ICC World Cup 2023: ವಿರಾಟ್ ಕೊಹ್ಲಿ ವಿಶ್ವಕಪ್ ಚರಿತ್ರೆಯಲ್ಲಿ ನಿರ್ಮಿಸಿರುವ ಈ ದಾಖಲೆ ಮುರಿಯಲು ಇನ್ನೂ 40 ವರ್ಷ ಬೇಕು!
ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಟಿಕ್.. ಟಿಕ್.. ಟಿಕ್.. ಅಂತಾ ಗಡಿಯಾರ ಮುಳ್ಳಿನ ರೀತಿಯೇ ಕೌಂಟ್‌ಡೌನ್ ಕೂಡ ಶುರುವಾಗಿದೆ. ಆದ್ರೆ ಇಲ್ಲೊಂದು ವಿಚಾರ ನಾವು ಹೇಳಬೇಕಿದೆ. ಯಾಕಂದ್ರೆ ಇವರೊಬ್ಬರು ಇಲ್ಲ ಅಂದ್ರೆ ಭಾರತ ತಂಡಕ್ಕೆ ಇಂದಿನ ವಿಶ್ವಕಪ್ ಫೈನಲ್ ಮ್ಯಾಚ್ ಕನಸಾಗಿಯೇ ಉಳಿದು ಬಿಡುತ್ತಿತ್ತು. ಹಾಗಾದರೆ ಯಾರದು ಹೀರೋ?
ಯೆಸ್.. ಅವರೇ ನಮ್ಮ ವಿರಾಟ್ ಕೊಹ್ಲಿ. ಶತಕಗಳ ಅರ್ಧ ಶತಕ ಬಾರಿಸಿ ಕ್ರಿಕೆಟ್ ಜಗತ್ತು ತನ್ನತ್ತ ತಿರುಗಿ, ತಿರುಗಿ ನೋಡುವಂತೆ ಮಾಡಿದ್ದ ಕೊಹ್ಲಿ, ಇಂದು ಮತ್ತೊಂದು ಮಹತ್ವದ ಸಾಧನೆಗಾಗಿ ಸಿದ್ಧವಾಗಿದ್ದಾರೆ. ಅಕಸ್ಮಾತ್ ವಿರಾಟ್ ಕೊಹ್ಲಿ ಅವ್ರು ಇಂದು ಸೆಂಚ್ಯುರಿಯನ್ನು ಬಾರಿಸಿದ್ರೆ ಅವರು ಒಂದು ಮಹತ್ವದ ಮೈಲಿಗಲ್ಲು ತಲುಪಲಿದ್ದಾರೆ. ಎಲ್ಲ ಅಂದುಕೊಂಡ ರೀತಿ ನಡೆದು ವಿರಾಟ್ ಕೊಹ್ಲಿ ಆ ಮೈಲಿಗಲ್ಲು ತಲುಪಿದರೆ, ಕೊಹ್ಲಿ ನಿರ್ಮಿಸುವ ದಾಖಲೆ ಮುರಿಯಲು ಮಿನಿಮಮ್ 40 ವರ್ಷ ಬೇಕು ಕಣ್ರೀ! ಅರೆರೆ ಯಾವುದು ಆ ದಾಖಲೆ? ಬನ್ನಿ ಮತ್ತೆ ತಿಳಿಯೋಣ.

ಸಚಿನ್ ದಾಖಲೆಗೆ ವಿರಾಟ್ ಸೆಡ್ಡು!
ಅಂದಹಾಗೆ ವಿರಾಟ್ ಕೊಹ್ಲಿ ಅವರು ಈಗಾಗಲೇ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿ ಇದ್ದ ಹಲವು ದಾಖಲೆ ಉಡೀಸ್ ಮಾಡಿದ್ದಾರೆ. ಆದರೆ ಕಳೆದ 20 ವರ್ಷದಿಂದ ಸಚಿನ್ ತೆಂಡೂಲ್ಕರ್ ಹೆಸರಲ್ಲಿ ಕ್ರಿಕೆಟ್ ಜಗತ್ತಲ್ಲಿ ದಾಖಲಾಗಿದ್ದ, ಈ ದಾಖಲೆ ಮಾತ್ರ ಯಾರಿಂದಲು ಮುಟ್ಟಲು ಕೂಡ ಆಗಿರಲಿಲ್ಲ. ಆದರೂ ಕೊಹ್ಲಿ ಮೊನ್ ಮೊನ್ನೆ ನ್ಯೂಜಿಲೆಂಡ್ ತಂಡದ ವಿರುದ್ಧ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಈ ದಾಖಲೆ ಮುರಿದರು.
ಸಚಿನ್ ಅವರ ಹೆಸರಲ್ಲಿ ಇದ್ದ 20 ವರ್ಷಗಳ ಹಳೆಯ ದಾಖಲೆ ಧೂಳ್ ಮಾಡಿದ್ದರು. ಆದರೆ ಈಗ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ಈ ದಾಖಲೆ ಮುರಿದು, ನಿರ್ಮಾಣ ಮಾಡಿರುವ ಹೊಸ ದಾಖಲೆ ಮುಟ್ಟಲು ಮಿನಿಮಮ್, ಮಿನಿಮಮ್ ಅಂದ್ರೂ 40 ವರ್ಷ ಬೇಕು! ಹೇಗಿದೆ ಗೊತ್ತಾ ಇದರ ಲೆಕ್ಕಾಚಾರ?

ಏನು ಗೊತ್ತಾ ಇದು ವಿಶ್ವ ದಾಖಲೆ?
ಹೌದು ಐಸಿಸಿ ಏಕದಿನ ವಿಶ್ವಕಪ್ ಒಂದು ರೀತಿ ಫೀಫಾ ಕಪ್ ಅಥವಾ ಫುಟ್‌ಬಾಲ್ ವರ್ಲ್ಡ್‌ಕಪ್ ರೇಂಜ್‌ಗೆ ಹವಾ ಇಟ್ಟಿದೆ. ಇದೇ ಕಾರಣಕ್ಕೆ ಐಸಿಸಿ ಏಕದಿನ ವಿಶ್ವಕಪ್ ಅಖಾಡದಲ್ಲಿ ಸಿಡಿಸುವ, ಒಂದೊಂದು ರನ್ ಕೂಡ ದಾಖಲೆ ಸೃಷ್ಟಿಸುತ್ತದೆ. ಆದರೆ, ಇಂತಹ ಮಹತ್ವದ ಟೂರ್ನಿಯಲ್ಲಿ ನಮ್ಮವರೇ ಆದ ಸಚಿನ್ ತೆಂಡೂಲ್ಕರ್ ಬಹುದೊಡ್ಡ ದಾಖಲೆ ನಿರ್ಮಿಸಿದ್ದರು. 2003 ರಲ್ಲಿ ಈ ರೀತಿ ಸಚಿನ್ ತೆಂಡೂಲ್ಕರ್ ಸಿಂಗಲ್ ವರ್ಲ್ಡ್ ಕಪ್ ಟೂರ್ನಿಯಲ್ಲಿ 673 ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದರು.
ಆದರೆ 2023ರ ವಿಶ್ವಕಪ್ ಅಖಾಡದಲ್ಲಿ ವಿರಾಟ್ ಕೊಹ್ಲಿ 711 ರನ್‌ಗಳ ಗಳಿಸುವ ಮೂಲಕ 20 ವರ್ಷದ ದಾಖಲೆ ಧೂಳ್ ಧೂಳ್ ಮಾಡಿದ್ದಾರೆ. ಹೀಗಿದ್ದಾಗಲೆ ಇಂದು ಒಂದೇ ಒಂದು ಸೆಂಚ್ಯುರಿ ಬಾರಿಸಿದರೆ ವಿರಾಟ್ ಕೊಹ್ಲಿ, ಅದನ್ನ ಬೇರೆಯವರು ಮುಟ್ಟಲು ಇಡೀ ಜಗತ್ತಿಗೆ 40 ವರ್ಷ ಬೇಕಿದೆ. ಯಾಕೆ ಈ ಲೆಕ್ಕಾಚಾರ? ಅಂತಿದ್ದೀರಾ.

ಇಲ್ಲಿದೆ ನೋಡಿ ಪಕ್ಕಾ ಲೆಕ್ಕ!
ಈ 40 ವರ್ಷದ ಲೆಕ್ಕಾಚಾರ ಯಾಕೆ ಅಂದ್ರೆ ಈಗಾಗಲೇ ವಿರಾಟ್ ಕೊಹ್ಲಿ 2023ರ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ 711 ರನ್ ಗಳಿಸಿದ್ದಾರೆ. ಇಂದು ಕೂಡ, ಶತಕೋಟಿ ಭಾರತೀಯರು ಅಂದುಕೊಂಡ ರೀತಿ ವಿರಾಟ್ ಕೊಹ್ಲಿ ಶತಕ ಬಾರಿಸಿದರೆ ಅಲ್ಲಿಗೆ ಒಟ್ಟು 800 ರನ್‌ಗಳ ಗಡಿ ದಾಟುತ್ತಾರೆ. ಆಗ ವಿರಾಟ್ ಕೊಹ್ಲಿ ಅವ್ರು ನಿರ್ಮಿಸುವ ಈ ದಾಖಲೆ ಮುರಿಯಲು ಕನಿಷ್ಠ ಕನಿಷ್ಠ 40 ವರ್ಷ ಬೇಕಾಗುತ್ತೆ.
ಯಾಕಂದ್ರೆ ಸಚಿನ್ ನಿರ್ಮಿಸಿದ್ದ 600 ಕ್ಕೂ ಹೆಚ್ಚು ರನ್ ದಾಖಲೆ ಮುರಿಯಲು 20 ವರ್ಷ ಬೇಕಾಯಿತು, ಹೀಗಿದ್ದಾಗ ವಿರಾಟ್ ಕೊಹ್ಲಿ 800 ರನ್‌ಗಳ ಗಡಿ ದಾಟಿದರೆ ಅದನ್ನ ಮುಂದೆ ಮತ್ತೊಬ್ಬರು ಕ್ರಿಕೆಟ್ ಜಗತ್ತಿನಲ್ಲಿ ಮುರಿಯಲು ಕನಿಷ್ಠ 40 ವರ್ಷ ಬೇಕಾಗುತ್ತದೆ. ಹೀಗಾಗಿ, ಈ ದಾಖಲೆ ನಿರ್ಮಾಣವಾಗಿ ಭಾರತೀಯನ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ಮಿಂಚಲಿ ಎಂದು ಶತಕೋಟಿ ಭಾರತೀಯರು ಆಶಿಸುತ್ತಿದ್ದಾರೆ.












Click it and Unblock the Notifications