕೊಹ್ಲಿ ಹುಡುಗರು ಈ ಸಲ ಕಪ್ ಎತ್ತಲಿದ್ದಾರೆ... ಅಂತೂ ಆರ್‌ಸಿಬಿ ತಂಡ 2025ರ ಐಪಿಎಲ್ ಟೂರ್ನಿ ಗೆದ್ದು ಬೀಗಲಿದೆ... ಹೀಗೆ ಕೋಟಿ ಕೋಟಿ ಅಭಿಮಾನಿಗಳು ಕೋಟ್ಯಂತರ ಕನಸು ಕಂಡಿದ್ದರು. ಅದರಲ್ಲೂ ಈ ಸಲ ಕಪ್ ನಮ್ದೆ ಅಂತಾ ಮತ್ತೊಮ್ಮೆ ಎದುರಾಳಿಗಳಿಗೆ ಬೆಂಗಳೂರು ತಂಡದ ಅಭಿಮಾನಿಗಳು ತೊಡೆ ತಟ್ಟಿ ನಿಂತಿದ್ದರು. ಹೀಗಿದ್ದಾಗಲೇ, ಆರ್‌ಸಿಬಿ ತಂಡಕ್ಕೆ ಆಘಾತ, ಯುದ್ಧದ ಕಾರಣಕ್ಕೆ 2025 ಐಪಿಎಲ್ ಟೂರ್ನಿ ಅರ್ಧಕ್ಕೆ...
11 ಮ್ಯಾಚ್ ಆಡಿರುವ ಬೆಂಗಳೂರು ತಂಡ ಆರ್‌ಸಿಬಿ 2025ರ ಐಪಿಎಲ್ ಟೂರ್ನಿ ಫೈನಲ್‌ಗೆ ಎಂಟ್ರಿ ಕೊಡಲು ಕಾಯುತ್ತಿದೆ. 2025ರ ಐಪಿಎಲ್ ಟೂರ್ನಿಯಲ್ಲಿ 11 ಮ್ಯಾಚ್ ಆಡಿ ಭರ್ಜರಿ 8 ಮ್ಯಾಚ್ ಗೆದ್ದಿರುವ ನಮ್ಮ ಬೆಂಗಳೂರು ಹುಡುಗರು, ಇನ್ನೇನು ಪ್ಲೇಆಫ್ ಕೂಡ ಕನ್ಫರ್ಮ್ ಮಾಡಿಕೊಳ್ಳಲು ಕಾಯುತ್ತಿದ್ದರು. ಆರ್‌ಸಿಬಿ ತಂಡ ಈ ಬಾರಿ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಲಿದೆ ಅಂತಾನೇ ಇಡೀ ಕ್ರಿಕೆಟ್ ಪ್ರಪಂಚ ಕಾಯುತ್ತಿದೆ. ಹೀಗಿದ್ದಾಗಲೇ ಭಾರಿ ದೊಡ್ಡ ಆಘಾತ ಎದುರಾಗಿದೆ...

ಆರ್‌ಸಿಬಿ ತಂಡಕ್ಕೆ ಆಘಾತ, ಯುದ್ಧದ ಕಾರಣಕ್ಕೆ...
ಹೌದು, 18 ವರ್ಷಗಳಿಂದ ಎಲ್ಲಾ ನೋವು ಸಹಿಸಿಕೊಂಡು ಕಾಯುತ್ತಿರುವ ನಮ್ಮ ಆರ್‌ಸಿಬಿ ಅಭಿಮಾನಿಗಳಿಗೆ ಇನ್ನೇನು 2025 ಐಪಿಎಲ್ ಟೂರ್ನಿಯಲ್ಲಿ ಕಪ್ ಸಿಗುವುದು ಗ್ಯಾರಂಟಿ ಅಂತ ಎಲ್ಲರೂ ಸಂಭ್ರಮದಿಂದ ಕಾಯುತ್ತಿದ್ದರು. ಅಲ್ಲದೆ ಸೆಲೆಬ್ರೇಷನ್ ಮಾಡೋದಕ್ಕೆ ಅಂತಾನೇ ಪಟಾಕಿ & ಸ್ವೀಟ್‌ಗೆ ಆರ್ಡರ್ ಮಾಡಿ ಕಾಯುತ್ತಿದ್ದಾರೆ ನಮ್ಮ ಬೆಂಗಳೂರು ತಂಡದ ಫ್ಯಾನ್ಸ್. ಹೀಗಿದ್ದಾಗಲೇ, ಆರ್‌ಸಿಬಿ ತಂಡಕ್ಕೆ ಆಘಾತ, ಯುದ್ಧದ ಕಾರಣಕ್ಕೆ 2025 ಐಪಿಎಲ್ ಟೂರ್ನಿ ಅರ್ಧಕ್ಕೆ...
3ನೇ ಮಹಾಯುದ್ಧಕ್ಕೆ ರಣಕಹಳೆ ಮೊಳಗಿದಂತೆ ಕಾಣುತ್ತಿದ್ದು, ಇದೇ ಸಮಯದಲ್ಲಿ ಭಾರತ & ಪಾಕಿಸ್ತಾನ ಸೇನೆಗಳ ನಡುವೆ ಘೋರ ಯುದ್ಧ ಆರಂಭವಾಗಿದೆ. ಭಾರತೀಯ ಸೇನೆಯಿಂದ ಪಾಪಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಕಾರಣಕ್ಕೆ ಪಾಪಿ ಪಾಕಿಸ್ತಾನ ಇದೀಗ ಭಾರಿ ರೊಚ್ಚಿಗೆದ್ದು ಭಾರತದ ವಿರುದ್ಧ ದಾಳಿ ಮಾಡುತ್ತಿದೆ. ಇದೇ ಕಾರಣಕ್ಕೆ ನಿನ್ನೆ ನಡೆಯುತ್ತಿದ್ದ ಐಪಿಎಲ್ ಪಂದ್ಯವನ್ನೂ ಅರ್ಧಕ್ಕೆ ನಿಲ್ಲಿಸಲಾಗಿದೆ. ಇಂತಹ ಸಮಯದಲ್ಲೇ, 2025 ಐಪಿಎಲ್ ಟೂರ್ನಿ ಅರ್ಧಕ್ಕೆ ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗ ಆರ್‌ಸಿಬಿ ತಂಡಕ್ಕೂ ಈಗ ಆಘಾತ ಎದುರಾಗಿದೆ! ಹೇಗೆ ಗೊತ್ತಾ? ಮುಂದೆ ಓದಿ.
ಬೆಂಗಳೂರು ತಂಡ ಆರ್‌ಸಿಬಿ ಮ್ಯಾಚ್ ರದ್ದು!
ಆರ್‌ಸಿಬಿ ತಂಡ 11 ಮ್ಯಾಚ್ ಆಡಿ 8 ಪಂದ್ಯ ಗೆದ್ದಿದ್ದು 3 ಮ್ಯಾಚ್ ಸೋತಿದೆ. ಹೀಗಿದ್ದಾಗ 2025 ಐಪಿಎಲ್ ಟೂರ್ನಿ ಪಾಯಿಂಟ್ಸ್ ಟೇಬಲ್‌ನಲ್ಲಿ ಬೆಂಗಳೂರು ಆರ್‌ಸಿಬಿ ತಂಡ ಇದೀಗ 2ನೇ ಸ್ಥಾನದಲ್ಲಿದೆ. ಆದರೆ ಈಗ ದಿಢೀರ್ ಭಾರತ & ಪಾಕಿಸ್ತಾನ ಸೇನೆಗಳ ಯುದ್ಧ ಜೋರಾಗಿದ್ದು, ಭಯದ ವಾತಾವರಣ ನಿರ್ಮಾಣ ಆಗಿದೆ. ಎಲ್ಲವನ್ನೂ ಲೆಕ್ಕಾಚಾರ ಹಾಕಿ ನಿನ್ನೆ ಐಪಿಎಲ್ ಪಂದ್ಯ ಅರ್ಧಕ್ಕೆ ನಿಂತಿದ್ದು, ಇಂದು ನಡೆಯಬೇಕಿದ್ದ ಬೆಂಗಳೂರು ಆರ್‌ಸಿಬಿ ತಂಡದ ಮ್ಯಾಚ್ ಕೂಡ ನಿಂತು ಹೋಗಿದೆ.
ಆದರೆ ಹೀಗೆ ಮ್ಯಾಚ್ ನಿಂತಿರುವ ಕಾರಣಕ್ಕೆ ಆರ್‌ಸಿಬಿ ತಂಡವು ಮುಂದಿನ ಹಂತಕ್ಕೆ ಹೋಗಲು ಕಷ್ಟವಾಗುತ್ತಾ? ಎಂಬ ಟೆನ್ಷನ್ ಅಭಿಮಾನಿಗಳಲ್ಲಿ ಶುರುವಾಗಿದೆ ಮತ್ತು ಚರ್ಚೆ ನಡೆಯುತ್ತಿದೆ. ಆದ್ರೆ ಇಂದು ಒಂದು ಮ್ಯಾಚ್ ನಿಂತಿದ್ದರಿಂದ ಆರ್‌ಸಿಬಿಗೆ ಯಾವುದೇ ಸಮಸ್ಯೆ ಇಲ್ಲ. ಅಕಸ್ಮಾತ್ ಮುಂದೆ ನಡೆಯಬೇಕಿರುವ ಪಂದ್ಯಗಳು ಕೂಡ ಇದೇ ರೀತಿಯಾಗಿ ನಿಂತರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಭಯ ಕಾಡುತ್ತಿದೆ. ಅಲ್ಲದೆ ಯುದ್ಧಕ್ಕಿಂತ ಮ್ಯಾಚ್ ಮುಖ್ಯವಲ್ಲ, ಐಪಿಎಲ್ ಟೂರ್ನಿಯನ್ನೇ ನಿಲ್ಲಿಸಿ ಅಂತಾ ಅಭಿಮಾನಿಗಳು ಇದೀಗ ಒತ್ತಾಯ ಮಾಡುತ್ತಿದ್ದಾರೆ! ಬಿಸಿಸಿಐ ಕೂಡ ಈ ಬಗ್ಗೆ ಚಿಂತಿಸುತ್ತಿದ್ದು, 2025 ಐಪಿಎಲ್ ಟೂರ್ನಿ ಅರ್ಧಕ್ಕೆ ನಿಲ್ಲಿಸುವ ಸಾಧ್ಯತೆಯೂ ದಟ್ಟವಾಗಿದೆ.
ಗಡಿಯಲ್ಲಿ ಕ್ರಿಕೆಟ್ ಆಟಗಾರರ ಯುದ್ಧ?
ಧೋನಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಅವ್ರು ಭಾರತೀಯ ಸೇನೆಯಲ್ಲಿ ಇರುವುದರಿಂದ ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ಬರುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಕೂಡ ಜೋರಾಗಿದೆ. ಆದರೆ, ಇದಕ್ಕೆ ಉತ್ತರ ಏನಂದ್ರೆ ಧೋನಿ, ಸಚಿನ್ ತೆಂಡೂಲ್ಕರ್ & ಕಪಿಲ್ ದೇವ್ ಅವರು ಭಾರತೀಯ ಸೇನೆ ಸೇವೆಯಲ್ಲಿ ಇದ್ದಾರೆ ನಿಜ, ಆದ್ರೆ ಭಾರತೀಯ ಕ್ರಿಕೆಟಿಗರು ಪ್ರಾದೇಶಿಕ ಸೇನೆ ಭಾಗವಾಗಿದ್ದಾರೆ ಎನ್ನಬಹುದು.
ಇದರ ಅರ್ಥ ಧೋನಿ, ಸಚಿನ್ ತೆಂಡೂಲ್ಕರ್ & ಕಪಿಲ್ ದೇವ್ ಅವರು ಭಾರತೀಯ ಸೇನೆಯಲ್ಲಿ ಇರುವುದು ಸ್ವಯಂ ಸೇವಕ ನಾಗರಿಕರಿಗೆ ತರಬೇತಿ ನೀಡಲು ಮತ್ತು ತುರ್ತು ಪರಿಸ್ಥಿತಿಗೆ ಅವರನ್ನ ಸಿದ್ಧರಾಗುವಂತೆ ಮಾಡಲು. ಹೀಗಾಗಿ ಕ್ರಿಕೆಟ್ ಆಟಗಾರರು ಸೇನೆಯಲ್ಲಿ ಇದ್ದರೂ ಗಡಿಗೆ ಬಂದು ಯುದ್ಧ ಮಾಡುವ ಅನಿವಾರ್ಯತೆ ಇರುವುದಿಲ್ಲ ಎನ್ನಲಾಗಿದೆ. ಧೋನಿ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೇ ಭಾರತೀಯ ಕ್ರಿಕೆಟ್ ತಂಡದ ಹಲವು ಆಟಗಾರರು ಭಾರತೀಯ ಸೇನೆಯಲ್ಲಿ ಸ್ಥಾನ ಪಡೆದಿದ್ದರು.












Click it and Unblock the Notifications