Cricket World Cup: 1,248 ಕೋಟಿ ರೂ. ವ್ಯವಹಾರ ನಡೆಯಿತಾ?
ಐಸಿಸಿ ಏಕದಿನ 'ವಿಶ್ವಕಪ್ ಹಬ್ಬ' ಅದ್ಧೂರಿಯಾಗಿ ಶುರುವಾಗಿದೆ. ಅದರಲ್ಲೂ ಈ ಬಾರಿಯ ವಿಶ್ವಕಪ್ ನಡೆಯುತ್ತಿರುವುದು ಭಾರತದಲ್ಲಿ. ಕ್ರಿಕೆಟ್‌ಗೆ ಪೂಜ್ಯನೀಯ ಸ್ಥಾನ ನೀಡಿರುವ ಈ ದೇಶದಲ್ಲಿ ಕ್ರಿಕೆಟ್ ನಡೆಯುತ್ತಿರುವ ಕಾರಣ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದರು. ಇಂದು ಆಸೆ ನೆರವೇರಿದ್ದು, ಇದರ ಜೊತೆ ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ದೊಡ್ಡ ಮಟ್ಟದ ವಹಿವಾಟು ನಡೆದಿರುವುದು ಗೊತ್ತಾಗಿದೆ.
ಅಂದಹಾಗೆ ಕ್ರಿಕೆಟ್ ಎಂಬುದು ಈಗ ಶ್ರೀಮಂತರ ಕ್ರೀಡೆಯಾಗಿದೆ. ಯಾಕಂದ್ರೆ ಅದೊಂದು ಕಾಲಘಟ್ಟದಲ್ಲಿ ಕ್ರಿಕೆಟ್‌ಗೆ ಪ್ರಯೋಜಕರನ್ನು ಹುಡುಕುವುದೇ ಕಷ್ಟವಾಗಿತ್ತು. ಇನ್ನು ಭಾರತ ಎಷ್ಟೋ ಬಾರಿ ಪ್ರಾಯೋಜಕರನ್ನ ಒಪ್ಪಿಸಲು ಪರದಾಡಿದ್ದು ಉಂಟು. ಆದ್ರೆ ಈಗ ಆ ರೀತಿ ಏನಿಲ್ಲ, ಜಾಹೀರಾತು ಕೊಡಲು ದೊಡ್ಡ ದೊಡ್ಡ ಬ್ರ್ಯಾಂಡ್‌ಗಳೇ ಮುಂದೆ ಬರುತ್ತವೆ. ಈ ರೀತಿ ಜಾಹೀರಾತಿಗೆ ಕೋಟಿ ಕೋಟಿ ನೀಡುತ್ತವೆ. ಹಾಗಾದ್ರೆ 2023ರ ವಿಶ್ವಕಪ್ ಟೂರ್ನಿಗಾಗಿ ಹರಿದು ಬಂದ ಪ್ರಾಯೋಜಕತ್ವದ ಹಣ ಎಷ್ಟು ಸಾವಿರ ಕೋಟಿ ಗೊತ್ತಾ?

1,248 ಕೋಟಿ ರೂ. ಮೊತ್ತದ ಡೀಲ್?
ಅಷ್ಟಕ್ಕೂ 20 ಪ್ರಾಯೋಜಕರು & ಪಾಲುದಾರರ ಮೂಲಕ ಈ ಬಾರಿಯ ಕ್ರಿಕೆಟ್ ವಿಶ್ವಕಪ್‌ಗೆ ಸುಮಾರು 1248 ಕೋಟಿ ರೂಪಾಯಿ ಹರಿದು ಬರಲಿದೆ ಎಂದು ಅಂದಾಜು ಮಾಡಲಾಗಿದೆ. ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಪ್ರಕಟಿಸಿದ್ದು, ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಇದು ದೊಡ್ಡ ಮೊತ್ತ ಎನ್ನಬಹುದು. ಹಾಗಾದ್ರೆ ಯಾವೆಲ್ಲಾ ಬ್ರ್ಯಾಂಡ್‌ಗಳ ಮೂಲಕ ಈ ದೊಡ್ಡ ಮೊತ್ತವು ಜಾಹೀರಾತು ಮೂಲಕ ಹರಿದು ಬರಲಿದೆ? ಯಾರ ಪಾಲು ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಪ್ರಮುಖ ಪ್ರಾಯೋಜಕರ ಪಟ್ಟಿ ಇಲ್ಲಿದೆ
ಈಗ ಐಸಿಸಿ ಕ್ರಿಕೆಟ್ ವಿಶ್ವಕಪ್‌ಗೆ ಪ್ರಾಯೋಜಕತ್ವ ಪಡೆದಿರುವ ಪ್ರಮುಖ ಬ್ರ್ಯಾಂಡ್‌ಗಳ ಪೈಕಿ ಎಂಆರ್‌ಎಫ್ ಟಯರ್ಸ್ ಹಾಗೂ ಬುಕಿಂಗ್.ಕಾಂ, ಇಂಡಸ್‌ಲ್ಯಾಂಡ್ ಬ್ಯಾಂಕ್, ಮಾಸ್ಟರ್ ಕಾರ್ಡ್, ಅರಾಮ್ಕೋ, ಎಮಿರೇಟ್ಸ್ ಸೇರಿವೆ. ಈ 6 ಬ್ರ್ಯಾಂಡ್‌ಗಳು 8ರಿಂದ 10 ಮಿಲಿಯನ್ ಡಾಲರ್‌ನಷ್ಟು ಕೊಡುಗೆ ನೀಡಿರಬಹುದು ಎಂದು ಅಂದಾಜು ಮಾಡಲಾಗಿದೆ. ಇದೇ ರೀತಿ ಬೇರೆ ಯಾವ, ಯಾವ ಬ್ರ್ಯಾಂಡ್‌ಗಳು ಇನ್ನೆಷ್ಟು ಕೊಡುಗೆ ನೀಡಿವೆ? ಇದರಿಂದ ಹರಿದು ಬಂದ ಹಣವೆಷ್ಟು?

ಬೀರಾ91, ಪಾಲಿಕ್ಯಾಬ್, ಥಮ್ಸ್ ಅಪ್, ಅಪ್ಸ್‌ಟಾಕ್ಸ್, ನಿಸ್ಸಾನ್, ಒಪ್ಪೋ, ಡಿಪಿ ವರ್ಲ್ಡ್, ಹೀಗೆ ಈ ಬ್ರ್ಯಾಂಡ್‌ಗಳು 6ರಿಂದ 8 ಮಿಲಿಯನ್ ಡಾಲರ್ ಮೌಲ್ಯದ ಪ್ರಾಯೋಜಕತ್ವವನ್ನು ಪಡೆದಿರಬಹುದು ಎಂದು ಈಗ ಅಂದಾಜು ಮಾಡಲಾಗಿದೆ. ರಾಯಲ್ ಸ್ಟಾಗ್, ಡ್ರೀಮ್11, ಜಾಕೋಬ್ಸ್ ಕ್ರೀಕ್, ನಿಯರ್ ಫೌಂಡೇಶನ್, ಫ್ಯಾನ್ ಕ್ರೇಜ್ & ಟೈಕಾ ಕೂಡ ಪಾಲುದಾರಿಕೆ ಪಡೆದಿವೆ. ಹೀಗೆ ಹತ್ತಾರು ಬ್ರ್ಯಾಂಡ್ ಮೂಲಕ ಸುಮಾರು 1,248 ಕೋಟಿ ರೂ. ಮೊತ್ತವು ಪ್ರಾಯೋಜಕತ್ವ ರೂಪದಲ್ಲಿ ಬಂದಿದೆ ಎಂದು ಅಂದಾಜಿಸಲಾಗಿದೆ.
ಕ್ರಿಕೆಟ್ ದೇವರು ಸಚಿನ್‌ಗೆ ಗೌರವ
ಹಾಗೇ ಮತ್ತೊಂದು ಸಂತಸದ ಸುದ್ದಿ ಏನೆಂದರೆ ಸಚಿನ್ ತೆಂಡೂಲ್ಕರ್ ಅವರನ್ನ ಈ ಬಾರಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಜಾಗತಿಕ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಈ ನಿರ್ಧಾರ ಕೂಡ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದ್ದು ಇಂದಿನಿಂದ ಏಕದಿನ ಕ್ರಿಕೆಟ್ ವರ್ಲ್ಡ್ ಕಪ್ ಅದ್ಧೂರಿಯಾಗಿ ಆರಂಭವಾಗಿದೆ. ಹಾಗಾದರೆ ವಿಶ್ವಕಪ್ ಪ್ರಶಸ್ತಿಗೆ ಮುತ್ತಿಡುವ ತಂಡ ಯಾವುದು? ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನಷ್ಟು ದಿನ ಕಾದು ನೋಡಬೇಕಿದೆ.
ಒಟ್ನಲ್ಲಿ ಭಾರತದಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್ ಟೂರ್ನಿ ಅದ್ಧೂರಿಯಾಗಿ, ಸಂಭ್ರಮದಿಂದ ನಡೆಯಲಿ ಎಂಬುದೇ ಎಲ್ಲರ ಆಶಯ. ಬಿಸಿಸಿಐ ಕೂಡ ಇದಕ್ಕೆ ಬೇಕಿರುವ ಎಲ್ಲಾ ತಯಾರಿ ಮಾಡಿಕೊಂಡಿದೆ. ಹಾಗೇ ತವರು ನೆಲದಲ್ಲಿ ಪ್ರಶಸ್ತಿಗೆ ಮತ್ತೊಮ್ಮೆ ಮುತ್ತು ಕೊಡಲು ಭಾರತದ ತಂಡ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಹೀಗಾಗಿ ಭಾರತ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.












Click it and Unblock the Notifications